ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 21 DECEMBER 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ : ಕ್ಷೇತ್ರದ ಜನರು ಈಶ್ವರಪ್ಪ ಅವರು ಮಂತ್ರಿಗಿರಿ ಅನುಭವಿಸುತ್ತಲೇ ಇರಲಿ ಎಂದು ಆಯ್ಕೆ ಮಾಡಿದ್ದಲ್ಲ. ಜನರ ಸಮಸ್ಯೆಯನ್ನು ಅಧಿವೇಶನದಲ್ಲಿ ಚರ್ಚೆ ಮಾಡಿ, ಪರಿಹಾರ ಒದಗಿಸಬೇಕು. ಆದರೆ ಈಶ್ವರಪ್ಪ ಅವರು ಶಿವಮೊಗ್ಗದ ಜನರಿಗೆ ದ್ರೋಹ ಬಗೆದಿದ್ದಾರೆ. ಪಕ್ಷಕ್ಕೆ ಬ್ಲ್ಯಾಕ್ ಮೇಲ್ (black mail) ಮಾಡುತ್ತ, ಜನರಿಗೂ ಟೋಪಿ ಹಾಕುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅವರು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಹರಿಹಾಯ್ದರು.
(black mail)
ಪ್ರಸನ್ನ ಕುಮಾರ್ ಏನೆಲ್ಲ ಹೇಳಿದರು?
1 ಕಾಲು ನೋವಿನ ಕಾರಣಕ್ಕೆ ಹಿಂದಿನ ಅಧಿವೇಶನಕ್ಕೆ ಗೈರಾದರು. ಈ ಅಧಿವೇಶನದಲ್ಲಿಯು ಈಶ್ವರಪ್ಪ ಅವರು ಕಾಣುತ್ತಿಲ್ಲ. ಬೆಳಗಾವಿಗೆ ಹೋದರು ‘ನನ್ನ ಮೌನ ಪ್ರತಿಭಟನೆ’ ಎಂದು ಹೇಳುತ್ತಿದ್ದಾರೆ. ಅನಂತಕುಮಾರ್, ಯಡಿಯೂರಪ್ಪ ಮತ್ತು ತಾವು ಪಕ್ಷ ಕಟ್ಟಿದ್ದೇವೆ. ಆದರೆ ಕ್ಷುಲಕ ಕಾರಣಕ್ಕೆ ತನ್ನನ್ನು ಸಂಪುಟದಿಂದ ಕೈ ಬಿಟ್ಟಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಪಕ್ಷ ಕಟ್ಟಿದ್ದೇವೆ ಎಂದ ಹೇಳುತ್ತಲೆ ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದರು. 2 ಅಧಿವೇಶನಕ್ಕೆ ಗೈರಾಗುವ ಮೂಲಕ ಈಶ್ವರಪ್ಪ ಅವರೆ ಪಕ್ಷಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಯೋ? ಅಥವಾ ಇವರು ಬಂದರೆ 40 ಪರ್ಸೆಂಟ್ ವಿಚಾರ ಚರ್ಚೆಗೆ ಬರಲಿದೆ ಎಂದು ಪಕ್ಷದವರೆ ಇವರನ್ನು ದೂರವಿಡುತ್ತಿದ್ದಾರೆಯೋ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಇದು ಶಿವಮೊಗ್ಗ ಜನತೆಗೆ ಮಾಡಿರುವ ಅವಮಾನವಾಗಿದೆ. ಅವರು ಅಧಿವೇಶನಕ್ಕೆ ಹೋಗಬೇಕು. 3 ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಕ್ಲೀನ್ ಚಿಟ್ ನೀಡಿದೆ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ಒಂದು ವೇಳೆ ಕ್ಲೀನ್ ಚಿಟ್ ಆಗಿದ್ದರೆ ಪಕ್ಷದವರು ಈಶ್ವರಪ್ಪ ಅವರಿಗೆ ಅಧಿಕಾರ ಕೊಡುತ್ತಿದ್ದರು. ಆದರೆ ಇವರನ್ನು ಅಧಿಕಾರದಿಂದ ದೂರವಿಟ್ಟಿದ್ದಾರೆ.ಇದನ್ನೂ ಓದಿ – ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರು, ಗ್ರಾಮಸ್ಥರಿಂದ ಇಡೀ ರಾತ್ರಿ ಧರಣಿ
4 ಮಂತ್ರಿಗಿರಿ ಅನುಭವಿಸುತ್ತಲೇ ಇರಲಿ ಎಂದು ಶಿವಮೊಗ್ಗದ ಜನರು ಈಶ್ವರಪ್ಪ ಅವರನ್ನು ಆಯ್ಕೆ ಮಾಡಿದ್ದಲ್ಲ. ಕೋವಿಡ್ ನಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಎರಡು ಮಳೆಗೆ ಮನೆ ಕಳೆದುಕೊಂಡವರು ಇನ್ನು ಒದ್ದಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಇವುಗಳ ಕುರಿತು ಸದನದಲ್ಲಿ ಚರ್ಚೆ ಮಾಡಬೇಕಿದೆ. ಚರ್ಚೆ ಮಾಡಿದರೆ ಸಮಸ್ಯೆ ಪರಿಹಾರವಾಗಲಿದೆ. ಆದರೆ ಇವರು ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಬೆಳಗ್ಗೆ ಒಂದು, ಮಧ್ಯಾಹ್ನ ಒಂದು, ಮರುದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ.