ಶಿವಮೊಗ್ಗ ಸಿಟಿ, ತಾಲೂಕಿನ ವಿವಿಧೆಡೆ ಇವತ್ತು ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಎಷ್ಟು ಹೊತ್ತು ವಿದ್ಯುತ್‌ ವ್ಯತ್ಯಯ?

ಶಿವಮೊಗ್ಗ: ನಗರ ಉಪವಿಭಾಗ-2 ರ ಘಟಕ-5ರ ವ್ಯಾಪ್ತಿಯಲ್ಲಿ ಮೆಸ್ಕಾಂ ತುರ್ತು ಕಾಮಗಾರಿ ನಿರ್ವಹಿಸುವುದರಿಂದ ಆಗಸ್ಟ್ 9 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಪಂಚವಟಿ ಕಾಲೋನಿ, ಬಿ.ಹೆಚ್.ರಸ್ತೆ, ಅಶೋಕ ವೃತ್ತದಿಂದ ಅಮೀರ್ ಅಹಮದ್ ವೃತ್ತದವರೆಗೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇನ್ನೊಂದೆಡೆ, ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ಫೀಡರ್ ಎ.ಎಫ್-1, 2 ಮತ್ತು 4 ರಲ್ಲಿ ಮೆಸ್ಕಾಂ ತುರ್ತು ಕಾಮಗಾರಿ ಇರುವುದರಿಂದ, ಆ.9 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಮಲ್ಲಿಗೇನಹಳ್ಳಿ, ತ್ಯಾವರೆಕೊಪ್ಪ, ಮುದ್ದಿನಕೊಪ್ಪ, ಸಿದ್ಲಿಪುರ, ಆಲ್ದೇವರ ಹೊಸೂರು, ವಿರುಪಿನಕೊಪ್ಪ, ಗಿರಿದೀಪಂ ಶಾಲೆ, ಲಯನ್ ಸಫಾರಿ, ಭೋವಿ ಕಾಲೋನಿ, ಸಾಗರ ಮುಖ್ಯರಸ್ತೆ, ಗಾಡಿಕೊಪ್ಪ, ಆಲ್ಕೋಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಈ ವಲಯಗಳಲ್ಲಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

power cut mescom ELECTRICITY

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ