ಶಿವಮೊಗ್ಗ, ಭದ್ರಾವತಿಯಲ್ಲಿ ಗುಡುಗು ಸಹಿತ ಮಳೆ, ನಿರ್ಮಾಣ ಹಂತದ ಶೆಡ್ ಕುಸಿತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA RAIN | 25 ಏಪ್ರಿಲ್ 2022

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಇವತ್ತು ಜೋರು ಮಳೆಯಾಗಿದೆ. ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದವರಿಗೆ ಮಳೆ ತುಸು ತಂಪು ನೀಡಿದೆ.

ಬೆಳಗ್ಗೆಯಿಂದಲೂ ಜೋರು ಬಿಸಿಲು ಆವರಿಸಿತ್ತು. ಮಧ್ಯಾಹ್ನದ ವೇಳೆಗೆ ವಾತಾವರಣ ಬದಲಾಯಿತು. ಮೋಡ ಕವಿದು, ಗುಡುಗು ಸಹಿತ ಮಳೆ ಸುರಿಯಿತು. ಶಿವಮೊಗ್ಗ ನಗರದಲ್ಲಿ ಸಂಜೆ ವೇಳೆಗೆ ಮಳೆ ಆರಂಭವಾಯಿತು. ಬಹು ಹೊತ್ತು ಜಿಟಿ ಜಿಟಿ ಮಳೆ ಬಂದಿದೆ.

ಶಿವಮೊಗ್ಗ ತಾಲೂಕಿನ ಹಲವು ಭಾಗಗಳಲ್ಲಿ ಮಳೆಯಾಗಿದೆ. ಜೋರು ಮಳೆಯಾಗದ್ದರಿಂದ ಧಗೆ ಹೆಚ್ಚುವ ಸಾದ್ಯತೆ ಇದೆ.

ಭದ್ರಾವತಿಯಲ್ಲಿಯೂ ಇವತ್ತು ಮಳೆಯಾಗಿದೆ. ತಾಲೂಕಿನಾದ್ಯಂತ ಮಳೆಯಾಗಿರುವ ವರದಿಯಾಗಿದೆ. ಗುಡುಗು, ಗಾಳಿ ಸಹಿತ ಮಳೆಯಾಗಿದೆ. ಆದ್ದರಿಂದ ಕೆಲವು ಕಡೆಗೆ ಮರಗಳ ಧರೆಗುರುಳಿದೆ ಎಂದು ಹೇಳಲಾಗುತ್ತಿದೆ. ತಾರಿಕೆಟ್ಟೆ ಗ್ರಾಮದಲ್ಲಿ ನಿರ್ಮಾಣ ಹಂತದ ಶೆಡ್ ಛಾವಣಿ ಕುಸಿದು ಬಿದಿದೆ.

ಇದನ್ನೂ ಓದಿ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಾವೆಲ್ಲ ಹೆಸರು ಇಡುವಂತೆ ಒತ್ತಾಯವಿದೆ? ಇಲ್ಲಿದೆ ಲಿಸ್ಟ್

Shimoga Nanjappa Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment