SHIVAMOGGA LIVE NEWS, 24 DECEMBER 2024
ಶಿವಮೊಗ್ಗ : ಶಸ್ತ್ರ ಚಿಕಿತ್ಸೆಗೆ (Operation) ಒಳಗಾಗುತ್ತಿರುವ ನಟ ಶಿವರಾಜ್ ಕುಮಾರ್ ಅವರ ಆರೋಗ್ಯ ಶೀಘ್ರ ಸುಧಾರಿಸಲಿ ಎಂದು ಪ್ರಾರ್ಥಿಸಿ ಜಿಲ್ಲೆಯ ವಿವಿಧೆಡೆ ವಿಶೇಷ ಪೂಜೆ ನೆರವೇರಿದವು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
» ಎಂ.ಶ್ರೀಕಾಂತ್ ಅಭಿಮಾನಿಗಳಿಂದ ಪೂಜೆ
ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಅಭಿಮಾನಿ ಬಳಗದ ವತಿಯಿಂದ ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ. ಶೀಘ್ರ ಗುಣವಾಗಿ. ಅವರಿಗೆ ಆರೋಗ್ಯ, ಆಯಸ್ಸು ಕೊಟ್ಟು ಸಮಾಜದ ಸೇವೆಗೆ ಇನ್ನು ಹೆಚ್ಚಿನ ಅವಕಾಶ ಲಭಿಸಲಿ ಎಂದು ದೇವಿಗೆ ಹರಕೆ ಮಾಡಿದರು.
ಎಂ.ಶ್ರೀಕಾಂತ್ ಅಭಿಮಾನಿ ಬಳಗದ ಅಧ್ಯಕ್ಷ ನವುಲೆ ಮಂಜು, ಮಹಾನಗರ ಪಾಲಿಕೆ ನಾಗರಾಜ್ ಕಂಕಾರಿ, ಮಾಜಿ ಉಪ ಮೇಯರ್ ಪಾಲಾಕ್ಷಿ, ಗ್ಯಾರಂಟಿ ಯೋಜನೆ ಸದಸ್ಯ ಬಸವರಾಜ್, ಯುವ ಕಾಂಗ್ರೆಸ್ ನಗರ ಅಧ್ಯಕ್ಷ ವಿನಯ್, ಯುವ ಮುಖಂಡರಾದ ರಂಗನಾಥ್, ಶರತ್, ಮಂಜು ಪುರಲೆ, ಪ್ರದೀಪ್, ರಘು ಸಿಂಗ್, ಪ್ರದೀಪ್, ಹಾಲೇಶ್, ಪ್ರಸನ್ನ ಕುಮಾರ್, ಗುರು ಪ್ರಸಾದ್, ದರ್ಶನ್ ಸೇರಿದಂತೆ ಹಲವರು ಇದ್ದರು.
ಅಮೆರಿಕದ ಮಿಯಾಮಿಯಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಎಂದು ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಮೃತ್ಯಂಜಯ ಹೋಮ ನಡೆಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಮತ್ತು ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಹೋಮ ನಡೆಸಿದರು. ದೇವಸ್ಥಾನದ ಕಾರ್ಯದರ್ಶಿ ರವಿ ಕುಮಾರ್, ಕೆಪಿಸಿಸಿ ಒಬಿಸಿ ಸಂಯೋಜಕ ಜಿ.ಡಿ.ಮಂಜುನಾಥ್, ಮಸ್ಗಾರ್ ರಾಜಪ್ಪ, ಎಂ.ಬಿ.ರವಿಕುಮಾರ್, ಪುರದಾಳು ರಘು, ಚೇತನ್, ಸಂದೇಶ್ ಸೇರಿದಂತೆ ಹಲವರು ಇದ್ದರು.» ಸಿಗಂದೂರಿನಲ್ಲಿ ಮೃತ್ಯುಂಜಯ ಹೋಮ
ಇದನ್ನೂ ಓದಿ » ಲಂಚ ಪಡೆದ ತಕ್ಷಣ ಲೋಕಾಯುಕ್ತರು ಪ್ರತ್ಯಕ್ಷ, ಅಧಿಕಾರಿ ಅರೆಸ್ಟ್