ಶಿವಮೊಗ್ಗ ಸಿಟಿಯ ವಿವಿಧೆಡೆ ಆಗಸ್ಟ್‌ 30ರಂದು ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಬಡಾವಣೆಗಳ ಲಿಸ್ಟ್

ಶಿವಮೊಗ್ಗ: ನಗರವಿದ್ಯುತ್ ವಿತರಣಾ ಕೇಂದ್ರ ಹಾಗೂ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ಫೀಡರ್ ವ್ಯಾಪ್ತಿಯಲ್ಲಿ ದುರಸ್ಥಿ ಮತ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಆಗಸ್ಟ್ 30 ರಂದು ನಗರದ ವಿವಿಧೆಡೆ ವಿದ್ಯುತ್ ಪೂರೈಕೆ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್ಲೆಲ್ಲಿ ಕರೆಂಟ್‌ ಇರಲ್ಲ?

ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ

ಕೆಂಚಪ್ಪ ಲೇಔಟ್, ಸೂಡಾ ಕಾಂಪ್ಲೆಕ್ಸ್, ದಯಾನಂದ ಪ್ರಿಂಟರ್ಸ್ ಹತ್ತಿರ, ಪೊಲೀಸ್ ಚೌಕಿ, ಆರಾಧ್ಯ ಕಣ್ಣಿನ ಆಸ್ಪತ್ರೆ, ದಾವಣಗೆರೆ ಬೆಣ್ಣೆದೋಸೆ ಹೋಟೆಲ್ ಸುತ್ತಮುತ್ತ, ಸವಿ ಬೇಕರಿ ಎದುರು 100 ಅಡಿ ರಸ್ತೆ, ಕರಿಯಣ್ಣ ಬಿಲ್ಡಿಂಗ್‌ನಿಂದ ಪೊಲೀಸ್ ಚೌಕಿವರೆಗೆ, ಹುಚ್ಚರಾಯ ಕಾಲೋನಿ ಹಾಗೂ ದೇವರಾಜ ಅರಸು ಬಡಾವಣೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

power cut mescom ELECTRICITY

ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ

ಬಾಲರಾಜು ಅರಸು ರಸ್ತೆ (ಮಹಾವೀರ ಸರ್ಕಲ್‌ನಿಂದ ಗೋಪಿ ಸರ್ಕಲ್‌ವರೆಗೆ), ಪಾರ್ಕ್ ಬಡಾವಣೆ, ನೆಹರೂ ರಸ್ತೆ, ಜಯನಗರ ಪೊಲೀಸ್ ಸ್ಟೇಷನ್ ರಸ್ತೆ, ಡಿಸಿ ಆಫೀಸ್, ಎಂಜಿ ಪ್ಯಾಲೇಸ್, ಮಥುರಾ ಹೋಟೆಲ್ ರಸ್ತೆ ಮತ್ತು ಬಿಎಸ್‌ಎನ್‌ಎಲ್ ಆಫೀಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಮೆಸ್ಕಾಂ ತಿಳಿಸಿದೆ.