ಅರ್ಧಕ್ಕರ್ಧ ಶಿವಮೊಗ್ಗ ತಾಲೂಕಿನಲ್ಲಿ ಜೂ.11ರಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್‌ ಇರಲ್ಲ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 9 JUNE 2023

SHIMOGA : ಜೂ.11ರಂದು ನಗರ ಮತ್ತು ತಾಲೂಕಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ರಿಪೇರಿ 1 – ಮಂಡ್ಲಿ

ನಗರ ಉಪ ವಿಭಾಗ-2ರ ಘಟಕ-2,5,6 ರ ವ್ಯಾಪ್ತಿಯಲ್ಲಿನ ಮಂಡ್ಲಿ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆಯ ನಡೆಯಲಿದೆ. ಅಲ್ಲದೆ ಸ್ಮಾರ್ಟ್‍ಸಿಟಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಶಿವಮೊಗ್ಗ ನಗರದ ವಿವಿಧೆಡೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

power cut graphics

ಎಲ್ಲೆಲ್ಲಿ ಕರೆಂಟ್‌ ಇರಲ್ಲ?

ಪೀಯರ್ ಲೈಟ್, ಪೇಪರ್ ಪ್ಯಾಕೇಜ್, ಮಂಡ್ಲಿ ಕೈಗಾರಿಕಾ ಪ್ರದೇಶ, ಕೆ.ಆರ್ ವಾಟರ್ ಸಪ್ಲೈ, ಗೋಪಿಶೆಟ್ಟಿಕೊಪ್ಪ, ಜಿ.ಎಸ್ ಕ್ಯಾಸ್ಟಿಂಗ್ ಫ್ಯಾಕ್ಟರಿ, ಸಿದ್ದೇಶ್ವರ ಸರ್ಕಲ್, ತುಂಗಾನಗರ ಆಸ್ಪತ್ರೆ, ವೈಷ್ಣವಿ ಲೇಔಟ್, ಭವಾನಿ ಲೇಔಟ್, ಗದ್ದೇಮನೆ ಲೇಔಟ್, ಚಾಲುಕ್ಯನಗರ, ಕೆಎಚ್‍ಬಿ ಕಾಲೂನಿ, ಮೇಲಿನ ಮತ್ತು ಕೆಳಗಿನ ತುಂಗಾನಗರ, ಪದ್ಮ ಟಾಕೀಸ್, ಮಂಜುನಾಥ ಬಡಾವಣೆ, ಹಳೇ ಗೋಪಿಶೆಟ್ಟಿಕೊಪ್ಪ, ಮಲ್ಲಿಕಾರ್ಜುನ ಬಡಾವಣೆ, ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಎನ್.ಟಿ ರಸ್ತೆ, ಬಿ.ಎಚ್ ರಸ್ತೆ, ಒ.ಟಿ ರಸ್ತೆ, ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ.

ಊರುಗಡೂರು, ಸುಳೇಬೈಲು ಮತ್ತು ಸುತ್ತ ಮುತ್ತಲಿನ ಪ್ರದೇಶ, ಜೆ.ಸಿ ನಗರ, ಬಿ.ಹೆಚ್ ರಸ್ತೆ, ಬುದ್ಧ ನಗರ, ಅಮೀರ್ ಅಹಮದ್ ಸರ್ಕಲ್, ಆರ್.ಎಂ.ಎಲ್ ನಗರ, ಭಾರತಿಕಾಲೋನಿ, ದುರ್ಗಿಗುಡಿ, ಸವಾರ್ ಲೈನ್ ರಸ್ತೆ, ಪಂಚವಟಿ ಕಾಲೋನಿ, ಮಂಜುನಾಥ ಬಡಾವಣೆ, ಖಾಜಿ ನಗರ, ಟಿಪ್ಪು ನಗರ, ಗಾರ್ಡನ್ ಏರಿಯಾ, ನೆಹರು ರಸ್ತೆ, ಮಿಳಘಟ್ಟ, ಆನಂದ ರಾವ್ ಬಡಾವಣೆ, ಹರಕೆರೆ, ನ್ಯೂಮಂಡ್ಲಿ, ಹಳೇ ಮಂಡ್ಲಿ, ಗಂಧರ್ವ ನಗರ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಗಜಾನನ ಗ್ಯಾರೇಜ್, ಮಂಜುನಾಥ ರೈಸ್ ಮಿಲ್, ಬೆನಕೇಶ್ವರ ರೈಸ್ ಮಿಲ್, ಗಾಂಧಿ ಬಜಾರ್, ಕುಂಬಾರ ಗುಂಡಿ, ಬಿಬಿ ರಸ್ತೆ, ಕೆ,ಆರ್ ಪುರಂ, ಸೀಗೆಹಟ್ಟಿ.

ಇದನ್ನೂ ಓದಿ – ಶಿವಮೊಗ್ಗ ನಗರದಲ್ಲಿ 2 ದಿನ ಕುಡಿಯುವ ನೀರು ಬರುವುದಿಲ್ಲ, ಕಾರಣವೇನು? ಯಾವ್ಯಾವ ದಿನ?

ಮುರಾದ್ ನಗರ, ಸವಾಯಿ ಪಾಳ್ಯ, ಕುರುಬರ ಪಾಳ್ಯ, ಇಮಾಮ್ ಬಡಾ, ಟಿ.ಎಸ್,ಆರ್ ರಸ್ತೆ, ರವಿವರ್ಮ ಬೀದಿ, ಮಾಕಮ್ಮನ ಕೇರಿ, ಆಜಾದ್ ನಗರ ಲಾಲ್ ಬಂದರ್ ಕೇರಿ, ಇಲಿಯಾಸ್ ನಗರ 1ನೇ ಕ್ರಾಸ್‍ನಿಂದ 14ನೇ ಕ್ರಾಸ್, 100 ಅಡಿ ರಸ್ತೆ, ಫಾರೂಕ್ಯಾ ಶಾದಿಮಹಲ್, ಇಲಿಯಾಸ್ ನಗರ ಮಂಡಕ್ಕಿ ಭಟ್ಟಿ, ಟಿಪ್ಪುನಗರ, ಮಂಜುನಾಥ ಬಡಾವಣೆ, ಖಾಜಿ ನಗರ 80 ಅಡಿ ರಸ್ತೆ, ಕಾಮತ್ ಲೇಔಟ್, ಅಣ್ಣಾನಗರ, ಮಲ್ಲಿಕಾರ್ಜುನ ಬಡಾವಣೆ, ಮಂಜುನಾಥ ಬಡಾವಣೆ, ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಎಫ್-05-ಗಾಜನೂರು ಗ್ರಾಮಾಂತರ ಪ್ರದೇಶ, ಎಫ್-08-ರಾಮೇನಕೊಪ್ಪ ಗ್ರಾಮಾಂತರ ಪ್ರದೇಶ. ಎಫ್-18-ಹೊಸಳ್ಳಿ, ಎಫ್-06 ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ. ಎಫ್-17-ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್ ಹಾಗೂ ಹನುಮಂತಾಪುರ, ಶರಾವತಿ ನಗರ, ಶಾರದ ಕಾಲೋನಿ, ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್‍ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ರಿಪೇರಿ 2 – ಮಂಡ್ಲಿ

ಮಂಡ್ಲಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಹಲವು ಗ್ರಾಮಗಳಲ್ಲಿ ಜೂ.11 ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ ಕರೆಂಟ್‌ ಇರಲ್ಲ?

ಹೊಸಳ್ಳಿ, ರಾಮೇನಕೊಪ್ಪ, ಕಲ್ಲೂರು, ಅಗಸವಳ್ಳಿ, ಮತ್ತೂರು, ಲಕ್ಷ್ಮೀಪುರ, ಹೊನ್ನಾಪುರ, ವೀರಾಪುರ, ಈಚಲವಾಡಿ, ಹಾಯ್‍ಹೊಳೆ, ಪುರದಾಳು, ಬೆಳ್ಳೂರು, ಬಸವಾಪುರ, ಭಾರತಿನಗರ, ಅನುಪಿನಕಟ್ಟೆ, ಗೋವಿಂದಾಪುರ, ಹನುಮಂತಾಪುರ, ಗಾಂಧಿನಗರ, ಖಾನೆಹಳ್ಳ, ಭೋವಿಕಾಲೋನಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

ರಿಪೇರಿ 3 – ಮಾಚೇನಹಳ್ಳಿ

ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹೊಸದಾಗಿ 110 ಕೆವಿ ಮಾರ್ಗ ಹಾಗೂ ಪರಿವರ್ತಕ ಚಾಲನೆಗೊಳಿಸುವ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಮಾರ್ಗದಿಂದ ವಿದ್ಯುತ್ ಸರಬರಾಜು ಪಡೆಯುವ ವಿವಿಧ ಗ್ರಾಮಗಳಲ್ಲಿ ಜೂ.11 ರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ ಕರೆಂಟ್‌ ಇರಲ್ಲ?

ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಜಯಂತಿಗ್ರಾಮ, ಕಿಯೊನಿಕ್ಸ್ ಐ ಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ ಕಾಲೋನಿ, ನವುಲೆ ಬಸವಾಪುರ, ಹಾತಿಕಟ್ಟೆ ಹೊನ್ನವಿಲೆ, ಅಮರಾವತಿ ಕ್ಯಾಂಪ್, ಶೆಟ್ಟಿಹಳ್ಳಿ, ಹಳೇಶೆಟ್ಟಿಹಳ್ಳಿ, ಗುಡ್ರಕೊಪ್ಪ, ಮತ್ತಿಘಟ್ಟ, ಮಾಳೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

Shivamogga Live Editor Nitin Kaidotlu

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 10, 2023

Leave a Comment