ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ಲೈವ್.ಕಾಂ | SHIMOGA NEWS | 30 DECEMBER 2020
ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆ ಹಿನ್ನೆಲೆ, ಶಿವಮೊಗ್ಗ ಸಿಟಿ ಸಂಪೂರ್ಣ ಕೇಸರಿಮಯವಾಗಿದೆ. ನಗರದ ಎಲ್ಲಾ ಸರ್ಕಲ್‍ಗಳು, ರಸ್ತೆಗಳಲ್ಲಿ ಕೇಸರಿ ಧ್ವಜ, ಬಂಟಿಂಗ್ಸ್‌ಗಳಿಂದ ಅಲಂಕೃತವಾಗಿದೆ. ಈ ನಡುವೆ ನಗರದ ಕೆಲವು ರಸ್ತೆಗಳಲ್ಲಿದ್ದ ಗುಂಡಿಗಳು ಮಾಯವಾಗಿದೆ. ವಾಹನ ಸವಾರರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಕೇಸರಿಮಯ ಶಿವಮೊಗ್ಗ ಸಿಟಿ
ಶಿವಮೊಗ್ಗದ ಗೋಪಿ ಸರ್ಕಲ್, ಎ.ಎ.ಸರ್ಕಲ್, ಅಶೋಕ ಸರ್ಕಲ್, ಎಂಆರ್‌ಎಸ್ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಸೇರಿದಂತೆ ಎಲ್ಲೆಡೆಯೂ ಕೇಸರಿ ಬಟ್ಟೆ, ಬಿಜೆಪಿ ಚಿಹ್ನೆ ಇರುವ ಬಂಟಿಂಗ್ಸ್‌ಗಳನ್ನು ಕಟ್ಟಿ ಅಲಂಕಾರ ಮಾಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಬಿಜೆಪಿಯ ಧ್ವಜಗಳನ್ನು ಕಟ್ಟಲಾಗಿದೆ. ಶಿವಮೊಗ್ಗ ನಗರ ಸಂಪೂರ್ಣ ಕೇಸರಿಮಯವಾಗಿದೆ.
ಇದನ್ನೂ ಓದಿ | ‘ಗೋ ಮಾಂಸ ತಿನ್ನೋರಿಗೆ, ಪಾಕ್ ಜಿಂದಾಬಾದ್ ಅನ್ನೋರಿಗೆ ಗ್ರಾಮ ಪಂಚಾಯಿತಿಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ’
ರಸ್ತೆಗಳಲ್ಲಿ ಇದ್ದ ಗುಂಡಿಗಳು ಮಾಯ
ಬಿಜೆಪಿ ಕಾರ್ಯಕಾರಿಣಿ ಹಿನ್ನೆಲೆ ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಇದ್ದ ಗುಂಡಿಗಳು ದಿಢೀರ್ ಮಾಯವಾಗಿವೆ. ಕುವೆಂಪು ರಸ್ತೆಯಲ್ಲಿ ಸಾಲು ಸಾಲು ಗುಂಡಿಗಳಿದ್ದವು. ಬುಧವಾರ ಮಧ್ಯಾಹ್ನದಿಂದ ಗುಂಡಿ ಮುಚ್ಚುವ ಕಾರ್ಯಾಚರಣೆ ನಡೆಸಲಾಗಿದೆ. ಈಗ ಕುವೆಂಪು ರಸ್ತೆ ಗುಂಡಿ ಮುಕ್ತ ರಸ್ತೆಯಾಗಿದೆ. ಬಿಜೆಪಿ ಕಾರ್ಯಕಾರಿಣಿಗೆ ಬರುವ ಮುಖಂಡರು ಈ ರಸ್ತೆಯಲ್ಲಿ ಓಡಾಡುತ್ತಾರೆ. ಹಾಗಾಗಿ ಗುಂಡಿಗಳನ್ನು ಬಂದ್ ಮಾಡಲಾಗಿದೆ.
ಇದನ್ನೂ ಓದಿ | ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ ತರಬೇತಿ, ಹೇಗಿರತ್ತೆ? ಏನೆಲ್ಲ ತಿಳಿಸಲಾಗುತ್ತೆ?
ಮುಖ್ಯ ರಸ್ತೆಗಳಲ್ಲಿ ಹಾಗೆ ಇವೆ ಗುಂಡಿಗಳು
ಶಿವಮೊಗ್ಗ ನಗರವನ್ನು ಗುಂಡಿ ಮುಕ್ತ ಮಾಡುವುದೆ ಆಗಿದ್ದರೆ, ಪ್ರಮುಖ ಕಡೆ ಇರುವ ದೊಡ್ಡ ದೊಡ್ಡ ಗುಂಡಿಗಳನ್ನು ಬಂದ್ ಮಾಡಬಹುದಿತ್ತು. ಎಂಆರ್‌ಎಸ್ ಸರ್ಕಲ್, ವಿದ್ಯಾನಗರದ ಮಹಾದೇವಿ ಟಾಕೀಸ್ ಸಮೀಪ ಬಿ.ಹೆಚ್.ರಸ್ತೆಯಲ್ಲಿ ದೊಡ್ಡ ಗುಂಡಿಗಳಿವೆ, ತುಂಗಾ ಸೇತುವೆ ಮೇಲೆ, ಬಾಲರಾಜ್ ಅರಸ್ ರಸ್ತೆಯ ದುರ್ಗಾ ಕಾಂಪ್ಲೆಕ್ಸ್ ಎದುರು ಸೇರಿದಂತೆ ವಿವಿಧೆಡೆ ರಸ್ತೆಗಳಲ್ಲಿ ದೊಡ್ಡ ಗುಂಡಿಗಳಿವೆ. ಇವುಗಳನ್ನು ಮುಚ್ಚುವತ್ತ ಅಧಿಕಾರಿಗಳು ಚಿತ್ತ ನೆಟ್ಟಿಲ್ಲ. ಹಲವು ಬಡಾವಣೆಗಳಲ್ಲಿನ ರಸ್ತೆ ಮೇಲೆ ಡಾಂಬಾರ್‍ಗಿಂತಲೂ ಗುಂಡಿಗಳೇ ಹೆಚ್ಚು ಕಾಣಿಸುತ್ತಿವೆ.
ಸರ್ಕಿಟ್ ಹೌಸ್ ಮುಂದೆ ಕ್ಲೀನ್ ಕ್ಲೀನ್
ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರು, ಕೇಂದ್ರ ಮತ್ತು ಬಿಜೆಪಿಯ ಮುಖಂಡರು ವಿಶೇಷ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಶಿವಮೊಗ್ಗದ ಪ್ರವಾಸಿ ಮಂದಿರ, ಪ್ರತಿಷ್ಠಿತ ಹೊಟೇಲ್‍ಗಳಲ್ಲಿ ಇವರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆ ಭಾಗದಲ್ಲಿ ಬರುವ ಫುಟ್‍ಪಾತ್‍ಗಳು, ರಸ್ತೆಗಳನ್ನು ಕ್ಲೀನ್ ಮಾಡಿಸಲಾಗಿದೆ.
ಆರು ತಿಂಗಳಿಗೊಮ್ಮೆ ಇಂತವು ನಡೆಯಲಿ
ಶಿವಮೊಗ್ಗ ಸಿಟಿಯ ಪ್ರಮುಖ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳಿವೆ. ಸ್ಮಾರ್ಟ್ ಸಿಟಿ ಕಾಮಗಾರಿ ನೆಪದಲ್ಲಿ ಕೆಲವು ರಸ್ತೆಗಳಲ್ಲಿ ಅಗೆದು ಗುಂಡಿಗಳನ್ನು ಸೃಷ್ಟಿಸಿ, ಹಾಗೆ ಬಿಡಲಾಗಿದೆ. ಇದು ವಾಹನ ಸವಾರರಿಗೆ ದುಸ್ವಪ್ನದಂತೆ ಕಾಡುತ್ತಿವೆ. ಧೂಳಿನಿಂದಾಗಿ ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಬಿಜೆಪಿ ಮುಖಂಡರು ಭೇಟಿಯ ಹಿನ್ನೆಲೆ ಅವರು ಸಂಚರಿಸುವ ರಸ್ತೆಗಳಲ್ಲಿ ಮಾತ್ರ ಗುಂಡಿ ಮುಚ್ಚಲಾಗಿದೆ. ಆಗಿಂದಾಗ್ಗೆ ಇಂತಹ ಸಭೆಗಳು ನಗರದ ವಿವಿಧೆಡೆ ನಡೆಯಲಿ, ಪ್ರಮುಖರು ನಗರಕ್ಕೆ ಭೇಟಿ ನೀಡುತ್ತಿರಲಿ, ಆಗಲಾದರೂ ಶಿವಮೊಗ್ಗ ರಸ್ತೆಗಳು ಗುಂಡಿಮುಕ್ತವಾಗಿ ಉಳಿದುಕೊಳ್ಳುತ್ತವೆ ಅನ್ನುತ್ತಿದ್ದಾರೆ ಸಾರ್ವಜನಿಕರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]