ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 21 MAY 2023
SHIMOGA : ಯಮಹಾ ಆರ್.ಎಕ್ಸ್ 100 ಬೈಕ್ ಕಳ್ಳತನವಾಗಿದ್ದು (Bike Missing), ನಾಲ್ಕು ತಿಂಗಳು ತಡವಾಗಿ ಮಾಲೀಕ ದೂರು ನೀಡಿದ್ದಾನೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿನೋಬನಗರ ಮೇಧಾರ ಕೇರಿಯ ಶ್ರೀಕಾಂತ ಎಂಬಾತ ಆರ್.ಎಕ್ಸ್ 100 ಬೈಕ್ ಖರೀದಿಸಿದ್ದ. ಆತನ ಸ್ನೇಹಿತ ಪ್ರದೀಪ್ ಕೆಲಸದ ನಿಮಿತ್ತ ಎರಡು ದಿನ ಬೈಕ್ ಬೇಕು ಎಂದು ಪಡೆದುಕೊಂಡಿದ್ದ. ಜ.9ರಂದು ಪ್ರದೀಪ, ವೆಂಕಟೇಶನಗರದ ತನ್ನ ಮನೆ ಬಳಿ ರಾತ್ರಿ ಬೈಕ್ ನಿಲ್ಲಿಸಿದ್ದ. ಬೆಳಗಾಗುವುದರಲ್ಲಿ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದರು ಬೈಕ್ (Bike Missing) ಸಿಕ್ಕಿರಲಿಲ್ಲ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸೈಟ್ ಖರೀದಿಸುವ ಮುನ್ನ ಹುಷಾರ್, ಯಾರದ್ದೋ ಸೈಟ್ ಮತ್ಯಾರಿಗೋ ಮಾರಲು ಯತ್ನ
ನಾಲ್ಕು ತಿಂಗಳು ತಡವಾಗಿ ದೂರು
ಆರ್.ಎಕ್ಸ್ 100 ಬೈಕ್ ಖರೀದಿಸಿದ್ದರೂ ಶ್ರೀಕಾಂತನ ಹೆಸರಿಗೆ ದಾಖಲೆಗಳು ವರ್ಗಾವಣೆಯಾಗಿರಲಿಲ್ಲ. ಆರ್.ಟಿ.ಒ ಕಚೇರಿಯಲ್ಲಿ ದಾಖಲೆಗಳನ್ನು ವರ್ಗಾಯಿಸಿಕೊಂಡ ಬಳಿಕ ಬೈಕ್ ಕಳ್ಳತನ ಕುರಿತು ದೂರು ನೀಡಿದ್ದಾನೆ. ಬೈಕ್ ಕಳ್ಳತನವಾಗಿ ನಾಲ್ಕು ತಿಂಗಳ ಬಳಿಕ ಜಯನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422