ಶಿವಮೊಗ್ಗದ ಈ ಹೆದ್ದಾರಿಯಲ್ಲಿ ಕಣ್ಣು ಮುಚ್ಚಿಕೊಂಡೆ ಬೈಕ್‌ ಓಡಿಸಬೇಕು, ಎಲ್ಲಿ? ಏನು ಕಾರಣ?

ಶಿವಮೊಗ್ಗ: ಸಿಮೆಂಟ್‌ ಮತ್ತು ಜೆಲ್ಲಿ ಮಿಕ್ಸ್‌ ಮಾಡಿ ರಸ್ತೆ ಗುಂಡಿ (Pot Holes) ಮುಚ್ಚಿದ್ದು ಶಿವಮೊಗ್ಗದಲ್ಲಿ ವಾಹನ ಸವಾರರಿಗೆ ತಲೆನೋವು ತಂದಿದೆ. ಗುಂಡಿ ಇದ್ದಾಗಲೇ ರಸ್ತೆಯಲ್ಲಿ ಸಂಚಾರ ಚೆನ್ನಾಗಿತ್ತು ಎಂಬಂತಾಗಿದೆ. (ಈ ಸುದ್ದಿಯನ್ನು ಇನ್ನು 73 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಎದುರು ಬಿ.ಹೆಚ್‌.ರಸ್ತೆಯಲ್ಲಿನ ದುಸ್ಥಿತಿ. ಈ ರಸ್ತೆಯ ಉದ್ದಕ್ಕು ನಾನಾ ಗಾತ್ರದ ಆಳವಾದ ಗುಂಡಿಗಳಾಗಿದ್ದವು. ಇವುಗಳನ್ನು ಶಾಶ್ವತವಾಗಿ ಬಂದ್‌ ಮಾಡುವ ಬದಲು ಸಿಮೆಂಟ್‌ ಮತ್ತು ಜೆಲ್ಲಿ ಮಿಕ್ಸ್‌ ಮಾಡಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದು ವಾಹನ ಸವಾರರ ಪಾಲಿಗೆ ಸಮಸ್ಯೆ ಹೆಚ್ಚಳ ಮಾಡಿದೆ.

ಕಣ್‌ ಬಿಡಲು ಆಗಲ್ಲ, ಜೀವ ಭಯ ತಪ್ಪಿಲ್ಲ

ಬಿ.ಹೆಚ್‌.ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬಸ್ಸು, ಲಾರಿಗಳು ನಿರಂತರವಾಗಿ ಓಡಾಡುತ್ತಲೆ ಇರುತ್ತವೆ. ಇಂತಹ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಲು ಸಿಮೆಂಟ್‌ ಮತ್ತು ಜೆಲ್ಲಿ ಹಾಕಲಾಗಿದೆ. ಜೆಲ್ಲಿಯು ರಸ್ತೆ ತುಂಬೆಲ್ಲ ಹರಡಿಕೊಂಡಿದೆ. ಇನ್ನು, ಯಾವುದೇ ವಾಹನ ಇದರ ಮೇಲೆ ಸಂಚರಿಸಿದರೆ ಧೂಳು ಹಾರುತ್ತಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಜೀವ ಭಯ ಮೂಡಿಸುತ್ತಿದೆ.

Pot-holes-filled-with-cement-and-jelly-stones-at-vidyanagara-in-shimoga

ಗುಂಡಿಗೆ ಸಿಮೆಂಟ್‌, ಜೆಲ್ಲಿ ಹಾಕಿದ್ದಾರೆ. ವಾಹನಗಳು ಹೋದಾಗ ಧೂಳು ಹಾರುತ್ತಿದೆ. ಈ ವಾಹನಗಳ ಹಿಂದೆ ಬೈಕಿನಲ್ಲಿ ಹೋಗುವಾಗ ಕಣ್ಣು ಬಿಡಲು ಆಗುವುದಿಲ್ಲ. ಇದಕ್ಕಿಂತಲು ಗುಂಡಿ ಇದ್ದಾಗಲೆ ಚನ್ನಾಗಿತ್ತು.

  • ಪ್ರಶಾಂತ್‌, ಸ್ಥಳೀಯ

RED-LINE-

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಗುಂಡಿಗಳನ್ನು ಶಾಶ್ವತವಾಗಿ ಮುಚ್ಚುವತ್ತ ಅಧಿಕಾರಿಗಳು ಗಮನ ವಹಿಸಬೇಕು. ಈ ತಾತ್ಕಾಲಿಕ ಪರಿಹಾರ ವಾಹನ ಸವಾರರ ಜೀವಕ್ಕೆ ಕುತ್ತು ತರುವಂತಿದೆ.

Pot-holes-filled-with-cement-and-jelly-stones-at-vidyanagara-in-shimoga
ವಾಹನಗಳು ಹೋದಾಗ ಮೇಲೇಳುವ ಧೂಳು.
Pot-holes-filled-with-cement-and-jelly-stones-at-vidyanagara-in-shimoga
ರಸ್ತೆಯ ತುಂಬೆಲ್ಲ ಹರಡಿದ್ದ ಜೆಲ್ಲಿ.

ಇದನ್ನೂ ಓದಿ » ಆಗುಂಬೆ ಘಾಟಿ, ಕಾರ್ಯಾಚರಣೆ ಪೂರ್ಣ, ಈಗ ವಾಹನಗಳು ಓಡಾಡಬಹುದಾ?

JNNCE-Admission-Advt-scaled

road repair, potholes, road safety, traffic, commuters, local news, infrastructure, Karnataka, Shivamogga,

Pot-holes-filled-with-cement-and-jelly-stones-at-vidyanagara-in-shimoga

Leave a Comment