ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ: ಕರ್ನಾಟಕ ರಾಜ್ಯೋತ್ಸವದ (Rajyotsava) ಅಂಗವಾಗಿ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ ಸಂಬಂಧ ವಿವಿಧ ಹಾಡುಗಳಿಗೆ ನೃತ್ಯ ಮಾಡಿದರು.
ಸೈನ್ಸ್ ಮೈದಾನದಿಂದ ಮೆರವಣಿಗೆ
ಕಾರ್ಯಕ್ರಮಕ್ಕು ಮುನ್ನ ನಗರದಲ್ಲಿ ಶ್ರೀ ಭುವನೇಶ್ವರಿ ದೇವಿಯ ಮೆರವಣಿಗೆ ನಡೆಯಿತು. ಸೈನ್ಸ್ ಮೈದಾನದಿಂದ ನೆಹರು ಕ್ರೀಡಾಂಗಣದವರೆಗೆ ಮೆರವಣಿಗೆ ಮಾಡಲಾಯಿತು. ವಿವಿಧ ಕಲಾತಂಡಗಳು, ಹಲವು ಇಲಾಖೆಗಳ ಸ್ತಬ್ಧಚಿತ್ರ ಭಾಗವಹಿಸಿದ್ದವು.
ಸ್ಟೇಡಿಯಂನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ಧ್ವಜಾರೋಹಣದ ನಂತರ ನೆಹರು ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದಕ್ಕು ಮೊದಲು ಕೆಎಸ್ಆರ್ಪಿ, ಜಿಲ್ಲಾ ಪೊಲೀಸ್ ಮತ್ತು ಪೊಲೀಸ್ ಬ್ಯಾಂಡ್ ತಂಡದಿಂದ ಪಥ ಸಂಚಲನ ನಡೆಯಿತು.
ಇದನ್ನೂ ಓದಿ » ಅಬ್ಬಲಗೆರೆ ಸಮೀಪ ಕಾರು – ಬೈಕ್ ಡಿಕ್ಕಿ, ಕೊಮ್ಮನಾಳು ಯುವಕನಿಗೆ ಗಂಭೀರ ಗಾಯ
ಬಹುಮಾನ ವಿತರಣೆ
ಸ್ತಬ್ಧ ಚಿತ್ರ ವಿಭಾಗದಲ್ಲಿ ಕೆಎಸ್ಆರ್ಟಿಸಿ ಪ್ರಥಮ ಸ್ಥಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ್ವಿತೀಯ ಸ್ಥಾನ, ಸಮಾಜ ಕಲ್ಯಾಣ ಇಲಾಖೆಯ ಸ್ತಬ್ಧಚಿತ್ರ ತೃತೀಯ ಸ್ಥಾನ ಪಡೆಯಿತು. ಇನ್ನು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಾವೀರ ವಿದ್ಯಾಲಯದ ಮಕ್ಕಳು ಪ್ರದರ್ಶಿಸಿದ ಕರ್ನಾಟಕ ಕಲಾ ವೈಭವ ರಿಮಿಕ್ಸ್ ಹಾಡಿಗೆ ನೃತ್ಯ ಪ್ರಥಮ ಬಹುಮಾನ, ಆದಿಚುಂಚನಗಿರಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಕರ್ನಾಟಕದ ಸಾಂಸ್ಕೃತಿಕ ವೈಭವದ ರಿಮಿಕ್ಸ್ ಹಾಡಿಗೆ ನೃತ್ಯ ದ್ವಿತೀಯ ಸ್ಥಾನ, ಡಿವಿಎಸ್ ವಿದ್ಯಾಸಂಸ್ಥೆಯ ಕನ್ನಡ ಫ್ಯೂಷನ್ ಹಾಡಿಗೆ ನೃತ್ಯ ತೃತೀಯ ಸ್ಥಾನ ಪಡೆಯಿತು.

ರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಪೊಲೀಸರು

ಪಥಸಂಚಲನ ನಡೆಸಿದ ಶಿವಮೊಗ್ಗ ಪೊಲೀಸರು

ಪಥ ಸಂಚಲನದಲ್ಲಿ ಪೊಲೀಸ್ ಬ್ಯಾಂಡ್

ನೆಹರು ಸ್ಟೇಡಿಯಂನಲ್ಲಿ ಹಲಗೆ ಕುಣಿತ ತಂಡದಿಂದ ಪ್ರದರ್ಶನ

ಪೂಜಾ ಕುಣಿತ ತಂಡದಿಂದ ಪ್ರದರ್ಶನ

ಗೊಂಬೆ ಪ್ರದರ್ಶನ

ವೀರಗಾಸೆ ಪ್ರದರ್ಶನ

ಡೊಳ್ಳು ಕುಣಿತ

ಚಂಡೆ ವಾದ್ಯ ಪ್ರದರ್ಶನ

ನಾಡಿನ ಪ್ರಮುಖರ ವೇಷ ತೊಟ್ಟ ಪುಟಾಣಿಗಳು


ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ


ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಸಿಹಿ ಹಂಚಿದ ಮಹಾನಗರ ಪಾಲಿಕೆ ಸಿಬ್ಬಂದಿ




ಮಕ್ಕಳ ನೃತ್ಯವೈಭವವನ್ನು ಮೊಬೈಲ್ನಲ್ಲಿ ಸೆರೆ ಹಿಡಿದ ಸಾರ್ವಜನಿಕರು


ಸಮಯನ್ವಯ ಕಾಶಿ ಅವರೊಂದಿಗೆ ಪೊಲೀಸ್ ಸಿಬ್ಬಂದಿಯಿಂದ ಕಾರ್ಯಕ್ರಮ ನಿರೂಪಣೆ
Rajyotsava







