ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 MARCH 2023
SHIMOGA : ಬಿಸಿಲಿನ ಧಗೆಯಿಂದ ಹೈರಾಣಾಗಿದ್ದ ಶಿವಮೊಗ್ಗದಲ್ಲಿ ವರುಣ ಪ್ರತ್ಯಕ್ಷವಾಗಿದ್ದಾನೆ. ಸಂಜೆ ವೇಳೆಗೆ ಮಳೆ (rain in Shimoga) ಸುರಿಯಲು ಶುರುವಾಗಿದೆ. ಇದರಿಂದ ನಗರದಲ್ಲಿ ವಾತಾವರಣ ತಂಪಾಗುವ ನಿರೀಕ್ಷೆ ಇದೆ.
ಶಿವಮೊಗ್ಗ ನಗರದಲ್ಲಿ ಬೆಳಗ್ಗೆ ಸ್ವಲ್ಪ ಹೊತ್ತು ಮೋಡ ಕವಿದ ವಾತಾವರಣವಿತ್ತು. ಕೆಲ ಸಮಯದ ಬಳಿಕ ಬಿಸಿಲು ಕಾಣಿಸಿಕೊಳ್ಳುತ್ತಿತ್ತು. ಸಂಜೆ ವೇಳೆಗೆ ಸಂಪೂರ್ಣ ಮೋಡ ಕವಿದು, ಗುಡುಗ ಸಹಿತ ಮಳೆ ಸುರಿಯಲು ಆರಂಭವಾಗಿದೆ.
ಮಂಗಳವಾರ ಸಂಜೆ ಹೊತ್ತಿನಲ್ಲಿಯು ಒಂದೆರಡು ಕ್ಷಣ ಮಳೆ (rain in Shimoga) ಹನಿ ಬಿದ್ದಿತ್ತು. ಶಿವಮೊಗ್ಗ ಜಿಲ್ಲೆಯಾದ್ಯಂತ ವಿವಿಧೆಡೆ ಮಳೆಯಾದ ವರದಿಯಾಗಿದೆ.
ಇದನ್ನೂ ಓದಿ – ಗೋಪಿ ಸರ್ಕಲ್ ನಲ್ಲಿ ಡಿಜೆ, ರೈನ್ ಡಾನ್ಸ್, ಕುಣಿದು ಕುಪ್ಪಳಿಸಿದ ಶಿವಮೊಗ್ಗದ ಜನ, ಹೇಗಿತ್ತು ಸಡಗರ? ಫೋಟೊ ಸಹಿತ ರಿಪೋರ್ಟ್
ಸಮುದ್ರದ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದ ವಿವಿಧೆಡೆ ಐದು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. ಮಾ.14ರಿಂದ 18ರವರೆಗೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಲಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422