ಶಿವಮೊಗ್ಗ ನಗರದಲ್ಲಿ ಮಳೆ ಅವಾಂತರ, ಎಲ್ಲೆಲ್ಲಿ ಏನೇನಾಗಿದೆ? ಭಾಗ – 1

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | RAIN DISASTER | 19 ಮೇ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಧಾರಕಾರ ಮಳೆಗೆ ಶಿವಮೊಗ್ಗ ನಗರದ ವಿವಿಧೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ಬಡಾವಣೆಗಳ ರಸ್ತೆಗಳು ಜಲಾವೃತವಾಗಿವೆ. ಮನೆಗಳಿಗು ಮಳೆ ನುಗ್ಗಿ ಅವಾಂತರ ಸೃಷ್ಟಿಸಿದೆ.

ಶಿವಮೊಗ್ಗ ನಗರದಲ್ಲಿ ಕಳೆದ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ ನಗರದ ವಿವಿಧ ಬಡಾವಣೆಗಳು ಜಲಾವೃತಗೊಂಡಿವೆ. ಹಲವು ಕಡೆ ನೀರು ನುಗ್ಗಿದೆ.

ಶಾಲೆ ಗ್ರೌಂಡ್ ಜಲಾವೃತ

ಮಳೆ ನೀರು ಹೊರಗೆ ಹೋಗಲು ಅವಕಾಶ ಇಲ್ಲದೆ ಶಾಲೆಯೊಂದರ ಕ್ರೀಡಾಂಗಣ ಕೆರೆಯಂತಾಗಿದೆ. ಶಿವಮೊಗ್ಗದ ಮಂಡ್ಲಿ ಸರ್ಕಾರಿ ಶಾಲೆಯ ಕ್ರೀಡಾಂಗಣ ಕೆರೆಯಂತಾಗಿ ಪರಿವರ್ತನೆಯಾಗಿದೆ. ಶಾಲೆಗೆ ರಜೆ ಘೋಷಣೆ ಮಾಡಿರುವ ವಿಚಾರ ಗೊತ್ತಾಗದೆ ಬಂದ ಮಕ್ಕಳು, ಕಾಂಪೌಂಡ್ ಒಳಗೆ ಬರಲು ಬೆಚ್ಚಿಬಿದ್ದರು.

Mandli School

ರಸ್ತೆ ಮೇಲೆ ಹರಿದ ನೀರು

ವಿನೋಬನಗರದ 60 ಅಡಿ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಚರಂಡಿಗೆ ನೀರು ಹೋಗುವ ಬದಲು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ.

ತುಂಬಿ ಹರಿದ ಚಾನಲ್

ಶಿವಮೊಗ್ಗದ ವೆಂಕಟೇಶ ನಗರದಲ್ಲಿ ಚಾನಲ್ ತುಂಬಿ ಹರಿಯುತ್ತಿದೆ. ಭಾರಿ ಮಳೆಯಿಂದಾಗಿ ಚಾನಲ್’ನಲ್ಲಿ ಭರ್ತಿಯಾಗಿದ್ದು, ನೀರು ರಭಸವಾಗಿ ಹರಿಯುತ್ತಿದೆ. ಇದೆ ರೀತಿ ಮಳೆ ಮುಂದುವರೆದರೆ ಇಲ್ಲಿನ ಮನೆಗಳಿಗೆ ನೀರು ನುಗ್ಗುವ ಆತಂಕವಿದೆ. ಈಗಾಗಲೇ ಯುಜಿಡಿಗಳಲ್ಲಿ ನೀರು ರಿವರ್ಸ್ ಬರುತ್ತಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.

ರಸ್ತೆ ಮೇಲೆ ನಿಂತ ನೀರು

ಗೋಪಾಲಗೌಡ ಬಡಾವಣೆಯ ಕೆಲವು ರಸ್ತೆಗಳು ಜಲಾವೃತವಾಗಿವೆ. ರಸ್ತೆ ಮೇಲೆ ನೀರು ನಿಂತಿದೆ. ಬಡಾವಣೆ ಎ ಬ್ಲಾಕ್ ಮೇಲೆ ರಸ್ತೆ ಮೇಲೆ ನೀರು ನಿಂತಿದೆ. ಇನ್ನು, ಮಳೆ ರಭಸಕ್ಕೆ ಯುಜಿಡಿ ನೀರು ಮನೆಗಳ ಒಳಗೆ ನುಗ್ಗಿದೆ.

ಚರಂಡಿ ನೀರು ರಸ್ತೆಗೆ

ಶಿವಮೊಗ್ಗದ ಸುಬ್ಬಯ್ಯ ಆಸ್ಪತ್ರೆ ಹಿಂಭಾಗ ಹೊಸಮನೆ ಬಡಾವಣೆಯಲ್ಲಿ ಚರಂಡಿ ನೀರು ಉಕ್ಕಿ ರಸ್ತೆಯಲ್ಲಿ ಹರಿಯುತ್ತಿದೆ. ಸ್ಮಾರ್ಟ್ ಸಿಟಿ ಕಾಮಗಾರಿಯ ಬಳಿಕ ಈ ಸಮಸ್ಯೆ ಉದ್ಭವವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮನೆಗಳಿಗೆ ಚರಂಡಿ ನೀರು ಹರಿದು ಭೀತಿ ಉಂಟು ಮಾಡಿದೆ.

ಕೋರ್ಟ್ ಮುಂಭಾಗ ರಸ್ತೆ ಜಲಾವೃತ

ಶಿವಮೊಗ್ಗ ಕೋರ್ಟ್ ಮುಂಭಾಗ ಬಾಲರಾಜ ಅರಸ್ ರಸ್ತೆಯ ಒಂದು ಭಾಗ ಸಂಪೂರ್ಣ ಜಲಾವೃತವಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ಅಡಿ ಹೊಸ ಚರಂಡಿ ನಿರ್ಮಾಣ ಮಾಡಲಾಗಿದೆ. ಆದರೂ ನೀರು ಚರಂಡಿಗೆ ಹೋಗದೆ ರಸ್ತೆಯ ಮೇಲೆ ನಿಂತಿದೆ.

ರಸ್ತೆ ಮೇಲೆ ಮೊಣಕಾಲುದ್ದ ನೀರು

ಬಾಲರಾಜ ಅರಸ್ ರಸ್ತೆಯಿಂದ ಕಾಂಗ್ರೆಸ್ ಕಚೇರಿಗೆ ತರಳುವ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಈ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತಿದೆ. ನೀರು ಸರಾಗವಾಗಿ ಹರಿದು ಚರಂಡಿಗೆ ಹೋಗುವ ವ್ಯವಸ್ಥೆ ಇಲ್ಲದಿರುವುದೆ ಇದಕ್ಕೆ ಕಾರಣವಾಗಿದೆ.

ಇದನ್ನೂ ಓದಿ BREAKING NEWS | ಶಿವಮೊಗ್ಗದಲ್ಲಿ ಇವತ್ತು ರೆಡ್ ಅಲರ್ಟ್ ಘೋಷಣೆ

ರಾಜಾ ಕಾಲುವೆ ನೀರು ಮನೆಗೆ

ಚಾಲುಕ್ಯನಗರದಲ್ಲಿ ರಾಜಾ ಕಾಲುವೆ ನೀರು ಮನೆಗಳು, ಖಾಲಿ ಜಾಗಕ್ಕೆ ನುಗ್ಗಿದೆ. ಇಲ್ಲಿ ರಾಜಾ ಕಾಲುವೆ ಕಾಮಗಾರಿ ಸರಿಯಾಗಿ ಮಾಡದೆ ಇರುವುದರಿಂದ ನೀರು ಪಕ್ಕದ ಮನೆಗಳಿಗೆ ನುಗ್ಗಿದೆ. ಚೌಡೇಶ್ವರಿ ದೇವಸ್ಥಾನದ ಹಿಂಭಾಗದ ಖಾಸಗಿ ಶಾಲೆ ಆವರಣ, ಸಮುದಾಯ ಭವನದ ಆವರಣಕ್ಕೂ ರಾಜಾ ಕಾಲುವೆ ನೀರು ನುಗ್ಗಿದೆ.

ಮನೆಗಳಲ್ಲಿ ಕರೆಂಟ್ ಹೊಡೆಯುತ್ತಿದೆ

ಇತ್ತ ಟ್ಯಾಂಕ್ ಮೊಹಲ್ಲಾದ ವಿವಿಧೆಡೆಯು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತವಾಗಿದೆ. ಕೆಲವು ಮಗಳಲ್ಲಿ ಗ್ರೌಂಡಿಂಗ್ ಸಮಸ್ಯೆ ಉಂಟಾಗಿದೆ. ಮೆಸ್ಕಾಂಗೆ ಕರೆ ಮಾಡಿದರೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Shimoga Nanjappa Hospital

ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment