ಶಿವಮೊಗ್ಗ ಲೈವ್.ಕಾಂ | SHIMOGA NEWS | 1 MAY 2021
ಕರೋನ ಎರಡನೆ ಅಲೆಯ ಭೀಕರತೆಯಿಂದಾಗಿ ಜನರು ಭೀತಿಗೊಳಗಾಗಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಸ್ವಯಂ ಪ್ರೇರಿತವಾಗಿ ಕೇಂದ್ರಗಳತ್ತ ಬರುತ್ತಿದ್ದಾರೆ. ಆದರೆ ಇಲ್ಲೊಂದು ಕಡೆ ಲಸಿಕೆಯ ಟೋಕನ್‍ಗಾಗಿ ಗಂಟೆಗಟ್ಟಲೆ ಕಾಯುವಂತಾಗಿದೆ.
ಕುವೆಂಪು ರಸ್ತೆಯ ಜಿಲ್ಲಾ ಆರೋಗ್ಯ ಕೇಂದ್ರದ ಮುಂದೆ ಲಸಿಕೆಯ ಟೋಕನ್‍ಗಾಗಿ ಕ್ಯೂ ನಿಲ್ಲಬೇಕಾಗಿದೆ. ಬೆಳಗ್ಗೆ ಆರು ಗಂಟೆಗೆ ಸರತಿಯಲ್ಲಿ ನಿಲ್ಲುವಂತಾಗಿದೆ. ವೃದ್ಧರು, ಮಹಿಳೆಯರು ಬೆಳಗ್ಗೆಯೆ ಬಂದು ಕ್ಯೂನಲ್ಲಿ ನಿಲ್ಲುತ್ತಿದ್ದಾರೆ.
‘ವಯಸ್ಸಾದವರೆಲ್ಲ ಬಂದಿದ್ದಾರೆ. ಬೆಳಗ್ಗೆಯಿಂದಲೇ ಇಲ್ಲಿ ಕಾಯುತ್ತಿದ್ದಾರೆ. ಬಿಪಿ, ಷುಗರ್ ಇರುವವರಿದ್ದಾರೆ. ಟೋಕನ್‍ಗಾಗಿ ತಿಂಡಿ ತಿನ್ನದೆ, ಮಾತ್ರೆ ನುಂಗದೆ ಕಾದು ಕೂತಿದ್ದಾರೆ. ಆದಷ್ಟು ಬೇಗ ಟೋಕನ್ ವಿತರಣೆ ಮಾಡಿದರೆ, ಅವರೆಲ್ಲ ಮನೆಗೆ ಹೋಗಿ ತಿಂಡಿ ಮುಗಿಸಿ, ಮಾತ್ರೆ ತೆಗೆದುಕೊಂಡು ಬಂದು ಲಸಿಕೆ ಹಾಸಿಕೊಳ್ಳಬಹುದು. ಇದಕ್ಕೆ ಇಲ್ಲಿ ವ್ಯವಸ್ಥೆ ಮಾಡಬೇಕು’ ಅನ್ನುತ್ತಾರೆ ಕ್ಯೂನಲ್ಲಿ ನಿಂತಿದ್ದ ಸುನಿತಾ ಜಿ.ರಾವ್.
ಒಂಭತ್ತು ಗಂಟೆ ಬಳಿಕ ಟೋಕನ್
ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಮುಂದೆ ಕೂರಲು ಸರಿಯಾದ ವ್ಯವಸ್ಥೆಯಿಲ್ಲ. ಸಾಮಾಜಿಕ ಅಂತರ ಕಾಪಾಡಲು ಆಗುವುದಿಲ್ಲ. ಹೀಗಿದ್ದೂ, ಒಂಭತ್ತು ಗಂಟೆ ಬಳಿಕ ಟೋಕನ್ ವಿತರಣೆ ಮಾಡಲಾಗುತ್ತಿದೆ. ಬೆಳಗ್ಗೆ ಮುಂಚೆ ಟೋಕನ್ ನೀಡಲು ಆರಂಭಿಸಿದರೆ ಜನರು ನಿಗದಿತ ಸಮಯಕ್ಕೆ ಬಂದು ಲಸಿಕೆ ಪಡೆಯಬಹುದಾಗಿದೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಮನ ಹರಿಸಬೇಕಿದೆ. ಹಿರಿಯ ನಾಗರಿಕರು ಸೇರಿದಂತೆ ಲಸಿಕೆಗಾಗಿ ಬರುವ 45 ವರ್ಷದ ಮೇಲ್ಪಟ್ಟವರಿಗೆ ಇಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕಿದೆ.
ನೀವು ಲಸಿಕೆ ಪಡೆಯಬೇಕಾ? ಕೆಳಗಿರುವ ಫೋಟದಲ್ಲಿನ ನಂಬರ್‍ಗೆ ಕರೆ ಮಾಡಿ, ಸುರಕ್ಷಿತವಾಗಿ ಲಸಿಕೆ ಪಡೆಯಿರಿ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‍ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‍ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200