ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 8 SEPTEMBER 2024 : ಹವಾಮಾನ ಇಲಾಖೆ ಶಿವಮೊಗ್ಗ ಜಿಲ್ಲೆಯಲ್ಲಿ ಜೋರು ಮಳೆಯಾಗಲಿದೆ (Rain) ಎಂದು ಯಲ್ಲೊ ಅಲರ್ಟ್ ಘೋಷಿಸಿದೆ. ಮೇಲ್ಮೈ ಗಾಳಿ ಜೋರಿರಲಿದೆ ಎಂದು ಎಚ್ಚರಿಕೆ ನೀಡಿದೆ. ಈ ಮಧ್ಯೆ ಜಿಲ್ಲೆಯ ವಿವಿಧೆಡೆ ಮಳೆ ಸುರಿಯುತ್ತಿದೆ.
ಶಿವಮೊಗ್ಗ ನಗರದ ವಿವಿಧೆಡೆ ಬೆಳಗ್ಗೆಯಿಂದಲೆ ಆಗಾಗ ಮಳೆಯಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಕೆಲವು ಹೊತ್ತು ಜೋರಾಗಿ ಮಳೆಯಾಗುತ್ತಿದೆ. ಸಂಜೆ ವೇಳೆಗೆ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ.
ಯಾವ್ಯಾವ ಊರಿನಲ್ಲಿ ಮಳೆಯಾಗುತ್ತಿದೆ?
ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿತ್ತು. ತೀರ್ಥಹಳ್ಳಿ ತಾಲೂಕಿನ ಬಿದರಗೋಡು, ಅರೆಹಳ್ಳಿ, ತೀರ್ಥಮತ್ತೂರು, ಸಾಲ್ಗೋಡು, ಹೊನ್ನೇತಾಳು, ಹೊಸಹಳ್ಳಿ, ನೆರಟೂರು, ಆರಗ, ನೊಣಬೂರು, ಬೆಜ್ಜವಳ್ಳಿ, ಭಾಂಡ್ಯ ಕುಕ್ಕೆ, ತ್ರಯಂಬಕಪುರ, ದೇಮ್ಲಾಪುರ, ಹಾದಿಗಲ್ಲು, ಶಿವಮೊಗ್ಗ ತಾಲೂಕಿನ ಸಂತೆ ಕಡೂರು, ಬಿದರೆ, ಪಿಳ್ಳಂಗೆರೆ, ಅಬ್ಬಲಗೆರೆ, ಕೂಡ್ಲಿಯಲ್ಲಿ ಮಳೆಯಾಗುತ್ತಿದೆ.
ಇದನ್ನೂ ಓದಿ » ಸಾವಿರ ಕೋಟಿಯ ಶಿವಮೊಗ್ಗ ಸ್ಮಾರ್ಟ್ ಸಿಟಿಯಲ್ಲಿ ಓಡಾಡುವಾಗ ಎಚ್ಚರ.. ಎಚ್ಚರ.., ಯಾಕೆ ಗೊತ್ತಾ?
ಭದ್ರಾವತಿಯ ಸಿಂಗನಮನೆ, ಅರಳಿಕೊಪ್ಪ, ಹಿರಿಯೂರು, ಮಾವಿನಕೆರೆ, ಯರೆಹಳ್ಳಿ, ಕುಮಾರನಹಳ್ಳಿ, ಅರಳಹಳ್ಳಿ, ಕಾಗೆಕೊಡಮಗ್ಗಿ, ಬಿಳಕಿ, ಅರಕೆರೆ, ಎಮ್ಮಹಟ್ಟಿ, ನಿಂಬೆಗೊಂದಿ, ಶಿಕಾರಿಪುರ ತಾಲೂಕಿನ ಕಲ್ಮನೆ, ಚುರ್ಚಿಗುಂಡಿ, ಈಸೂರು, ಗಾಮ, ಮುದ್ದನಹಳ್ಳಿ, ಕಾಗಿನಲ್ಲಿ, ಮಾರವಳ್ಳಿ, ಬಗನಕಟ್ಟೆ, ಗೊಡ್ಡನಕೊಪ್ಪ, ಹಿರೆಜಂಬೂರು, ಚಿಕ್ಕಜಂಬೂರು, ತಾಳಗುಂದ, ಬಳ್ಳಿಗಾವಿ, ಇನಾಂ ಅಗ್ರಹಾರ, ಚಿಕ್ಕಮರಡಿಯಲ್ಲಿ ಮಳೆಯಾಗುತ್ತಿದೆ.
ಇದನ್ನೂ ಓದಿ » ರೈಲಲ್ಲಿ ಶಿವಮೊಗ್ಗಕ್ಕೆ ಬರುವವರಿಗೆ ಸ್ವಾಗತ ಕೋರುತ್ತಿದೆ ಮೃತ್ಯು ಕೂಪ, ರಕ್ತ ಹೀರಲು ಕಾಯುತ್ತಿದೆ ಚರಂಡಿ ಮುಚ್ಚಳ
ಸೊರಬ ತಾಲೂಕಿನ ಬೆನ್ನೂರು, ಗುಡುವಿ, ತವನಂದಿ, ದ್ವಾವನಹಳ್ಳಿ, ತತ್ತೂರು, ಹಳೆಸೊರಬ, ನ್ಯಾರ್ಸಿ, ಹೆಚ್ಚೆ, ಮಟುಗುಪ್ಪೆ, ಇಂಡುವಳ್ಳಿ, ಚಿತ್ತೂರು, ಸಾಗರದ ಭೀಮನಕೋಣೆ, ಹೊಸೂರು, ಆಚಾಪುರ, ತ್ಯಾಗರ್ತಿ, ಭೀಮನೇರಿ, ಸಿರವಂತೆ, ಖಾಂಡಿಕ, ಹಿರೆನಲ್ಲೂರು, ಹೊಸನಗರದ ಮೇಲಿನ ಬೆಸಿಗೆ, ಸೋನಲೆ, ಮುಂಬಾರು, ಕೋಡೂರು, ಮಾರುತಿಪುರ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ.
ಇದನ್ನೂ ಓದಿ » ಭದ್ರಾವತಿಯ ಅರಬಿಳಚಿಯಲ್ಲಿ ನೀರವ ಮೌನ, ಬಂದೋಬಸ್ತ್ ಹೆಚ್ಚಳ, ಈಗ ಹೇಗಿದೆ ಪರಿಸ್ಥಿತಿ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422