ಎಸ್ಸೆಸ್ಸೆಲ್ಸಿ ಪ್ರಥಮ ರ‍್ಯಾಂಕ್‌ ಪಡೆದ ವಿದ್ಯಾರ್ಥಿನಿಗೆ ಉಚಿತ ಸೀಟ್‌, ಪಿಯುಸಿಯ ಟಾಪರ್‌ಗಳಿಗೆ ಅಮೆರಿಕ ಟೂರ್‌

ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ (Rank) ಪಡೆದ ವಿದ್ಯಾರ್ಥಿನಿ ನಮನಾ.ಕೆ ಅವರಿಗೆ ಆರ್ಯ ಪಿ.ಯು. ಕಾಲೇಜಿನಲ್ಲಿ ಉಚಿತ ಸೀಟ್‌ ನೀಡಲಾಗಿದೆ. ಅಲ್ಲದೆ ದ್ವಿತೀಯ ಪಿ.ಯು ಕಾಲೇಜಿನಲ್ಲಿ ಟಾಪರ್‌ ಆಗುವವರಿಗೆ ಅಮೆರಿಕಾ ಪ್ರವಾಸಕ್ಕೆ ಕಳುಹಿಸಲಾಗುತ್ತದೆ ಎಂದು ತಿಳಿಸಲಾಗಿದೆ. (ಈ ಸುದ್ದಿಯನ್ನು ಇನ್ನು 77 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ನಮನಾ.ಕೆ 625 ಅಂಕಗಳನ್ನು ಗಳಿಸಿ, ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ. ಇಂದು ಆರ್ಯ ಪಿ.ಯು ಕಾಲೇಜಿನಲ್ಲಿ ನಮನಾ ಅವರಿಗೆ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ಶಾಲೆ ಆರಂಭಿಸಿ 18 ವರ್ಷವಾಗಿದೆ. ಕಳೆದ ವರ್ಷ ಇಬ್ಬರು ವಿದ್ಯಾರ್ಥಿಗಳು ಕೇವಲ ಒಂದು ಅಂಕದಿಂದ ಪ್ರಥಮ ರ‍್ಯಾಂಕ್‌ ಪಡೆಯುವುದು ತಪ್ಪಿತ್ತು. ಈ ಬಾರಿ ನಮನಾ ಅವರು ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ. ಅವರಿಗೆ ನಮ್ಮದೆ ಆರ್ಯ ಪಿ.ಯು. ಕಾಲೇಜಿನಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ. ಮುಂದಿನ ವರ್ಷ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಟಾಪರ್‌ ಆದವರಿಗೆ ಅಮೆರಿಕಾದ ನಾಸಾಗೆ ಪ್ರವಾಸ ಕರೆದೊಯ್ಯಲಾಗುತ್ತದೆ.

– ಎನ್‌.ರಮೇಶ್‌, ಶರಾವತಿ ಎಜುಕೇಶನ್‌ ಟ್ರಸ್ಟ್‌ ಕಾರ್ಯದರ್ಶಿ

sslc-first-rank-holder-namana-at-arya-pu-college

sslc-first-rank-holder-namana-at-arya-pu-college

ಶಾಲೆಯ ಶಿಕ್ಷಕರು, ಪೋಷಕರ ನೆರವಿನಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಶಿಕ್ಷಕರು ಹೇಳಿಕೊಟ್ಟಿದ್ದನ್ನು ಅಂದೇ ಒಪ್ಪಿಸುತ್ತಿದ್ದೆ. ಕಷ್ಟಪಟ್ಟರೆ ಯಾವುದು ಕಷ್ಟವಲ್ಲ. ಮುಂದೆ ವೈದ್ಯೆಯಾಗುವ ಕನಸಿದೆ. ಆರ್ಯ ಪಿ.ಯು.ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸುತ್ತೇನೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ

– ನಮನಾ.ಕೆ, ಪ್ರಥಮ ರ‍್ಯಾಂಕ್‌ ಪಡೆದ ವಿದ್ಯಾರ್ಥಿನಿ

ಡಿವಿಎಸ್‌ ಕಾಲೇಜು ನಿವೃತ್ತ ಪ್ರಾಂಶುಪಾಲ ರಂಗನಾಥಯ್ಯ, ನಿವೃತ್ತ ಪ್ರಾಧ್ಯಾಪಕ ಪದ್ಮನಾಭ, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಸುನಿತಾ ದೇವಿ ಅವರು ನಮನಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಮನ ತಂದೆ ಕೃಷ್ಣಮೂರ್ತಿ, ತಾಯಿ ಪದ್ಮಿನಿ ಕಾರ್ಯಕ್ರಮದಲ್ಲಿ ಇದ್ದರು.

ಇದನ್ನೂ ಓದಿ » ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ, ಸಾಗರದ ಐವರು ಸ್ಥಳದಲ್ಲೇ ಸಾವು

Arya-PU-College-Shimoga.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment