ರೈಲ್ವೆ ನಿಲ್ದಾಣಕ್ಕೆ ಆರ್‌ಎಂಎಲ್‌ ಹೆಸರಿಡುವಂತೆ ಆಗ್ರಹ, ಡಿಸಿಗೆ ಮನವಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 9 SEPTEMBER 2023

SHIMOGA : ಸಾಗರದ ಜಂಬಗಾರು ರೈಲು ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ ಅವರ ಹೆಸರು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬಂಧನಕ್ಕೆ ಒಳಗಾಗಿದ್ದರು

ರಾಮಮನೋಹರ ಲೋಹಿಯಾ ಅವರು 1951ರ ಜೂನ್ 13ರಂದು ಜಂಬಗಾರು ರೈಲು ನಿಲ್ದಾಣದಲ್ಲಿ ‘ಉಳುವವನೇ ಹೊಲದೊಡೆಯ’ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾಗಿದ್ದರು. ಈ ಹೋರಾಟಕ್ಕೆ 2024ರ ಜೂ.13ಕ್ಕೆ 75 ವರ್ಷವಾಗಲಿದೆ. ಅಮೃತವರ್ಷದ ಸಂದರ್ಭ ಈ ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ ಅವರ ಹೆಸರು ಇಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ – ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ಮಂಜುನಾಥ ಗೌಡ ಮರು ಪ್ರವೇಶ, ಕುತೂಹಲ ಮೂಡಿಸಿದ ನೇಮಕ

ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವ್ಯವಸ್ಥಾಪಕ ಕಲ್ಲೂರು ಮೇಘರಾಜ್, ಪ್ರಮುಖರಾದ ಪ್ರೊ.ಕಲ್ಹನಾ, ಎಚ್.ಎಂ.ಸಂಗಯ್ಯ, ಎಸ್.ವಿ. ರಾಜಮ್ಮ, ಕೆ.ಆರ್.ಶಿವಣ್ಣ, ಶಂಕ್ರಾ ನಾಯ್ಕ, ನರಸಿಂಹಮೂರ್ತಿ, ಬಿ.ಟಿ. ಸೋಮಶೇಖರಯ್ಯ, ಪುಷ್ಪಲತಾ ಇದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment