ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ: ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ನಗರದಲ್ಲಿ ಇವತ್ತು ರೂಟ್ ಮಾರ್ಚ್ (route march) ನಡೆಸಲಾಯಿತು.
ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ಸಾಗಿತು.
ಎಲ್ಲೆಲ್ಲಿ ಸಾಗಿತು ಪಥಸಂಚಲನ?
ಡಿ.ಎ.ಆರ್ ಪೊಲೀಸ್ ಮೈದಾನದಿಂದ ಅರಂಭವಾದ ಪಥಸಂಚಲನ ಅಶೋಕ ವೃತ್ತ, ಎ.ಎ. ವೃತ್ತ, ಎಸ್. ಎನ್ ವೃತ್ತ, ಕರ್ನಾಟಕ ಸಂಘ, ಡಿ.ವಿ.ಎಸ್ ವೃತ್ತ, ಮಹಾವೀರ ವೃತ್ತ, ಗೋಪಿ ವೃತ್ತದ ಮೂಲಕ ಡಿ.ಎ.ಆರ್.ಮೈದಾನ ತಲುಪಿತು.
ಇದನ್ನೂ ಓದಿ » ಎಸ್ಸೆಸ್ಸೆಲ್ಸಿ ಫಲಿತಾಂಶ, ಶಿವಮೊಗ್ಗ ಜಿಲ್ಲೆಯ ಫಲಿತಾಂಶದ ಟಾಪ್ ಪಾಯಿಂಟ್ಸ್ ಇಲ್ಲಿದೆ

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ.ಕಾರ್ಯಪ್ಪ, ಡಿವೈಎಸ್‌ಪಿಗಳು, ಇನ್ಸ್‌ಪೆಕ್ಟರ್‌ಗಳು, ಸಬ್ ಇನ್ಸ್‌ಪೆಕ್ಟರ್‌ಗಳು, 6 ಕೆ.ಎಸ್.ಆರ್.ಪಿ ತುಕಡಿ, 5 ಡಿ.ಎ.ಆರ್ ತುಕಡಿ ಮತ್ತು 700 ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.








