ಮಲವಗೊಪ್ಪದಲ್ಲಿ ಹೆದ್ದಾರಿ ಮೇಲೆ ಟೈರ್ ಗೆ ಬೆಂಕಿ, ಗಾಡಿಕೊಪ್ಪದಲ್ಲಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 30 MARCH 2023

SHIMOGA : ಒಳ ಮೀಸಲಾತಿ ವಿರುದ್ಧ ಶಿವಮೊಗ್ಗದಲ್ಲಿಯು ಬಂಜಾರ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಮಲವಗೊಪ್ಪದಲ್ಲಿ ಪ್ರತಿಭಟನೆ (Protest) ನಡೆಸಿದ ಬಂಜಾರ ಸಮುದಾಯದವರು, ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿದರು.

Banjara-Community-Protest-in-Shimoga-Malavagoppa.

ಮಲವಗೊಪ್ಪದಲ್ಲಿ ಬಂಜಾರ ಸಮುದಾಯದವರು ಪ್ರತಿಭಟನೆ (Protest) ನಡೆಸಿದರು. ಒಳ ಮಿಸಲಾತಿಯ ಶಿಫಾರಸು ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿರುವುದನ್ನು ರಾಜ್ಯ ಸರ್ಕಾರ ಕೂಡಲೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಗಾಡಿಕೊಪ್ಪದಲ್ಲಿಯು ಆಕ್ರೋಶ

ಇನ್ನು, ಗಾಡಿಕೊಪ್ಪದಲ್ಲಿಯು ಬಂಜಾರ ಸಮುದಾಯ ಒಳ ಮೀಸಲಾತಿ ವಿರುದ್ಧ ಪ್ರತಭಟನೆ ನಡೆಸಿತು. ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಲಾಯಿತು. ಇದೆ ವೇಳೆ ಗಾಡಿಕೊಪ್ಪದಲ್ಲಿಯು ನಮ್ಮ ತಾಂಡ, ನಮ್ಮ ರಾಜ್ಯ ಬ್ಯಾನರ್ ಕಟ್ಟಿ, ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಲಾಯಿತು.

Gadikoppa Banjara Protest

ಒಳ ಮೀಸಲಾತಿ ವಿರುದ್ಧ ರಾಜ್ಯಾದ್ಯಂತ ಬಂಜಾರ ಸಮುದಾಯ ಹೋರಾಟ ನಡೆಯುತ್ತಿದೆ. ಶಿಕಾರಿಪುರದಲ್ಲಿ ನಡೆದ ಹೋರಾಟದ ವೇಳೆ ಪರಿಸ್ಥಿತಿ ತೀವ್ರ ಸ್ವರೂಪ ಪಡೆದಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.

ಇದನ್ನೂ ಓದಿ – ಕಲ್ಲು ತೂರಾಟ, ಈತನಕ ಎಷ್ಟು ಪ್ರಕರಣ ದಾಖಲಾಗಿದೆ? ಅರೆಸ್ಟ್ ಆದವರೆಷ್ಟು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment