ಶಿವಮೊಗ್ಗ: ಮೆಗ್ಗಾನ್ 110/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಜೂನ್ 11 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (POWER CUT)
ಎಲ್ಲೆಲ್ಲಿ ಕರೆಂಟ್ ಇರಲ್ಲ?
ಹೊಸಮನೆ, ಹೊಸಮನೆ ಛಾನಲ್ ಏರಿಯಾ, ಶರಾವತಿನಗರ ಎ ಮತ್ತು ಬಿ ಬ್ಲಾಕ್ ಆಯುರ್ವೇದ ಕಾಲೇಜು, ಕುವೆಂಪು ರಸ್ತೆ, ಸಾಗರ ರಸ್ತೆ, ಆಯನೂರು ಗೇಟ್, ಆದಿಚುಂಚನಗಿರಿ ಸಮುದಾಯ ಭವನ.
ಯೂನಿಟಿ ಆಸ್ಪತ್ರೆ, ಜೈಲ್ ವೃತ್ತ, ಸುಬ್ಬಯ್ಯ ಆಸ್ಪತ್ರೆ, ಜೈಲ್ ರಸ್ತೆ, ಸತ್ಯಂ ಫೋರ್‌ವಿಂಗ್ಸ್, ಎ.ಆರ್.ಬಿ ಕಾಲೋನಿ, ಅಶೋಕನಗರ, ಪಂಪನಗರ, ರಂಗನಾಥ ಬಡಾವಣೆ, ಮಿಳಘಟ್ಟ, ಟಿಪ್ಪುನಗರ ಬಲಭಾಗ, ಬಿ.ಎಸ್.ಎನ್.ಎಲ್ ಭವನ, ಪಾರ್ಕ್ ಎಕ್ಸ್‌ಟೆನ್ಷನ್, ದುರ್ಗಿಗುಡಿ, ಜಿಲ್ಲಾ ಪಂಚಾಯತ್ ಕಛೇರಿ, ತಿಲಕ್ ನಗರ, ಆರ್.ಎಂ.ಆರ್ ರಸ್ತೆ.
ಜಯನಗರ, ಬಸವನಗುಡಿ, ನಂಜಪ್ಪ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ, ಶಿವಮೂರ್ತಿ ವೃತ್ತ, ಜಿಲ್ಲಾಧಿಕಾರಿಗಳ ಕಛೇರಿ, ಎ.ಎನ್.ಕೆ ರಸ್ತೆ, ಅಚ್ಯುತ್ ರಾವ್ ಬಡಾವಣೆ, ಸವಳಂಗ ರಸ್ತೆ, ರಾಘವೇಂದ್ರ ಸ್ವಾಮಿ ಮಠ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ » ಆಪರೇಷನ್ ಸಿಂಧೂರ, ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಯೋಧನ ಕುಟುಂಬಕ್ಕೆ ಅದ್ಧೂರಿ ಸ್ವಾಗತ, ಹೇಗಿತ್ತು? ಯಾರೆಲ್ಲ ಇದ್ದರು?

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200