ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 28 NOVEMBER 2023
SHIMOGA : ಭಾರಿ ಬಿಸಿಲಿನಿಂದ ಕಂಗೆಟ್ಟಿದ್ದ ಶಿವಮೊಗ್ಗ ಮತ್ತು ಭದ್ರವಾತಿ ಜನರಿಗೆ ವರುಣ ತುಸು ನೆಮ್ಮದಿ ನೀಡಿದ್ದಾನೆ. ಎರಡು ತಾಲೂಕಿನ ವಿವಿಧೆಡೆ ಮಳೆ ಅಬ್ಬರಿಸುತ್ತಿದೆ.
ಶಿವಮೊಗ್ಗ ನಗರ ಮತ್ತು ತಾಲೂಕಿನ ವಿವಿಧೆಡೆ ಮಳೆ ಸುರಿಯುತ್ತಿದೆ. ಮಾಚೇನಹಳ್ಳಿ, ಮಲವಗೊಪ್ಪ, ಹರಿಗೆ, ವಿದ್ಯಾನಗರ ಸುತ್ತಮುತ್ತ ಮಳೆಯಾಗುತ್ತಿದೆ. ಇನ್ನು, ಭದ್ರಾವತಿ ತಾಲೂಕಿನ ವಿವಿಧೆಡೆಯು ಮಳೆಯಾಗುತ್ತಿರುವ ವರದಿಯಾಗಿದೆ. ಭದ್ರಾವತಿ ಪಟ್ಟಣ, ಅರೆಬಿಳಚಿ, ದಾಸರಕಲ್ಲಹಳ್ಳಿ, ಮಂಗೋಟೆಯಲ್ಲಿ ಜೋರು ಮಳೆಯಾಗುತ್ತಿದೆ.
PHOTO : ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲ್ಲಿ ಮಳೆ
ಶಿಕಾರಿಪುರ, ಸೊರಬದಲ್ಲು ಮಳೆ
ಶಿಕಾರಿಪುರ ತಾಲೂಕಿನ ಹಲವೆಡೆ ಮಳೆಯಾದ ವರದಿಯಾಗಿದೆ. ಶಿಕಾರಿಪುರದ ಚಿಕ್ಕಜಂಬೂರು, ಹಿರೇಜಂಬೂರು ಗ್ರಾಮಗಳಲ್ಲಿ ಜೋರು ಮಳೆಯಾಗುತ್ತಿದೆ. ಜಕ್ಕನಹಳ್ಳಿ, ಮಡುಬಸಿದ್ದಾಪುರ, ಅಮಟೆಕೊಪ್ಪ, ಅಂಬಾರಗೊಪ್ಪ, ಗೊಡ್ಡನಕೊಪ್ಪ, ಗುಡ್ಡದತುಮ್ಮೇಕಟ್ಟೆ ಸುತ್ತಮುತ್ತ ಸಾಧಾರಣ ಮಳೆಯಾಗುತ್ತಿದೆ. ಸೊರಬ ತಾಲೂಕಿನ ಕೆಲವೆಡೆ ಮಳೆಯಾದ ವರದಿಯಾಗಿದೆ.
ಇದನ್ನೂ ಓದಿ – ತೀರ್ಥಹಳ್ಳಿ ತುಂಗಾ ಕಾಲೇಜು ಸಮೀಪ ಭೀಕರ ಅಪಘಾತ, ನಜ್ಜುಗುಜ್ಜಾದ ಫಾರ್ಚುನರ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422