ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 28 NOVEMBER 2024
ಶಿವಮೊಗ್ಗ : ನಗರದ ಹರಿಗೆ ಸಮೀಪ ವಾಹನ ಸವಾರರಿಗೆ ಪಾತಾಳ ದರ್ಶನವಾಗುತ್ತಿದೆ. ಸ್ವಲ್ಪ ಯಾಮಾರಿದರೆ ಈ ಕೂಪಕ್ಕೆ ಉರುಳಿ (Pot Holes) ಇಹಲೋಕ ತೊರೆಯುವಂತಹ ಸ್ಥಿತಿ ಇದೆ.
ಶಿವಮೊಗ್ಗ – ಭದ್ರಾವತಿ ಹದ್ದಾರಿಯಲ್ಲಿ ಹರಿಗೆ ಸಮೀಪ ಆಳವಾದ ಗುಂಡಿಗಳಾಗಿವೆ. ದ್ವಿಚಕ್ರ ವಾಹನ ಸವಾರರ ಪಾಲಿಗಂತು ಈ ಗುಂಡಿಗಳು ಮೃತ್ಯು ಕೂಪವಾಗಿಬಿಟ್ಟಿವೆ. ಅಪ್ಪಿತಪ್ಪಿ ವೇಗವಾಗಿ ಬಂದು ಗುಂಡಿಗಳ ದಿಸೆಯಿಂದಾಗಿ ಬಿದ್ದರೆ ಸಾವು ಗ್ಯಾರಂಟಿ.
ಧೂಳು, ಗುಂಡಿಗಳ ನಡುವೆ ಸೆಣೆಸಾಟ
ಎರಡು ನಗರಗಳ ನಡುವೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈಗಾಗಲೆ ಈ ಮಾರ್ಗದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. ಮಲವಗೊಪ್ಪದಿಂದ ಭದ್ರಾವತಿ ತಲುಪುವವರೆಗೆ ರಸ್ತೆಯಲ್ಲಿ ಧೂಳು ಕುಡಿಯುತ್ತಲೆ ಓಡಾಡಬೇಕಿದೆ. ಈ ಮಧ್ಯೆ ಹರಿಗೆ ಸಮೀಪ ಇರುವ ಬೃಹತ್ ಗುಂಡಿಗಳು ಜೀವ ಕಸಿಯುವಷ್ಟು ಭೀಕರವಾಗಿವೆ.
ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಓಡಾಡುವವರೆ ಹುಷಾರ್, ಪ್ರಾಣ ತೆಗೆಯಲು ಕಾಯುತ್ತಿವೆ ಕರೆಂಟ್ ಕಂಬಗಳು
ಭದ್ರಾವತಿ ಕಡೆಯಿಂದ ಬರುವಾಗ ಮಲವಗೊಪ್ಪದ ಬಳಿ ಗುಂಡಿಗಳನ್ನೆಲ್ಲ ಬಂದ್ ಮಾಡಲಾಗಿದೆ. ಅಲ್ಲಿಂದ ಮುಂದೆ ಸ್ವಲ್ಪ ದೂರದವರೆಗೆ ರಸ್ತೆ ಚನ್ನಾಗಿದೆ. ಇದೇ ಕಲ್ಪನೆಯೊಂದಿಗೆ ಚಾಲಕರು ವೇಗ ಹೆಚ್ಚಿಸಿದರೆ ಹರಿಗೆ ಬಳಿ ದಿಢೀರ್ ಬೃಹತ್ ಗುಂಡಿಗಳು ಎದುರಾಗಲಿವೆ. ವಾಹನಗಳನ್ನು ನಿಯಂತ್ರಿಸಲು ಆತುರ ತೋರಿದರೆ ಅಪಘಾತ ನಿಶ್ಚಿತ. ಹರಿಗೆ ಬಳಿ ರಸ್ತೆಯ ಎರಡು ಬದಿಯಲ್ಲು ಇದೇ ರೀತಿಯ ಗುಂಡಿಗಳಿವೆ.
ಪಾತಾಳ ದರ್ಶನ ಮಾಡಿಸುತ್ತಿರುವ ಈ ಗುಂಡಿಗಳನ್ನು ಅಧಿಕಾರಿಗಳು ತಕ್ಷಣ ಬಂದ್ ಮಾಡಿಸಬೇಕಿದೆ. ಇಲ್ಲವಾದಲ್ಲಿ ದೊಡ್ಡ ಅನಾಹುತ ನಿಶ್ಚಿತ.
Pot Holes
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422