ಪಾಲಿಕೆ ಜಾಗ ಕಬಳಿಸಲು ಯತ್ನ ವಿನೋಬನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

117702852 1188438618184223 2807915213080176620 n.jpg? nc cat=111& nc sid=110474& nc ohc=VE0J8XyiMG0AX 36iLB& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಆಗಸ್ಟ್ 2020

ಪಾಲಿಕೆ ಜಾಗವನ್ನು ಕೆಲವು ಖಾಸಗಿ ವ್ಯಕ್ತಿಗಳು ಅಕ್ರಮಿಸುತ್ತಿದ್ದಾರೆ ಎಂದು ಆರೋಪಿಸಿ ಮಾತೃಭೂಮಿ ಕನ್ನಡ ಗೆಳೆಯರ ಬಳಗ ವಿನೋಬನಗರದ ಜಟ್‌ಪಟ್ ನಗರದಲ್ಲಿ ರಸ್ತೆ ತಡೆ ನಡೆಸಿದರು.

117229777 1189499118078173 2167583811411504484 o.jpg? nc cat=101& nc sid=8024bb& nc ohc=hj 7n8yir40AX9qugCp& nc oc=AQk VxzEgSFz3 mWqCsPJwI2s9r2P2xcFI0BqrHaeywm8 qCI 5wKBbRmdyi 5Gk2pk& nc ht=scontent.fblr11 1

ವಿನೋಬನಗರ 2ನೇ ಹಂತದ ಕಲ್ಲಹಳ್ಳಿ 10 ಮತ್ತು 11ನೇ ತಿರುವುನಲ್ಲಿರುವ ಜಾಗ ಪಾಲಿಕೆಗೆ ಸೇರಿದೆ. ಆದರೆ ಕೆಲವು ಖಾಸಗಿ ವ್ಯಕ್ತಿಗಳು ಸುಳ್ಳು ದಾಖಲೆ ಸೃಷ್ಟಿಸಿ ಆ ಜಾಗವನ್ನು ಸ್ವಚ್ಚಗೊಳಿಸಿ ಮನೆ ಕಟ್ಟಲು ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಈ ಬಗ್ಗೆ ಪಾಲಿಕೆಗೆ ದೂರು ಸಲ್ಲಿಸಲಾಗಿತ್ತು. ಪಾಲಿಕೆ ಜಾಗ ಎಂದು ನಾಮಫಲಕ ಅಳವಡಿಸಲಾಗಿತ್ತು. ಆದರೆ ಈ ನಾಮಫಲಕವೇ ಇಲ್ಲವಾಗಿದೆ. ಇದು ಸಾರ್ವಜನಿಕರ ಆಸ್ತಿಯಾಗಿದೆ. ಯಾವುದೇ ಕಾರಣಕ್ಕೂ ಖಾಸಗಿಯವರ ಪಾಲಾಗಬಾರದು. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ನಕಲಿ ದಾಖಲೆ ಸೃಷ್ಟಿಸುವವರ ಬಗ್ಗೆ ಕಾನೂನುಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗೆಳೆಯರ ಬಳಗದ ಪ್ರಮುಖರಾದ ವೆಂಕಟೇಶ್, ರಘು ಎಸ್, ದಿವಾಕರ್, ಮಂಜುನಾಥ್, ಅಶೋಕ್, ಸುರೇಶ್, ಶರವಣ, ರುದ್ರೇಶ್, ಶಿವು, ಶಶಿ, ದರ್ಶನ್ ಸೇರಿದಂತೆ ಹಲವರಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment