ಶಿವಮೊಗ್ಗ, ಮೈಸೂರು, ಬೆಂಗಳೂರು ಪ್ರಯಾಣಿಕರೆ ಗಮನಿಸಿ, ಇನ್ನು 4 ದಿನ ರೈಲುಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ, ಏಕೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 21 JUNE 2023

MYSORE : ನೈಋತ್ಯ ರೈಲ್ವೆ ವತಿಯಿಂದ ಜೂ.25ರವರೆಗೆ ಇಂಜಿನಿಯರಿಂಗ್‌ ಸುರಕ್ಷತಾ ಕ್ರಮಗಳ ಪರಿಶೀಲನೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಹಲವು ರೈಲುಗಳ ಸಂಚಾರವನ್ನು (Railway Timing) ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಕೆಲವು ರೈಲುಗಳನ್ನು ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತಿದೆ.

shimoga railway station

ಶಿವಮೊಗ್ಗ ಡೆಮು ಎಕ್ಸ್‌ಪ್ರೆಸ್‌ ರೈಲು

ತುಮಕೂರು – ಶಿವಮೊಗ್ಗ ಡೆಮು ಎಕ್ಸ್‌ ಪ್ರೆಸ್‌ (ರೈಲು ಸಂಖ್ಯೆ 06513) – ಈ ರೈಲು ಜೂ.22ರಿಂದ 24ರವರೆಗೆ ಅರಸೀಕರೆವರೆಗೆ ಮಾತ್ರ ಸಂಚರಿಸಲಿದೆ.

ಶಿವಮೊಗ್ಗ – ತುಮಕೂರ ಡೆಮು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 06514) – ಈ ರೈಲು ಜೂ.22 ರಿಂದ 24ರವರೆಗೆ ಶಿವಮೊಗ್ಗ ನಿಲ್ದಾಣದ ಬದಲು ಅರಸೀಕೆರೆ ರೈಲ್ವೆ ನಿಲ್ದಾಣದಿಂದ ಸಂಚಾರ ಆರಂಭಿಸಲಿದೆ.

ಮಾರ್ಗ ಮಧ್ಯೆ ನಿಯಂತ್ರಣ

ಕೆಲವು ರೈಲುಗಳ ಸಂಚಾರವನ್ನು ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತಿದೆ. ರೈಲ್ವೆ ಇಲಾಖೆ ತಿಳಿಸಿರುವ ದಿನಾಂಕದಂದು ಈ ರೈಲುಗಳು ಮಾರ್ಗ ಮಧ್ಯೆ ನಿಧಾನವಾಗಿ ಸಂಚರಿಸಬಹುದು ಅಥವಾ ಹೆಚ್ಚುವರಿ ಹೊತ್ತು ಅಲ್ಲಲ್ಲಿ ಸ್ಟಾಪ್‌ ನೀಡಲಿವೆ. ಇದರಿಂದ ಕೊನೆಯ ನಿಲ್ದಾಣವನ್ನು ತಡವಾಗಿ (Railway Timing) ತಲುಪುವ ಸಾಧ್ಯತೆ ಇರಲಿದೆ.

ಶಿವಮೊಗ್ಗ – ಚಿಕ್ಕಮಗಳೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 07365) – ಈ ರೈಲನ್ನು ಜೂ.22ರಂದು ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ.

ತಾಳಗುಪ್ಪ – ಬೆಂಗಳೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20652) – ಈ ರೈಲನ್ನು ಜೂ.22 ಮತ್ತು 23ರಂದು ಮಾರ್ಗ ಮಧ್ಯೆ 20 ನಿಮಿಷ ನಿಯಂತ್ರಿಸಲಾಗುತ್ತದೆ.

PARISHRAMA NEET ACADEMY SHIVAMOGGA LIVE

ಬೆಂಗಳೂರು – ತಾಳಗುಪ್ಪ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20651) – ಈ ರೈಲನ್ನು ಜೂ.23ರಂದು ಮಾರ್ಗ ಮಧ್ಯೆ 15 ನಿಮಿಷ ನಿಯಂತ್ರಿಸಲಾಗುತ್ತದೆ.

ಮೈಸೂರು – ಶಿವಮೊಗ್ಗ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16225) – ಈ ರೈಲನ್ನು ಜೂ. 22, 23 ಮತ್ತು 24ರಂದು ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ.

ಶಿವಮೊಗ್ಗ – ಮೈಸೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16226) – ಈ ರೈಲನ್ನು ಜೂ. 22, 23 ಮತ್ತು 24ರಂದು ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ.

ಯಶವಂತಪುರ – ಶಿವಮೊಗ್ಗ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16579) – ಈ ರೈಲನ್ನು ಜೂ.25ರಂದು ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತಿದೆ.

ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16580) – ಈ ರೈಲನ್ನು ಜೂ. 25ರಂದು ಮಾರ್ಗ ಮಧ್ಯೆ 20 ನಿಮಿಷ ನಿಯಂತ್ರಿಸಲಾಗುತ್ತಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment