ಮಹಾಲಯ ಅಮಾವಾಸ್ಯೆ, ತುಂಗಾ ನದಿ ಮಂಟಪದ ಬಳಿ ಪಿತೃಗಳಿಗೆ ತರ್ಪಣ

ಶಿವಮೊಗ್ಗ: ಮಹಾಲಯ ಅಮಾವಾಸ್ಯೆ ಅಂಗವಾಗಿ ನಗರದ ತುಂಗಾ ನದಿಯ ಕೋರ್ಪಲಯ್ಯ ಛತ್ರ ಮಂಟಪದ ಬಳಿ ಶನಿವಾರ ನೂರಾರು ಜನರು ಪಿತೃಗಳಿಗೆ ತರ್ಪಣ ಅರ್ಪಿಸಿ, ಪೂಜೆ ಸಲ್ಲಿಸಿದರು.

ಬೆಳಿಗ್ಗೆಯಿಂದಲೇ ತುಂಗಾ ಮಂಟಪದ ಬಳಿ ಜನರು ಬಂದು, ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಅಗಲಿದ ಪೂರ್ವಜರನ್ನು ಸ್ಮರಿಸಿ, ಎಳ್ಳು – ನೀರಿನಿಂದ ತರ್ಪಣ ಅರ್ಪಿಸಿದರು. ಪೂರ್ವಜರ ಆತ್ಮಶಾಂತಿ ಹಾಗೂ ಸದ್ಗತಿಗಾಗಿ ತರ್ಪಣ ಅರ್ಪಿಸುವುದು ಸಂಪ್ರದಾಯವಾಗಿದ್ದು, ಪಿತೃಗಳ ಆಶೀರ್ವಾದ ಕುಟುಂಬದ ಮೇಲಿರಲಿ ಎಂಬ ನಂಬಿಕೆಯಿಂದ ಭಕ್ತರು ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದರು.

Mahalaya-Amavasye-in-Shivamogga-tunga-River