ಶಿವಮೊಗ್ಗ ಲೈವ್.ಕಾಂ | SHIMOGA | 17 ಫೆಬ್ರವರಿ 2020
ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವರ್ತಕರು ಮತ್ತು ಅಧಿಕಾರಿಗಳ ನಡುವೆ ಮತ್ತೊಮ್ಮೆ ಜಟಾಪಟಿ ಶುರುವಾಗಿದೆ. ಇವತ್ತು ದಿಢೀರ್ ಪ್ರತಿಭಟನೆ ನಡೆಸಿದ ವರ್ತಕರು, ಎಪಿಎಂಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ದಿಢೀರ್ ಪ್ರತಿಭಟಗೆ ಕಾರಣವೇನು?
ಕೃಷಿ ಉತ್ಪನ್ನ ಹೊರತುಪಡಿಸಿ, ಉಳಿದ ಉತ್ಪನ್ನಗಳನ್ನು ಹೊತ್ತು ಬರುತ್ತಿದ್ದ ಸರಕು ಸಾಗಣೆ ವಾಹನಗಳನ್ನು ಇವತ್ತು ಗೇಟ್’ನಲ್ಲಿ ತಡೆಯಲಾಯಿತು. ಈ ವಾಹನಗಳಿಗೆ ಗೇಟ್ ಒಳಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಸೆಕ್ಯೂರಿಟಿ ಸಿಬ್ಬಂದಿ ತಿಳಿಸಿದರು. ಇದು ಎಪಿಎಂಸಿ ಆವರಣದಲ್ಲಿರುವ ದಿನಸಿ ವರ್ತಕರ ಆಕ್ರೋಶಕ್ಕೆ ಕಾರಣವಾಯಿತು. ಹಾಗಾಗಿ ಎಪಿಎಂಸಿ ಗೇಟ್ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದರು.
ದಿನಸಿ ವಸ್ತುಗಳನ್ನು ತಡೆದಿದ್ದೇಕೆ?
ಎಪಿಎಂಸಿ ಒಳಗೆ ಸಕ್ಕರೆ, ಎಣ್ಣೆ, ಉಪ್ಪು ಸೇರಿದಂತೆ ಹಲವು ದಿನಸಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಎಪಿಎಂಸಿಯು ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸೀಮಿತವಾಗಿದೆ. ಈ ಕುರಿತು ಸರ್ಕಾರವು ಆದೇಶ ಹೊರಡಿಸಿದೆ. 2018ರಲ್ಲಿಯೇ ಈ ಕುರಿತು ವರ್ತಕರಿಗೆ ತಿಳಿ ಹೇಳಲಾಗಿತ್ತು. ಇದಕ್ಕೆ ಸಮ್ಮತಿ ಸೂಚಿಸಿ ಅಫಿಡವಿಟ್ ಸಲ್ಲಿಸಿದ್ದಾರೆ. ಹಾಗಾಗಿ ದಿನಸಿ ವಸ್ತುಗಳನ್ನು ಎಪಿಎಂಸಿ ಆವರಣಕ್ಕೆ ಬಿಡುತ್ತಿಲ್ಲ ಅನ್ನುತ್ತಾರೆ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಜಯಕುಮಾರ್.
ಅಧಿಕಾರಿಗಳ ಜೊತೆಗೆ ಮಾತಿನ ಚಕಮಕಿ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಎಪಿಎಂಸಿ ಅಧಿಕಾರಿಗಳ ವಿರುದ್ಧ ವರ್ತಕರು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳನ್ನು ಸುತ್ತುವರಿದು, ಮಾತಿನ ಚಕಮಕಿ ನಡೆಸಿದರು. ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ವರ್ತಕ ಉಮೇಶ್, ಎಪಿಎಂಸಿ ಆಡಳಿತ ಮಂಡಳಿ ಸಭೆಯಲ್ಲಿ ದಿನಸಿ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ನಿರ್ಧಾರವಾಗಿದೆ. ಹೀಗಿದ್ದು ವಾಹನಗಳನ್ನು ತಡೆ ಹಿಡಿಯಲಾಗಿದೆ. ರಾಜ್ಯದ ಯಾವ ಎಪಿಎಂಸಿಯಲ್ಲಿಯು ಇಲ್ಲದ ಕಾನೂನು ಇಲ್ಲಿ ಯಾಕೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿಯೇ ಮಾದರಿ ಅನಿಸಿಕೊಂಡಿರುವ ಶಿವಮೊಗ್ಗದ ಎಪಿಎಂಸಿಯಲ್ಲಿ ಅಧಿಕಾರಿಗಳು ಮತ್ತು ವರ್ತಕರ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ಕಳೆದ ವರ್ಷವು ಇದೇ ವಿಚಾರ ಸಂಬಂಧ ಪ್ರತಿಭಟನೆ ನಡೆದಿತ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]