| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
SHIVAMOGGA LIVE NEWS
SHIMOGA | ಶಿವಮೊಗ್ಗ – ಭದ್ರಾವತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿ ರಾಶಿ ಗುಂಡಿಗಳಿವೆ (POT HOLES). ಅದರೆ ಹರಿಗೆ ಸಮೀಪ ಕೆಎಸ್ಆರ್’ಟಿಸಿ ಬಸ್ ಅಪಘಾತವಾದ ಸ್ಥಳದಲ್ಲಿ ಮಾತ್ರ ಗುಂಡಿಗಳನ್ನು ಬಂದ್ ಮಾಡಲಾಗಿದೆ.
.png)
ತಮಿಳುನಾಡಿನ ಕೊಯಮತ್ತೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್ಆರ್’ಟಿಸಿ ಬಸ್ಸು ಹರಿಗೆ ನಿಸರ್ಗ ನರ್ಸರಿ ಮುಂಭಾಗ ಭಾನುವಾರ ಅಪಘಾತಕ್ಕಿಡಾಗಿತ್ತು. ಆಕ್ಸಲ್ ತುಂಡಾಗಿ, ಚಕ್ರಗಳು ಬೇರ್ಪಟ್ಟು, ಬಸ್ಸು ಡಿವೈಡರ್ ಮೇಲೆ ಹತ್ತಿತ್ತು. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಉಂಟಾಗಿಲ್ಲ.
ಚಾಲಕನ ವಿರುದ್ಧ ಕೇಸ್
ಘಟನೆ ಸಂಬಂಧ ಬಸ್ ಚಾಲಕ ಮೇಘರಾಜ್ ವಿರುದ್ಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ಗುಂಡಿ ಹತ್ತಿಸಿದ್ದೆ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ಚಾಲಕನನ್ನು ಮಾತ್ರ ಹೊಣೆಯಾಗಿಸಲಾಗಿದೆ.
ಅಪಘಾತವಾದಲ್ಲಿ ಮಾತ್ರ ಗುಂಡಿ ಬಂದ್
ಹರಿಗೆ ಸಮೀಪ ಬಸ್ ಅಪಘಾತದ ಸ್ಥಳದಲ್ಲಿ ಇದ್ದ ದೊಡ್ಡ ಗುಂಡಿಗಳನ್ನು (POT HOLES) ದಿಢೀರ್ ಬಂದ್ ಮಾಡಲಾಗಿದೆ. ಸೋಮವಾರ ಬೆಳಗ್ಗೆಯಿಂದಲೇ ಈ ಗುಂಡಿಗಳಿಗೆ ಡಾಂಬಾರ್ ತುಂಬಿ, ರೋಲರ್ ಹೊಡೆಸಲಾಗಿದೆ. ಆದರೆ ಉಳಿದ್ಯಾವ ಗುಂಡಿಗಳನ್ನು ಅಧಿಕಾರಿಗಳು ಬಂದ್ ಮಾಡಿಸಿಲ್ಲ. ಅಪಘಾತವಾದರಷ್ಟೆ ಅಲ್ಲಿರುವ ಗುಂಡಿಗಳನ್ನು ಬಂದ್ ಮಾಡಿಸಲಾಗುತ್ತದೆಯೇ ಎಂದು ಜನರು ಯೋಚಿಸುವಂತಾಗಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗ – ಭದ್ರಾವತಿ ನಡುವೆ ಇರುವುದು ಹೈವೆ ರಸ್ತೆನೋ, ಯಮಲೋಕದ ದಾರಿನೋ?

ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಶಿವಮೊಗ್ಗದಲ್ಲಿ ಪೊಲೀಸರ ದಾಳಿ, ಸಾಗರದ ವ್ಯಕ್ತಿ ಅರೆಸ್ಟ್, ಕಾರಣವೇನು?
- ದಿನ ಪಂಚಾಂಗ, ಇಂದಿನ ರಾಶಿ ಭವಿಷ್ಯ – ಓದಲು ಇಲ್ಲಿ ಕ್ಲಿಕ್ ಮಾಡಿ
- ಭದ್ರಾವತಿಯಲ್ಲಿ ರೈಲಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಶಿವಮೊಗ್ಗದಲ್ಲಿ ಸಾವು
- ಮಹಿಳೆಯರಿಗೆ ಗುಡ್ ನ್ಯೂಸ್, ಶಿವಮೊಗ್ಗದಲ್ಲಿ ನಾಳೆ ಉತ್ಸವ್ ಮೇಳ, ಏನೇನೆಲ್ಲ ಇರುತ್ತೆ?
- ಅಡಿಕೆ ಧಾರಣೆ | 11 ಡಿಸೆಂಬರ್ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?
- ಶಿವಮೊಗ್ಗದಲ್ಲಿ ನಾಳೆ ಕಂದಾಯೋತ್ಸವ, ಎರಡು ದಿನ ಏನೇನು ಕಾರ್ಯಕ್ರಮ ನಡೆಯಲಿದೆ?
- ಮರದಿಂದ ಬಿದ್ದು ಕಾಳಿಂಗ ಸರ್ಪ ಸಾವು, ಎಲ್ಲಿ? ಹೇಗಾಯ್ತು?
- ಭದ್ರಾವತಿ ಆಕಾಶವಾಣಿಯಲ್ಲಿ ಹೆಲ್ತ್ ಹಿಂಟ್ಸ್, ಬದುಕು ಜಟಕಾಬಂಡಿ ಕಾರ್ಯಕ್ರಮ, ಟೈಮಿಂಗ್ ಏನು?
![]()