ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 28 MAY 2023
SHIMOGA : ಉದ್ಘಾಟನೆಯಾಗಿ ಮೂರು ತಿಂಗಳಾದರು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ (Flight) ಆರಂಭಾಗದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಹಲವರು ಪ್ರಶ್ನೆ ಕೇಳಿದ್ದಾರೆ.
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಈ ಕುರಿತು ಮೊದಲು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಎತ್ತಿದ್ದಾರೆ. ಇದರ ಬೆನ್ನಿಗೆ ಹಲವರು ಇದೆ ಮಾದರಿಯ ಪ್ರಶ್ನೆಗಳನ್ನು ಕೇಳಿ ಟ್ವೀಟ್ ಮಾಡಿದ್ದಾರೆ. ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಗಾನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು.
ಯಾರೆಲ್ಲ ಏನೇನು ಟ್ವೀಟ್ ಮಾಡಿದ್ದಾರೆ?
ಪ್ರಧಾನಿಗಳು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿ ಇಂದಿಗೆ 90 ದಿನ ಆಯ್ತು (ಫೆಬ್ರವರಿ 27, 2023)
ಈ ಮೂರು ತಿಂಗಳಲ್ಲಿ ಅಲ್ಲಿಂದ ಒಂದು ವಿಮಾನವೂ ಹಾರಿಲ್ಲ,ಅಲ್ಲಿ ಇಳಿದಿಲ್ಲ.
ಪ್ರಧಾನಿಗಳಿಂದ ನಡೆದ ಈ ಉದ್ಘಾಟನೆಗೆ ಕರ್ನಾಟಕ ಸರಕಾರಿ ಖಜಾನೆಯಿಂದ ವ್ಯಯವಾದ ಮೊತ್ತ 21.06 ಕೋಟಿ ರುಪಾಯಿ!ಮಾಹಿತಿ- ಕಾರ್ಕಳ ಶ್ರೀನಿವಾಸ್ pic.twitter.com/iTW74y2yIV
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) May 27, 2023
ಪ್ರಧಾನಮಂತ್ರಿಯವರು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿ ಇಂದು 90 ದಿನಗಳನ್ನು ಮುಗಿದಿದೆ (ಫೆಬ್ರವರಿ 27, 2023).
ಈ ಮೂರು ತಿಂಗಳಲ್ಲಿ ಒಂದೇ ಒಂದು ವಿಮಾನವೂ ಅಲ್ಲಿ ಹಾರಿಲ್ಲ, ಇಳಿದಿಲ್ಲ
ವಿಮಾನ ನಿಲ್ದಾಣದ ನಿರ್ಮಾಣ 450ಕೋಟಿ
ಉದ್ಘಾಟನ ವೆಚ್ಚ 21 ಕೋಟಿ
ಪ್ರತಿ ತಿಂಗಳು ನಿರ್ವಹಣೆ 25 ಲಕ್ಷ
ಇದಕ್ಕೆ ಯಾರು ಹೊಣೆ @BJP4Karnataka— A P (@AmjadAmjad1719) May 27, 2023
ಸ್ವಾಮಿ ಯಾವಾಗ ಶಿವಮೊಗ್ಗ ದಲ್ಲಿ ವಿಮಾನ ಬರೋದು…. ನಾವು ಇವತ್ತು ಬರುತ್ತೆ ನಾಳೆ ಬರುತ್ತೆ ಅಂತ ಮೂರು ತಿಂಗಳು ಅಯ್ತು ಓಪನ್ ಆಗಿ…. ಇನ್ನಾದ್ರೂ ಬೇಗ ಮಾಡ್ಸಿ…..
— Mahanthesh B V Madivala (@mahanyhesh) May 27, 2023
Today marks 90 days since PM @modi inaugurated 450 Cr Shimoga Airport (February 27)
In these three months, not a single flight has takeoff or landed there.
The amount spent by the Karnataka government treasury for this inauguration by the Prime Minister is 21.06 crore— A P (@AmjadAmjad1719) May 27, 2023
Here is one story of airport insugrated
PM inaugurated Shivamogga airport on 27th Feb before the Karnataka elections. In last 3 months, no flight has taken off or landed in Shivamogga since then. The event to inaugurate had costed the taxpayers 21 crore Rs.Source – @churumuri
— Sujjan Kumar (@Sujjan48) May 28, 2023
Narendra Modi inaugurated Shivamogga airport on 27th Feb before the Karnataka elections.
In last 3 months, no flight has taken off or landed in Shivamogga since then. The event to inaugurate had costed the taxpayers 21 crore Rs. Any response?— Paul Raja (@PaulRajaJetSet) May 27, 2023
ವಿಮಾನ ನಿಲ್ದಾಣದ ಈಗಿನ ಅಪ್ಡೇಟ್ ಏನು?
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮೊದಲಿಗೆ ಬೆಂಗಳೂರು – ಶಿವಮೊಗ್ಗ ರೂಟ್ನಲ್ಲಿ ವಿಮಾನ (Flight) ಹಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂಡಿಗೋ ಏರ್ಲೈನ್ಸ್ ವಿಮಾನ ಹಾರಾಟ ಶುರುವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದರು. ಈಗಾಗಲೇ ಇಂಡಿಗೋ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಶಿವಮೊಗ್ಗದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಇನ್ನು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಂಟರ್ನ್ಯಾಷನಲ್ ಏರ್ ಟ್ರಾಫಿಕ್ ಕೋಡ್ ಲಭಿಸಿದೆ. ಇದಾಗಿ ಕೆಲವೆ ತಿಂಗಳಲ್ಲಿ ವಿಮಾನ ಹಾರಾಟ ಶುರುವಾಗಲಿದೆ ಎಂದು ತಿಳಿದು ಬಂದಿದೆ. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಅತ್ಯಾಧುನಿಕ ಫೈರ್ ಇಂಜಿನ್ ಸೇರಿದಂತೆ ಹಲವು ಮಹತ್ವದ ಉಪಕರಣಗಳನ್ನು ತರಿಸಲಾಗಿದೆ.
ಇದನ್ನೂ ಓದಿ – ಗುಡ್ ನ್ಯೂಸ್, ಶಿವಮೊಗ್ಗ – ಬೆಂಗಳೂರು KSRTC ಇ-ಬಸ್ ಸೇವೆ ಶುರು, ಹೇಗಿದೆ ಬಸ್? ಟಿಕೆಟ್ ರೇಟ್ ಎಷ್ಟಿದೆ?
ಚುನಾವಣೆ ಮುಗಿಯುತ್ತಿದ್ದಂತೆ ವಿಮಾನ ನಿಲ್ದಾಣ ಮತ್ತು ವಿಮಾನ ಹಾರಾಟದ ಕುರಿತು ಜನರಲ್ಲಿ ಪುನಃ ಕುತೂಹಲ ಮೊಳಕೆಯೊಡೆದಿದೆ. ಉದ್ಘಾಟನೆಯಾಗಿ ಮೂರು ತಿಂಗಳು ಕಳೆಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಜನರು ಈ ಕುರಿತು ಪ್ರಶ್ನೆಗಳನ್ನು ಎತ್ತಲು ಆರಂಭಿಸಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422