ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 4 ಏಪ್ರಿಲ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕರೋನ ಲಾಕ್’ಡೌನ್ ಸಂದರ್ಭ ಸರ್ಕಾರ ಘೋಷಿಸಿದ ಯಾವುದೇ ಸೌಲಭ್ಯವು ತಮಗೆ ದೊರಕ್ಕಿಲ್ಲ ಅಂತಾ ಮಹಿಳೆಯರು ನವುಲೆ ಚಾನೆಲ್ ಏರಿ ಪಕ್ಕದ ರಸ್ತೆ ತಡೆ ನಡೆಸಿದರು. ಈ ವೇಳೆ ಮಹಾನಗರ ಪಾಲಿಕೆ ಕಾರ್ಪೊರೇಟರ್ ಜೊತೆಗೆ ಮಾತಿನ ಚಕಮಕಿಯನ್ನು ನಡೆಸಿದರು.
ದಿಢೀರ್ ಪ್ರತಿಭಟನೆಗೆ ಕಾರಣವೇನು?
ರಾಜ್ಯ ಸರ್ಕಾರದ ಆದೇಶದಂತೆ ಬಡವರು, ಸ್ಲಂ ನಿವಾಸಿಗಳಿಗೆ ಕಾರ್ಪೊರೇಟರ್ ಧೀರಾಜ್ ಹೊನ್ನವಿಲೆ ಹಾಲು ವಿತರಿಸುತ್ತಿದ್ದರು. ನವುಲೆ ಚಾನೆಲ್ ಏರಿ ಪಕ್ಕದ ರಸ್ತೆ ನಿವಾಸಿಗಳಿಗೆ ಹಾಲು ವಿತರಿಸಲು ಆಗಮಿಸಿದ ಸಂದರ್ಭ, ಮಹಿಳೆಯರು ಪಾಲಿಕೆ ಸದಸ್ಯ ಧೀರಾಜ್ ಹೊನ್ನವಿಲೆ ಜೊತೆ ವಾಗ್ವಾದ ನಡೆಸಿದರು.
ಕರೋನ ಲಾಕ್’ಡೌನ್ ಆರಂಭವಾದಾಗಿನಿಂದ ಊಟಕ್ಕೆ ಪರದಾಡುತ್ತಿದ್ದೇವೆ. ಈವರೆಗೂ ಯಾರೊಬ್ಬರು ತಮಗೆ ಆಹಾರದ ಸಾಮಾಗ್ರಿ ಕೊಟ್ಟಿಲ್ಲ. ಕೋರನ ಸಂದರ್ಭ ಸರ್ಕಾರ ಘೋಷಿಸಿದ ಯಾವುದೇ ಸೌಕರ್ಯವು ತಮಗೆ ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿ
ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ರಸ್ತೆ ತಡೆ ನಡೆಸಿದರು. ತಮಗೆ ಆಹಾರ ಸಿಗುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಬಳ್ಳೆಕೆರೆ ಸಂತೋಷ್ ಅವರು ಸ್ಥಳೀಯರನ್ನು ಸಮಾಧಾನಪಡಿಸಲು ಯತ್ನಿಸಿದರು. ಇನ್ನು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಎಲ್ಲರು ಕೂಲಿ ಕಾರ್ಮಿಕರು
ಚಾನೆಲ್ ಏರಿ ಮೇಲೆ ಸುಮಾರು 30 ಮನೆಗಳಿವೆ. ನೂರೈವತ್ತಕ್ಕೂ ಹೆಚ್ಚು ಜನರಿದ್ದಾರೆ. ಬಹುತೇಕರು ಕೂಲಿ ಕಾರ್ಮಿಕರು. ದಿನದ ದುಡಿಮೆಯಿಂದ ಬದುಕು ನಡೆಸುವಂತಹ ಸ್ಥಿತಿ. ಲಾಕ್’ಡೌನ್ ಆದಾಗಿನಿಂದ ಇವರಿಗೆ ಜೀವನ ನಡೆಸುವುದು ಕಷ್ಟವಾಗಿದೆ. ಈತನಕ ಸರ್ಕಾರದ ಸೌಲಭ್ಯಗಳ್ಯಾವುದು ಲಭಿಸಿಲ್ಲ ಎಂಬ ಆರೋಪವಿದೆ. ಪಾಲಿಕೆ ಸದಸ್ಯ ಧೀರಾಜ್ ಹೊನ್ನವಿಲೆ, ಬಿಜೆಪಿ ಮುಖಂಡ ಬಳ್ಳೆಕೆರೆ ಸಂತೋಷ್ ಅವರು ದಿನಸಿ ವಸ್ತುಗಳನ್ನು ಕೊಡಿಸುವ ಭರವಸೆ ನೀಡಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]