ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 26 FEBRURARY 2023
SHIMOGA : ವಿಮಾನ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮ, ಶಿವಮೊಗ್ಗದ ಕೆಲವು ರಸ್ತೆಗಳಲ್ಲಿ (Pot Hole) ನಿತ್ಯ ಸಂಚರಿಸುವ ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಇಂತಹ ಕಾರ್ಯಕ್ರಮಗಳು ಆರು ತಿಂಗಳಿಗೊಮ್ಮೆ ನಡೆಯಲಿ. ಗಣ್ಯಾತಿಗಣ್ಯರು ಬರುತ್ತಿರಲಿ ಅನ್ನುತ್ತಿದ್ದಾರೆ.

ವಿಮಾನ ನಿಲ್ದಾಣ ಉದ್ಘಾಟನೆ ಹಿನ್ನೆಲೆ ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿದ್ದ ಗುಂಡಿಗಳೆಲ್ಲ ರಾತ್ರೋರಾತ್ರಿ ಬಂದ್ ಆಗಿವೆ. ಇದು ವಾಹನ ಸವಾರರ ನೆಮ್ಮದಿಗೆ ಕಾರಣವಾಗಿದೆ.
ಯಾವ್ಯಾವ ರಸ್ತೆಯಲ್ಲಿ ಏನೇನಾಗಿದೆ?
ಶಿವಮೊಗ್ಗದ ಹೊಳೆ ಬಸ್ ನಿಲ್ದಾಣದಿಂದ ಎಂ.ಆರ್.ಎಸ್ ಸರ್ಕಲ್ ವರೆಗೆ ರಸ್ತೆಯಲ್ಲಿ ಭಾರಿ ಗಾತ್ರದ ಗುಂಡಿಗಳಿದ್ದವು. ಇನ್ನು ರಸ್ತೆಯ ಅಂಚಿನಲ್ಲಿ ರಾಶಿ ಮಣ್ಣು ಇತ್ತು. ಹಾಗಾಗಿ ಮೈಯ್ಯಲ್ಲ ಕಣ್ಣಾಗಿಟ್ಟುಕೊಂಡು ವಾಹನ ಚಾಲನೆ ಮಾಡುವುದು ಇಲ್ಲಿ ಅನಿವಾರ್ಯವಾಗಿತ್ತು. ವಿಮಾನ ನಿಲ್ದಾಣ ಉದ್ಘಾಟನೆ ಹಿನ್ನೆಲೆ ದೊಡ್ಡ ಗುಂಡಿಗಳಿಗೆ (Pot Hole) ಡಾಂಬರ್ ಹಾಕಿ ಮುಚ್ಚಲಾಗಿದೆ. ಲೋಡ್ ಗಟ್ಟಲೆ ಮಣ್ಣನ್ನು ಕ್ಲೀನ್ ಮಾಡಿಸಲಾಗಿದೆ.

ಶಿವಮೊಗ – ಕಾಚಿಕನಟ್ಟೆ ರಸ್ತೆಯಲ್ಲಿಯು ಯಮ ಸ್ವರೂಪಿ ಗುಂಡಿಗಳಿದ್ದವು. ಈಗ ಗುಂಡಿಗಳು ಮಾಯವಾಗಿದೆ. ಸಂತೆ ಕಡೂರಿನಿಂದ ಕಾಚಿನಕಟ್ಟೆವರೆಗೆ ರಸ್ತೆ ಹೊಳಪು ಪಡೆದಿದೆ. ಅಷ್ಟೆ ಅಲ್ಲ, ಅಲ್ಲಲ್ಲಿ ಹೊಸ ಸೈನ್ ಬೋರ್ಡುಗಳು ಕೂಡ ಬಂದಿವೆ. ಇನ್ನು ಮಂಡೇನಕೊಪ್ಪ ರಸ್ತೆಯಲ್ಲಿಯೂ ಅಲ್ಲಲ್ಲಿ ಗುಂಡಿಗಳ ಬಾಯಿ ಬಂದ್ ಮಾಡಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಗೆ 50 ವರ್ಷದ ಹಿಂದೆಯೇ ವಿಮಾನ ಬರುತ್ತಿತ್ತು, ಎಲ್ಲಿ ಲ್ಯಾಂಡ್ ಆಗುತ್ತಿದ್ದವು ಗೊತ್ತಾ?

ಹಲವು ತಿಂಗಳಿಂದ ಇದ್ದವು ಗುಂಡಿ
ಈ ರಸ್ತೆಗಳಲ್ಲಿ ಹಲವು ತಿಂಗಳಿಂದ ಗುಂಡಿಗಳಿದ್ದವು. ಇವುಗಳಿಂದಾಗ ಅಪಘಾತಗಳು ಸಂಭವಿಸಿ ಹಲವರು ಗಾಯಗೊಂಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿಯು ವರದಿಯಾಗಿತ್ತು. ಆಗೆಲ್ಲ ಗುಂಡಿಗೆ ಮಣ್ಣು ಹಾಕುವ, ಅವೈಜ್ಞಾನಿಕವಾಗಿ ಸಿಮೆಂಟ್ ಭರ್ತಿ ಮಾಡಿಸಲಾಗುತ್ತಿತ್ತು. ಈಗ ಗಣ್ಯಾತಿಗಣ್ಯರು ಬರುವ ಹಿನ್ನೆಲೆ ಗುಂಡಿಗಳಿಗೆ ಡಾಂಬರ್ ಹಾಕಲಾಗಿದೆ.
ಇದನ್ನೂ ಓದಿ – ವಿಮಾನ ನಿಲ್ದಾಣದ ಗೇಟ್ ಮುಂದೆ ಜಾತ್ರೆ ವಾತಾವರಣ, ಸೆಲ್ಫಿ, ಫೋಟೊಗೆ ಮುಗಿಬಿದ್ದ ಜನ


CLICK HERE TO JOIN SHIVAMOGGA LIVE WHATSAPP GROUP




