ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಮೇ 2020
ಶಿವಮೊಗ್ಗದ ವಿಆರ್‍ಡಿಎಲ್ ಲ್ಯಾಬ್‍ನಲ್ಲಿ ದಾಖಲೆ ಪ್ರಮಾಣದ ಪರೀಕ್ಷೆ ನಡೆಸಲಾಗಿದೆ. ಒಂದೇ ದಿನ 700ಕ್ಕೂ ಹೆಚ್ಚು ಗಂಟಲು ದ್ರವ ಪರೀಕ್ಷೆಯಾಗಿದೆ. ಇದರಿಂದಾಗಿ ಕರೋನ ಕುರಿತ ಆತಂಕ ಬಹುಬೇಗ ನಿವಾರಣೆಯಾಗುತ್ತಿದೆ.
ಗುರುವಾರ ಒಂದೇ ದಿನ 781 ಗಂಟಲು ದ್ರವ ಸ್ಯಾಂಪಲ್ ಫಲಿತಾಂಶ ಬಂದಿದೆ. ಪ್ರಯೋಗಾಲಯದ ಸಿಬ್ಬಂದಿಗಳ ನಿರಂತರ ಪರೀಕ್ಷೆ ನಡೆಸುತ್ತಿರುವುದರಿಂದ ಇಷ್ಟೊಂದು ಪ್ರಮಾಣದ ಪರೀಕ್ಷೆಯಾಗಿದೆ. ಹಾಗಾಗಿ ಲ್ಯಾಬ್ ಸಿಬ್ಬಂದಿಗೆ ಜಿಲ್ಲಾಡಳಿತ ಅಭಿನಂದನೆ ಸಲ್ಲಿಸಿದೆ.
ಮೂರು ಜಿಲ್ಲೆಯದ್ದು ಇಲ್ಲೇ ಪರೀಕ್ಷೆ
ಶಿವಮೊಗ್ಗದ ಸಿಮ್ಸ್ ಆವರಣದಲ್ಲಿರುವ ವಿಆರ್‍ಡಿಎಲ್ ಲ್ಯಾಬ್‍ನಲ್ಲಿ ಮೂರು ಜಿಲ್ಲೆಯ ಗಂಟಲ ದ್ರವ ಪರೀಕ್ಷೆ ನಡೆಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಸ್ವಾಬ್‍ಗಳ ಜೊತೆಗೆ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಸ್ವಾಬ್ ಟೆಸ್ಟಿಂಗ್ ನಡೆಸಲಾಗುತ್ತದೆ.

ರಾಪಿಡ್ ಟೆಸ್ಟಿಂಗ್ ನಡೆಸುತ್ತಿರುವುದರಿಂದ, ಅತಿ ಹೆಚ್ಚು ಸ್ವಾಬ್‍ಗಳನ್ನು ಟೆಸ್ಟಿಂಗ್‍ಗೆ ಕಳುಹಿಸಲಾಗುತ್ತಿದೆ. ಒತ್ತಡದ ನಡುವೆ, ಖಚಿತ ರಿಪೋರ್ಟ್ ನೀಡಬೇಕಿದೆ. ಆದರೂ ಒಂದೇ ದಿನ 781 ರಿಪೋರ್ಟ್ ನೀಡಿರುವುದು ಜಿಲ್ಲಾಡಳಿತದ ಮೆಚ್ಚುಗೆಗೆ ಪಾತ್ರವಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200