SHIVAMOGGA LIVE NEWS | 17 ಮಾರ್ಚ್ 2022
ಶಿವಮೊಗ್ಗದಲ್ಲಿ ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಜೇಮ್ಸ್ ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನವೇ ಚಿತ್ರ ನೋಡಲು ಮುಗಿಬಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ನಗರದ ಹೆಚ್.ಪಿ.ಸಿ ಟಾಕೀಸ್, ಲಕ್ಷ್ಮಿ ಚಿತ್ರಮಂದಿರ, ಭಾರತ್ ಸಿನಿಮಾಸ್’ನಲ್ಲಿ ಜೇಮ್ಸ್ ಸಿನಿಮಾದ ಪ್ರದರ್ಶನವಾಗುತ್ತಿದೆ. ಬೆಳಗ್ಗೆಯಿಂದಲೇ ಅಭಿಮಾನಿಗಳು ಸಿನಿಮಾ ವೀಕ್ಷಿಸುತ್ತಿದ್ದಾರೆ.
ಚಿತ್ರಮಂದಿರ ಸಂಪೂರ್ಣ ಭರ್ತಿ
ಶಿವಮೊಗ್ಗದ ಹೆಚ್.ಪಿ.ಸಿ ಚಿತ್ರಮಂದಿರದಲ್ಲಿ ಮೊದಲ ಫ್ಯಾನ್ಸ್ ಶೋ ಆಯೋಜಿಸಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಜೇಮ್ಸ್ ಚಿತ್ರ ವೀಕ್ಷಿಸಿದರು. ಚಿತ್ರಮಂದಿರದ ಒಳಗೆ ಮೆಟ್ಟಿಲುಗಳ ಮೇಲೆ ಕುಳಿತು ಸಿನಿಮಾ ನೋಡಿದರು. ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ನಿಯಂತ್ರಿಸಲು ಚಿತ್ರಮಂದಿರದ ಸಿಬ್ಬಂದಿ ಮತ್ತು ಪೊಲೀಸರು ಹರಸಹಾಸ ಪಡಬೇಕಾಯಿತು.
ಸಾಷ್ಟಾಂಗ ನಮಸ್ಕಾರ ಮಾಡಿದರು
ಚಿತ್ರ ವೀಕ್ಷಣೆಗೆ ಬಂದಿದ್ದ ಹಲವು ಅಭಿಮಾನಿಗಲು ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದರು. ನೂಕಾಟ, ತಳ್ಳಾಟದ ನಡುವೆಯು ಹಲವರು ಅಪ್ಪು ಭಾವಚಿತ್ರಕ್ಕೆ ನಮಸ್ಕಾರ ಮಾಡಿ, ಚಿತ್ರ ವೀಕ್ಷಣೆಗೆ ಚಿತ್ರಮಂದಿರದ ಒಳ ಪ್ರವೇಶ ಮಾಡಿದರು.
ಪಲಾವ್, ಬಿರಿಯಾನಿ ಹಂಚಿದರು
ಪುನೀತ್ ರಾಜಕುಮಾರ್ ಅವರ ಹುಟುಹಬ್ಬದ ಅಂಗವಾಗಿ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಬೆಳಗ್ಗೆ ಪಲಾವ್ ವಿತರಣೆ ಮಾಡಲಾಯಿತು. ಹೆಚ್.ಪಿ.ಸಿ ಟಾಕೀಸ್ ಮುಂಭಾಗದ ಟ್ಯಾಕ್ಸಿ ಸ್ಟಾಂಡ್ ಜಾಗದಲ್ಲಿ ಪಲಾವ್ ವಿತರಿಸಲಾಯಿತು. ಅಭಿಮಾನಿಗಳ ವತಿಯಿಂದ ಮಧ್ಯಾಹ್ನ ನೂರಾರು ಜನರಿಗೆ ಬಿರಿಯಾನಿ ವಿತರಣೆ ಮಾಡಲಾಯಿತು.
ನೂರಕ್ಕೂ ಹೆಚ್ಚು ಜನರಿಂದ ನೇತ್ರದಾನ
ಇನ್ನು, ತಮ್ಮ ನೆಚ್ಚಿನ ನಟನ ಆಶಯದಂತೆ ಅಭಿಮಾನಿಗಳು ನೇತ್ರದಾನಕ್ಕೆ ಮುಂದಾಗಿದ್ದಾರೆ. ಅಭಿಮಾನಿಗಳ ಸಂಘದ ವತಿಯಿಂದ ಸ್ವಯಂ ಪ್ರೇರತವಾಗಿ ನೇತ್ರದಾನಕ್ಕೆ ಮನವಿ ಮಾಡಲಾಗಿತ್ತು. ಹೆಚ್.ಪಿ.ಸಿ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬಂದಿದ್ದ ನೂರಕ್ಕೂ ಹೆಚ್ಚು ಮಂದಿ ನೇತ್ರದಾನ ಮಾಡಲು ಮುಂದಾಗಿದ್ದಾರೆ. ಶಂಕರ ಕಣ್ಣಿನ ಅಸ್ಪತ್ರೆ ವಿತರಿಸಿದ ನೇತ್ರದಾನದ ಅರ್ಜಿಯಲ್ಲಿ ಹೆಸರು ನೋಂದಾಯಿಸಿದ್ದಾರೆ.
ಕಣ್ಣೀರು ಹಾಕಿ ಅಭಿಮಾನಿಗಳು
ಇನ್ನು, ಚಿತ್ರಮಂದಿರಗಳ ಮುಂದೆ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪರವಾಗಿ ಘೋಷಣೆಗಳನ್ನು ಕೂಗಿದರು. ಈ ವೇಳೆ ಹಲವು ಅಭಿಮಾನಿಗಳು ಭಾವುಕರಾದರು, ಕಣ್ಣೀರು ಸುರಿಸಿದರು. ಮತ್ತೊಂದೆಡೆ ಚಿತ್ರ ವೀಕ್ಷಿಸಿ ಹೊರ ಬಂದ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಧ್ವನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ದುಃಖ ವ್ಯಕ್ತಪಡಿಸಿದರು.
ಅಭಿಮಾನಿಗಳ ನಿಯಂತ್ರಣಕ್ಕೆ ಹರಸಾಹಸ
ಮತ್ತೊಂದೆಡೆ ಬಾಲರಾಜ ಅರಸ್ ರಸ್ತೆಯಲ್ಲಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಘೋಷಣೆ ಕೂಗಿ, ಸಂಭ್ರಮಾಚರಣೆ ಮಾಡಿದರು. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನೂಕಾಟ ತಳ್ಳಾಟದಲ್ಲಿ ಹೆಚ್.ಪಿ.ಸಿ ಚಿತ್ರಮಂದಿರದ ಗೇಟು ಮರಿದು ಬಿತ್ತು.
ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು
ಮತ್ತೊಂದೆಡೆ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ನಗರದ ವಿವಿಧೆಡೆ ಹುಟ್ಟುಹಬ್ಬ ಆಚರಣೆ ಮಾಡಿದರು. ಗಾಂಧಿ ಬಜಾರ್’ನ ಹೋಲ್ ಸೇಲ್ ವರ್ತಕರ ಸಂಘದ ವತಿಯಿಂದ ಕೇಕ್ ಕತ್ತರಿಸಿ, ಪುಳಿಯೊಗರೆ, ಚಿತ್ರಾನ್ನ ವಿತರಣೆ ಮಾಡಿದರು. ಶಿವಮೊಗ್ಗ ಆರ್.ಎಂ.ಸಿ ಮಂಡಿ, ಜೈಲ್ ಸರ್ಕಲ್ ಸೇರಿದಂತೆ ಹಲವು ಕಡೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆ ಮಾಡಿದರು.
ರಂಗೋಲಿಯಲ್ಲಿ ಅರಳಿದ ಅಪ್ಪು
ಶಿವಮೊಗ್ಗದ ಸಿಟಿ ಸೆಂಟರ್ ಮಾಲ್’ನಲ್ಲಿ ಅಭಿಮಾನಿಯೊಬ್ಬರು ರಂಗೋಲಿಯಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಬಿಡಿಸಿದ್ದಾರೆ. ಭಾರತ್ ಸಿನಿಮಾ ಮುಂಭಾಗ ಕರ್ನಾಟಕ ಧ್ವಜದ ಮುಂದೆ ಹಸನ್ಮುಖಿ ಪುನೀತ್ ರಾಜಕುಮಾರ್ ಮತ್ತು ಅವರ ಭುಜದ ಮೇಲೆ ಪಾರಿವಾಳ ಕುಳಿತಿರುವಂತೆ ರಂಗೋಲಿಯಲ್ಲಿ ಬಿಡಿಸಿದ್ದಾರೆ. ಕಲಾವಿದ ಹರೀಶ್ ಕುಮಾರ್ ಲಾತೋರ್ ಅವರು ಬಿಡಿಸಿದ ರಂಗೋಲಿ ಕಲೆಗೆ ಜನರನ್ನು ಆಕರ್ಷಿಸುತ್ತಿದೆ.
ಇದನ್ನೂ ಓದಿ | ‘ತೀರ್ಥಹಳ್ಳಿಯಲ್ಲಿ ಪುನೀತ್ ರಾಜ್ ಕುಮಾರ್ ಮೇಲೆ ಜೇನುಗಳು ದಾಳಿ ಮಾಡಿದ್ದವು, ಸಿನಿಮಾದಲ್ಲಿ ಅದು ಗೊತ್ತಾಗುತ್ತೆ’
ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸಿದರು. ಪ್ರತಿ ವರ್ಷವು ಇದೆ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸುವುದಾಗಿಯೂ ತಿಳಿಸಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ನಟ ಪುನೀತ್ ರಾಜಕುಮಾರ್ ಮುದ್ದಾಡಿದ್ದ ಮರಿ ಆನೆಗೆ ಅವರದ್ದೇ ಹೆಸರು ನಾಮಕರಣ
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200