ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನಗರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ (Procession) ವೇಳೆ ನೂರಕ್ಕೂ ಹೆಚ್ಚು ವಾಹನಗಳಲ್ಲಿ ಡಿಜೆ ಬಳಕೆ, ವಿದೇಶದ ಧ್ವಜಗಳ ಪ್ರದರ್ಶನ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ವಿಹೆಚ್‌ಪಿ ಮತ್ತು ಬಜರಂಗದಳ ಕಾರ್ಯಕರ್ತರು, ಸೆ.15ರಂದು ಶಿವಮೊಗ್ಗ ನಗರದಲ್ಲಿ ನಡೆದ ಈದ್ ಮೆರವಣಿಗೆ ಸಂದರ್ಭ ನೂರಕ್ಕೂ ಹೆಚ್ಚು ಸಂಚಾರಿ ಡಿಜೆಗಳಿದ್ದವು. ವಿದೇಶಿ ಬಾವುಟಗಳನ್ನು ಕೂಡ ಪ್ರದರ್ಶಿಸಲಾಗಿದೆ. ಅಲ್ಲದೆ ಹೊರ ಜಿಲ್ಲೆಗಳಿಂದಲು ವಾಹನಗಳಲ್ಲಿ ಜನರು ಆಗಮಿಸಿದ್ದಾರೆ. ಇಷ್ಟಾದರು ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಯಾರೆಲ್ಲ ಏನೆಲ್ಲ ಹೇಳಿದರು?
ಶಿವಮೊಗ್ಗದ ಮೆರವಣಿಗೆಯಲ್ಲಿ ಬಳಕೆಯಾದ ಡಿಜೆಗಳನ್ನು, ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಬೇಕು. ವಿದೇಶದ ಬಾವುಟಗಳ ಪ್ರದರ್ಶನ, ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಬಂಧಿಸಬೇಕು. ಇಲ್ಲವಾದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುತ್ತದೆ.
- ರಾಜೇಶ್ ಗೌಡ, ಬಜರಂಗದಳ ಜಿಲ್ಲಾ ಸಂಚಾಲಕ
ಹಬ್ಬಗಳ ಮುಂಚೆ ಶಾಂತಿ ಸಭೆ ಕರೆಯುವ ಉದ್ದೇಶವೇನು. ಈ ಬಾರಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಪ್ರತ್ಯೇಕ ಸಭೆ ಕರೆದಿದ್ದಾರೆ. ಸರ್ಕಾರಕ್ಕೆ ವರದಿ ಕೊಡವುದು ಮಾತ್ರವೆ ಈ ಸಭೆಯ ಉದ್ದೇಶವೆ? ಅಲಂಕಾರದ ವಿಚಾರವಾಗಿ ಚರ್ಚೆ ನಡೆಸಿದಾಗ ನೀಡಿದ ಸೂಚನೆಗಳು ಹಿಂದೂಗಳಿಗೆ ಮಾತ್ರ ಸೀಮಿತವಾ?
- ರಮೇಶ್ ಬಾಬು ಜಾಧವ್, ವಿಹೆಚ್‌ಪಿ ಸಾಮರಸ್ಯ ಪ್ರಮುಖ
ಮೆರವಣಿಗೆ ಹಾದಿ ಉದ್ದಕ್ಕು ಡಿಜೆ ಬಳಕೆ ಮಾಡಿದ್ದಾರೆ. ಡಿಜೆ ಶಬ್ದಕ್ಕೆ ಪೊಲೀಸರೆ ಕಿವಿ ಹಾಳು ಮಾಡಿಕೊಂಡು ಅಸಹಾಯಕರಾಗಿದ್ದರು. ಜಿಹಾದಿ ಮಾನಸಿಕತೆಯ ಸರ್ಕಾರವೆ ಇದಕ್ಕೆ ಕಾರಣ.
- ಸುರೇಶ್ ಬಾಬು, ಬಜರಂಗದಳ ಜಿಲ್ಲಾ ಸಹ ಸಂಚಾಲಕ
ಅಪರ ಜಿಲ್ಲಾಧಿಕಾರಿ ಅಭಿಷೇಕ್ ಅವರಿಗೆ ಮನವಿ ಸಲ್ಲಿಸಲಾಯಿತು. ವಿಹೆಚ್‌ಪಿ ನಗರ ಅಧ್ಯಕ್ಷ ವಿನೋದ್ ಕುಮಾರ್ ಜೈನ್, ಪ್ರಮುಖರಾದ ದೀನದಯಾಳು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.


ಇದನ್ನೂ ಓದಿ » ಅಡಿಕೆ ಧಾರಣೆ | 16 ಸೆಪ್ಟೆಂಬರ್ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?
Protest against DJ in Eid Procession
LATEST NEWS
- ಶಿವಮೊಗ್ಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ಧಗಧಗ ಹೊತ್ತಿ ಉರಿದ ಮುಂಭಾಗ

- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು





