ಮಳೆ ಅವಾಂತರ 3 | ಭಾರಿ ಮಳೆಗೆ ಮುಳುಗಿದ ರವೀಂದ್ರ ನಗರ

SHIVAMOGGA LIVE NEWS | RAIN EFFECT | 19 ಮೇ 2022

ಬೆಳಗ್ಗೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ರವೀಂದ್ರ ನಗರ ಬಡಾವಣೆ ತತ್ತರಿಸಿ ಹೋಗಿದೆ. ರಸ್ತೆಗಳ ಮೇಲೆ ನೀರು ನಿಂತಿದ್ದು, ಜನ ಆತಂಕಕ್ಕಿಡಾಗಿದ್ದಾರೆ.

ರವೀಂದ್ರ ನಗರ ಬಡಾವಣೆಯ 1 ರಿಂದ 5ನೇ ಅಡ್ಡರಸ್ತೆವರೆಗೂ ಜಲಾವೃತವಾಗಿದೆ. ಉಷಾ ನರ್ಸಿಂಗ್ ಹೋಂ ಕಡೆಯಿಂದ ರವೀಂದ್ರ ನಗರಕ್ಕೆ ಹೋಗುವ ಮಾರ್ಗ ಸಂಪೂರ್ಣ ಬಂದ್ ಮಾಡಲಾಗಿದೆ.

ಬಾಕ್ಸ್ ಚರಂಡಿಗೆ ನೀರು ಹೋಗುತ್ತಿಲ್ಲ

ಒಂದೆಡೆ ರಾಜೇಂದ್ರ ನಗರದಲ್ಲಿ ಚಾನೆಲ್ ತುಂಬಿ ನೀರು ಹೊರಗೆ ಹರಿಯುತ್ತಿದೆ. ಮತ್ತೊಂದೆಡೆ ಮಳೆ ನೀರು ಬಾಕ್ಸ್ ಚರಂಡಿಗೆ ಹೋಗಲಾಗದೆ ರಸ್ತೆ ಮೇಲೆ ನಿಲ್ಲುತ್ತಿದೆ. ಆದ್ದರಿಂದ ಹಲವು ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿದೆ. ಪೀಠೋಪಕರಣಗಳು ಸೇರಿದಂತೆ ಹಲವು ವಸ್ತುಗಳಿಗೆ ಹಾನಿ ಉಂಟಾಗಿದೆ.

Shimoga Nanjappa hospital

ರವೀಂದ್ರ ನಗರ ಐದು ಅಡ್ಡರೆಸ್ತಯಲ್ಲೂ ವಾಹನ ಸಂಚಾರವಿಲ್ಲ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೂ ಮಳೆ ನೀರಿನಿಂದ ಹಾನಿ ಉಂಟಾಗಿದೆ.

ಇದನ್ನೂ ಓದಿ – ಮಳೆ ಅವಾಂತರ 2 | ಗಾಂಧಿ ನಗರದ ರಸ್ತೆಗಳಲ್ಲಿ ಮೊಣಕಾಲುದ್ದ ನೀರು

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 19, 2022 at 3:49 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 19, 2022

Leave a Comment