ಶಿವಮೊಗ್ಗದಿಂದ ವಿಶೇಷ ರೈಲಿಗೆ ಸಂಸದ ರಾಘವೇಂದ್ರಗೆ ಮನವಿ

 ಶಿವಮೊಗ್ಗ  LIVE 

ಶಿವಮೊಗ್ಗ: ಜಿಲ್ಲೆಯಿಂದ ಪ್ರತಿ ವರ್ಷ ಸಾವಿರಾರು ಭಕ್ತರು ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ಮಾಲೆ ಧರಿಸಿ ಡಿಸೆಂಬರ್ ತಿಂಗಳಿನಿಂದ ಜನವರಿ ತಿಂಗಳ ವರೆಗೆ ಪ್ರಯಾಣ ಮಾಡುತ್ತಾರೆ. ಆದ್ದರಿಂದ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ರೈಲಿನ (Special train) ವ್ಯವಸ್ಥೆ ಕಲ್ಪಿಸುವಂತೆ ಕೆ.ಆರ್.ಪುರಂ ಭಾರತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಪವಿತ್ರ ವಿನೋದ ಅವರ ನೇತೃತ್ವದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗದಿಂದ ತಮಿಳುನಾಡಿಗೆ ಪ್ರಯಾಣ ಮಾಡಲು KSRTC ಬಸ್ಸಿನ ವ್ಯವಸ್ಥೆ ಮಾಡಿಕೊಂಡು ಹೋಗುತ್ತಾರೆ. ದೂರದ ಪ್ರಯಾಣ ಆಗಿರುವುದರಿಂದ ಆನೇಕ ತೊಂದರೆಗೆ ಒಳಗಾಗುತ್ತಾರೆ. ವಯೋಮಿತಿ ಇಲ್ಲದೆ ಮಾಲೆ ಧರಿಸಿ ಹೋಗುವ ಭಕ್ತರಿಗೆ ತೊಂದರೆ ಆಗುತ್ತದೆ.

ಆದ್ದರಿಂದ ಶಿವಮೊಗ್ಗದಿಂದ ಮೇಲ್ಮರುವತ್ತೂರಿನಲ್ಲಿರುವ ಓಂ ಶಕ್ತಿ ದೇವಸ್ಥಾನಕ್ಕೆ ಮಾಲೆ ಧರಿಸುವ ತಿಂಗಳಿನಲ್ಲಿ ವಿಶೇಷ ರೈಲನ್ನು ಕಲ್ಪಿಸಿಕೊಡಬೇಕು. ಇದರಿಂದ ಯಾತ್ರಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Request-for-special-train-for-Om-Shakthi

ಇದನ್ನೂ ಓದಿ » ಹೊಸನಗರದ ಬಿದನೂರು ಮಾರಿಕಾಂಬಾ ಜಾತ್ರೆಗೆ ಸಿದ್ಧತೆ ಪೂರ್ಣ, ಯಾವ್ಯಾವ ದಿನ ಏನೇನು ಕಾರ್ಯಕ್ರಮವಿದೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment