ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 OCTOBER 2023
SHIMOGA : ನಗರದಲ್ಲಿ ಜಂಬೂ ಸವಾರಿ (Jamboo Savari), ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಅಂತಿಮ ಹಂತದ ಸಿದ್ಧತೆಯಾಗುತ್ತಿದೆ. ಆನೆಗಳಿಗೆ ತಾಲೀಮು ನೀಡಲಾಗುತ್ತಿದೆ.
ಆನೆಗಳಿಗೆ ಕೊನೆ ಹಂತದ ತಾಲೀಮು
ಶಿವಮೊಗ್ಗ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಜಂಬೂ ಸವಾರಿ. ಈಗಾಗಲೇ ಸಕ್ರೆಬೈಲಿನ ಸಾಗರ ಆನೆ ನೇತೃತ್ವದ ಗಜಪಡೆ ನಗರಕ್ಕೆ ಆಗಮಿಸಿದೆ. ತಾಲೀಮ ನಡೆಸುತ್ತಿವೆ. ಸೋಮವಾರ ಆನೆಗಳು ಕೊನೆಯ ಬಾರಿ ತಾಲೀಮು ನಡೆಸಿದವು. ಗಜ ಗಾಂಭೀರ್ಯದಿಂದ ನಗರದಲ್ಲಿ ಸಾಗಿದವು.
ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ತಾಲೀಮು ಆರಂಭವಾಯಿತು. ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಶಿವಪ್ಪ ಸರ್ಕಲ್, ಎಎ ಸರ್ಕಲ್, ನೆಹರು ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ, ಜೈಲ್ ರೋಡ್, ಲಕ್ಷ್ಮೀ ಟಾಕೀಸ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ತಾಲೀಮು ನಡೆಸಿದವು.
ಬನ್ನಿ ಮಂಟಪ ರೆಡಿ
ವಿಜಯದಶಮಿಯಂದು ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ವೇದಿಕೆ ಸಿದ್ಧವಾಗಿದೆ. ಫ್ರೀಡಾಂ ಪಾರ್ಕ್‌ನ ಮಧ್ಯ ಭಾಗದಲ್ಲಿ ಬನ್ನಿ ಮಂಟಪ ಸಿದ್ಧಪಡಿಸಲಾಗಿದೆ. ವೇದಿಕೆ ಸಮೀಪ ಸೀಮಿತ ಜನರಿಗೆ ಮಾತ್ರ ಅವಕಾಶವಿದೆ. ಹಾಗಾಗಿ ಬನ್ನಿ ಮಂಟಪದ ಸುತ್ತಲು ಬೇಲಿ ಹಾಕಲಾಗಿದೆ. ಜನರ ನಿಯಂತ್ರಣಕ್ಕೆ ಬ್ಯಾರಿಕೇಡ್‌ಗಳನ್ನು ತರಿಸಲಾಗಿದೆ.
ಇದನ್ನೂ ಓದಿ – ಸಿಗಂದೂರು ನವರಾತ್ರಿ ಉತ್ಸವಕ್ಕೆ ಬಸ್ಸಿನಲ್ಲಿ ಬಂದಿಳಿದ ಮಿನಿಸ್ಟರ್, ಇಲ್ಲಿದೆ ಸಚಿವರು ಹೇಳಿದ 5 ಪ್ರಮುಖ ಪಾಯಿಂಟ್
ಫ್ರೀಡಂ ಪಾರ್ಕ್‌ನಲ್ಲಿ ಲೈಟ್, ಮೈಕ್‌ಗಳನ್ನು ಅಳವಡಿಸಲಾಗಿದೆ. ರಾವಣ ದಹನಕ್ಕೆ ಸಿಡಿಮದ್ದುಗಳ ಸಿದ್ಧತೆಯು ಆರಂಭವಾಗಿದೆ. ಇನ್ನು, ನಗರದ ವಿವಿಧೆಡೆ ದಸರಾದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422