ಶಿವಮೊಗ್ಗದಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆ, ಸರ್ಕಾರಕ್ಕೆ ಗಡುವು ನೀಡಿದ ನಿವಾಸಿಗಳು

SHIVAMOGGA LIVE NEWS | 20 MARCH 2023

SHIMOGA : ದಶಕಗಳಿಂದ ವಾಸವಾಗಿದ್ದರೂ ತಮ್ಮ ಮನೆಗಳಿಗೆ ಹಕ್ಕುಪತ್ರ ನೀಡದಿರುವುದನ್ನು ಖಂಡಿಸಿ ಹೊಸಮನೆ ಬಡಾವಣೆಯ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಧಾನ ಸಭೆ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ (Boycott Voting) ಎಚ್ಚರಿಸಿದ್ದಾರೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

Protest-by-Hosamane-Residents-to-boycott-voting

ಹೊಸಮನೆ ಬಡಾವಣೆಯ 3 ಮತ್ತು 4ನೇ ಅಡ್ಡರಸ್ತೆಯ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನೀತಿ ಸಂಹಿತೆ ಜಾರಿಗು ಮೊದಲು ತಮ್ಮ ಬೇಡಿಕೆ ಈಡೇರಬೇಕು. ಇಲ್ಲವಾದಲ್ಲಿ ಮತದಾನ ಬಹಿಷ್ಕಾರ (Boycott Voting) ಮಾಡಲು ತೀರ್ಮಾನಿಸಿದ್ದಾರೆ.

ಹಲವು ಬಾರಿ ಬೇಡಿಕೊಂಡಿದ್ದೇವೆ

ಸುಮಾರು 50 ವರ್ಷದಿಂದ ಮನೆ ಕಟ್ಟಿಕೊಂಡು ಜನರು ವಾಸವಾಗಿದ್ದಾರೆ. ಆದರೆ ಅವರಿಗೆ ಹಕ್ಕುಪತ್ರ ನೀಡಲು ಸರ್ಕಾರ ಹಿಂದೇಟು ಹಾಕಿದೆ. ಈ ಕುರಿತು ಹಲವು ಬಾರಿ ಜನಪ್ರತಿನಿಧಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಪ್ರಯೋಜವಾಗಿಲ್ಲ. ಈ ರಸ್ತೆಗಳಲ್ಲಿ ಸುಮಾರು 400 ಜನ ವಾಸವಾಗಿದ್ದಾರೆ.

Hosamane Residents protest

ಮಳೆ ಬಂದರೆ ನೀರು ರಸ್ತೆ ಮೇಲೆ ಉಕ್ಕಿ ಹರಿದು ಮನೆಗಳಿಗೆ ನುಗ್ಗುತಿದೆ. ಇದರಿಂದಲು ಸ್ಥಳೀಯರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಹಾಗಾಗಿ ನೀತಿ ಸಂಹಿತೆ ಜಾರಿಗು ಮೊದಲು ತಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.

ಏನಂತಾರೆ ಜನ?

ಹಕ್ಕುಪತ್ರ ಇಲ್ಲದಿರುವುದಿಂದ ವಿದ್ಯುತ್ ಮೀಟರ್ ಅಳವಡಿಸುತ್ತಿಲ್ಲ. ಬ್ಯಾಂಕುಗಳಲ್ಲಿ ಸಾಲ ಸಿಗುತ್ತಿಲ್ಲ. ಚುನಾವಣೆ ಬಂದಾಗ ಎಲ್ಲರು ಬಂದು ಭರವಸೆ ಕೊಡುತ್ತಾರೆ. ಆಮೇಲೆ ಐದ ವರ್ಷ ತಿರುಗಿಯು ನೋಡುವುದಿಲ್ಲ.  ಈ ಬಾರಿ ನಾವ್ಯಾರು ಮತ ಹಾಕುವುದಿಲ್ಲ.ರಂಗಲಕ್ಷ್ಮಿ, ಸ್ಥಳೀಯರು
ಹಕ್ಕುಪತ್ರ ಕೊಡುವ ವ್ಯವಸ್ಥೆ ಮಾಡಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೇವೆ. ಆದರೆ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಲ್ಲ. ದಲಿತರು ಎಂಬ ಕಾರಣಕ್ಕೆ ನಮ್ಮ ಬೇಡಿಕೆಯನ್ನು ಈಡೇರಿಸುತ್ತಿಲ್ಲ. ಆದ್ದರಿಂದ ಸಾಮೂಹಿಕವಾಗಿ ಮತದಾನ ಬಹಿಷ್ಕಾರ ಮಾಡುತ್ತಿದ್ದೇವೆ.ನಿರಂಜನ ಮೂರ್ತಿ, ಸ್ಥಳೀಯರು

ಇದನ್ನೂ ಓದಿ – ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ಘೋಷಣೆ, ಶಿವಮೊಗ್ಗದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚಾರಣೆ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment