ಶಿವಮೊಗ್ಗದ ಈ ಪ್ರದೇಶಗಳಲ್ಲಿ ಫೆಬ್ರವರಿ 5 ಮತ್ತು 6 ರಂದು ಕರೆಂಟ್ ಇರಲ್ಲ, ಇಲ್ಲಿದೆ ಏರಿಯಾಗಳ ಪಟ್ಟಿ

ಶಿವಮೊಗ್ಗ: ನಗರದ ಮೆಸ್ಕಾಂ ಉಪವಿಭಾಗ-1ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಫೆಬ್ರವರಿ 5 ಮತ್ತು 6 ರಂದು ನಗರದ ಹಲವು ಪ್ರಮುಖ ಬಡಾವಣೆಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿದ್ಯುತ್ ಪೂರೈಕೆಯಲ್ಲಿ (power cut) ವ್ಯತ್ಯಯವಾಗಲಿದೆ.

ವಿದ್ಯುತ್ ಕಡಿತದ ವಿವರ

power cut mescom ELECTRICITY

  • ಸಮಯ: ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 02:00 ಗಂಟೆಯವರೆಗೆ.

ಯಾವೆಲ್ಲಾ ಏರಿಯಾಗಳಲ್ಲಿ ಕರೆಂಟ್‌ ಇರಲ್ಲ?

JNNCE-COLLEGE-ADVT.

ಸೋಮಯ್ಯ ಲೇಔಟ್, ಟ್ಯಾಂಕ್ ಬಂಡ್ ರಸ್ತೆ, ಶಂಕರಮಠದ ಎಡಭಾಗ, ಕೆಇಬಿ ಸರ್ಕಲ್, ಹಳೇ ಹೊನ್ನಳ್ಳಿ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಎ.ಎ. ಕಾಲೋನಿ, ವಿನಾಯಕನಗರ, ಬಾಲರಾಜ್ ಅರಸು ರಸ್ತೆ, ಬಸವನಗುಡಿ ವಿನಾಯಕ ಪಾರ್ಕ್ ಮತ್ತು ಬಸವನಗುಡಿ 5ನೇ ಕ್ರಾಸ್, ಕೋರ್ಟ್ ರಸ್ತೆ, ಒಳಾಂಗಣ ಕ್ರೀಡಾಂಗಣ (ಇಂಡೋರ್ ಸ್ಟೇಡಿಯಂ), ಡಿ.ಸಿ. ಕಾಂಪೌಂಡ್, ಟ್ಯಾಂಕ್ ಮೊಹಲ್ಲಾ, ಮೆಹದಿನಗರ ಮತ್ತು ಬಾಪೂಜಿನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದ ಟೀಚರ್‌ ಮೊಬೈಲ್‌ಗೆ ಬಂತು ನಾಲ್ಕು SMS, ಮೆಸೇಜ್‌ ಓದಿ ಶಾಕ್‌, ದಾಖಲಾಯ್ತು ಕೇಸ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment