ಶಿವಮೊಗ್ಗ, ಭದ್ರಾವತಿಯಲ್ಲಿ ಗುಡುಗು ಸಹಿತ ಮಳೆ, ನಿಟ್ಟುಸಿರು ಬಿಟ್ಟ ಜನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 20 APRIL 2023

SHIMOGA / BHADRAVATHI : ಬಾರಿ ಬಿಸಿಲಿನಿಂದಾಗಿ ಕಾದ ಕಾವಲಿಯಂತಾಗಿದ್ದ ಶಿವಮೊಗ್ಗ, ಭದ್ರಾವತಿಯಲ್ಲಿ ಮಳೆಯಾಗುತ್ತಿದೆ (Rain). ಗುಡುಗು ಸಹಿತ ಮಳೆ ಸುರಿಯುತ್ತಿರುವುದರಿಂದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Rain-in-Shivamogga-City

ಶಿವಮೊಗ್ಗ ರಿಪೋರ್ಟ್‌ : ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಗಾಳಿ, ಗುಡುಗು ಸಹಿತ ಜೋರಾಗಿ ಮಳೆಯ (Rain) ಸುರಿಯಲು ಆರಂಭವಾಗಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ತಂಪು ವಾತಾವರಣ ನಿರ್ಮಾಣವಾಗಿದೆ.

ಭದ್ರಾವತಿ ರಿಪೋರ್ಟ್‌ : ಗುಡುಗು, ಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆಯಾಗುತ್ತಿದ್ದಂತೆ ಖುಷಿಯಾದರು. ದಿಢೀರ್‌ ಮಳೆಯಿಂದಾಗಿ ಜನರು ಅಂಗಡಿಗಳು, ಕಟ್ಟಡಗಳ ಮುಂದೆ ನಿಲ್ಲಬೇಕಾಯಿತು.

shivamogga live news whatsappa number

ಭಾರಿ ಬಿಸಿಲಿಗೆ ಕಂಗೆಟ್ಟಿದ್ದರು

ಕಳೆದ ಕೆಲವು ದಿನದಿಂದ ಭಾರಿ ಬಸಿಲಿಗೆ ಶಿವಮೊಗ್ಗ ಜಿಲ್ಲೆ ಕಾದ ಕಾವಲಿಯಂತಾಗಿತ್ತು. ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ತೀವ್ರ ಶಕೆ, ಧಗೆಯಿಂದಾಗಿ ಜನರು ಹೈರಾಣಾಗಿದ್ದರು. ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಿ ಆಸ್ಪತ್ರೆಗೆ ಅಲೆಯುವಂತಾಗಿತ್ತು. ಅಲ್ಲದೆ, ಶಕೆ, ದಾಹ ನೀಗಿಸಿಕೊಳ್ಳಲು ತಂಪು ಪಾನಿಯ, ಎಳನೀರು, ಏರ್‌ ಕೂಲರ್‌, ಫ್ಯಾನುಗಳ ಮೊರೆ ಹೋಗಿದ್ದರು. ಈಗ ಮಳೆ ಆಗಿರುವುದರಿಂದ ಶಿವಮೊಗ್ಗ, ಭದ್ರಾವತಿಯಲ್ಲಿ ಕೂಲ್‌ ಕೂಲ್‌ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ – ಕಾದ ಕಾವಲಿಯಂತಾಗಿದೆ ಮಲೆನಾಡು, ಶಿವಮೊಗ್ಗದಲ್ಲಿ ಎಷ್ಟಿದೆ ತಾಪಮಾನ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment