ಶಿವಮೊಗ್ಗ ಲೈವ್
ಶಿವಮೊಗ್ಗ: ಸಿಟಿಯಲ್ಲಿ ಮತ್ತೆ ಮಳೆ (Rain) ಅಬ್ಬರಿಸುತ್ತಿದೆ. ಶಿವಮೊಗ್ಗ ನಗರದಲ್ಲಿ ಬಹು ಹೊತ್ತಿನಿಂದ ಗಂಟೆಯಿಂದ ನಿರಂತರ ಮಳೆಯಾಗುತ್ತಿದೆ. (ಈ ಸುದ್ದಿಯನ್ನು ಇನ್ನು 34 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಇಂದು ಬೆಳಗ್ಗೆಯಿಂದ ಮೋಡದ ಕವಿದ ವಾತಾವರಣ ಇತ್ತು. ಆಗಾಗ ಬಿಸಿಲು ಪ್ರತ್ಯಕ್ಷವಾಗಿ ಸ್ವಲ್ಪ ಹೊತ್ತಿಗೆ ಮರೆಯಾಗುತ್ತಿತ್ತು. ಮಧ್ಯಾಹ್ನದ ವೇಳೆ ಕೆಲವು ಹೊತ್ತು ನಗರದ ವಿವಿಧೆಡೆ ಮಳೆಯಾಗಿತ್ತು. ಸಂಜೆ ಹೊತ್ತಿಗೆ ಮತ್ತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಜೋರು ಮಳೆಯಾಗುತ್ತಿದೆ.
ಜಿಲ್ಲೆಯ ವಿವಿಧೆಡೆ ಮಳೆ
ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯು ಮಳೆಯಾಗುತ್ತಿರುವ ವರದಿಯಾಗಿದೆ. ಭದ್ರಾವತಿಯ ಅರಕೆರೆ, ಅರೆಬಿಳಚಿ, ಕಲ್ಲಿಹಾಳ್, ನಾಗತಿಬೆಳಗಲು, ತಡಸ, ಅಗರದಹಳ್ಳಿ, ಗುಡುಮಘಟ್ಟ, ನಿಂಬೆಗೊಂದಿ, ಹಿರಿಯೂರಿನಲ್ಲಿ ಮಳೆಯಾಗುತ್ತಿದೆ. ತೀರ್ಥಹಳ್ಳಿಯ ವಿವಿಧೆಡೆ ಸಾಧಾರಣ ಮಳೆಯಾಗುತ್ತಿದೆ. ಆಗುಂಬೆ ಸುತ್ತಮುತ್ತ ಜೋರು ಮಳೆಯಾಗುತ್ತಿರುವ ವರದಿಯಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ನಾಳೆ ಉಚಿತ ಇಸಿಜಿ ತಪಾಸಣೆ ಶಿಬಿರ

Rain in Shimoga city

ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: