ಶಿವಮೊಗ್ಗ ಸಿಟಿ ಕೇಸರಿಮಯ, ಗಣೇಶೋತ್ಸವಕ್ಕೆ ಸಿದ್ಧತೆ ಜೋರು, ಎಲ್ಲೆಲ್ಲಿ ಹೇಗಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಸಿಟಿಯಲ್ಲಿ ಗಣೇಶ ಚತುರ್ಥಿಗೆ ಅದ್ಧೂರಿ ಸಿದ್ಧತೆ ನಡೆಯುತ್ತಿದೆ. ನಗರದ ವಿವಿಧೆಡೆ ಗಣಪತಿಯ ಪೆಂಡಾಲ್‌ ರೆಡಿ ಮಾಡಲಾಗಿದೆ. ಕೆಲವು ಕಡೆ ಕೇಸರಿ ‍(Saffron Flags) ಧ್ವಜ, ಬಂಟಿಂಗ್ಸ್‌ಗಳನ್ನು ಹಾಕಲಾಗಿದೆ.

ಗಣೇಶ ಚತುರ್ಥಿಗೆ ನಗರದಾದ್ಯಂತ ಅದ್ಧೂರಿ ಸಿದ್ಧತೆ ನಡೆಯುತ್ತಿದೆ. ಪ್ರತಿ ಬಡಾವಣೆಯಲ್ಲಿಯು ಸಾರ್ವಜನಿಕವಾಗಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈಗಾಗಲೆ ಪೆಂಡಾಲ್‌ಗಳನ್ನು ನಿರ್ಮಿಸಲಾಗಿದ್ದು, ಅಲಂಕಾರದ ಕೆಲಸಗಳು ನಡೆಯುತ್ತಿವೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

Saffron flags and preparations for ganesh chaturthi
ಶಿವಮೊಗ್ಗದ ವಿದ್ಯಾನಗರದ ಬಿ.ಹೆಚ್‌.ರಸ್ತೆಯಲ್ಲಿ ಕೇಸರಿ ಧ್ವಜಗಳು.

ಹಿಂದೂ ಮಹಾಸಭಾ, ಸಿದ್ಧತೆ ಜೋರು

ಕೋಟೆ ರಸ್ತೆಯ ಶ್ರೀ ಭಿಮೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದೂ ಮಹಾಸಭಾ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಇದಕ್ಕೆ ಅಂತಿಮ ಸಿದ್ಧತೆ ನಡೆಯುತ್ತಿದೆ. ದೇಗುಲದ ಒಳಾಂಗಣದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ದೇಗುಲದ ಹೊರಗೆ ಚಪ್ಪರ ಹಾಕಲಾಗಿದೆ. ಮುಖ್ಯ ರಸ್ತೆಯಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗಿದೆ.

Saffron flags and preparations for ganesh chaturthi
ಕೋಟೆ ರಸ್ತೆಯಲ್ಲಿ ಹಿಂದೂ ಸಂಘಟನೆಗಳ ಮಹಾಮಂಡಲದ ಸ್ವಾಗತ ಕಮಾನು.

ಕೇಸರಿಮಯ ಶಿವಮೊಗ್ಗ ನಗರ

ಗಣೇಶೋತ್ಸವ ಹಿನ್ನೆಲೆ ಸಿಟಿಯ ಹಲವೆಡೆ ಕೇಸರಿ ಧ್ವಜ, ಬಂಟಿಂಗ್ಸ್‌ಗಳಿಂದ ಅಲಂಕಾರ ಮಾಡಲಾಗಿದೆ. ನಗರದ ವಿದ್ಯಾನಗರದ ಮುಖ್ಯರಸ್ತೆಯಲ್ಲಿ ಕೇಸರಿ ಧ್ವಜ, ಬಂಟಿಂಗ್ಸ್‌ ಹಾಕಲಾಗಿದೆ. ಹಿಂದು ಕೇಸರಿ ಅಲಂಕಾರ ಸಮಿತಿ ವತಿಯಿಂದ ನಗರದ ವಿವಿಧೆಡೆ ಅಲಂಕಾರ ಮಾಡಲಾಗುತ್ತಿದ್ದು, ಪ್ರಮುಖ ವೃತ್ತಗಳಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗುತ್ತಿದೆ.

Saffron flags and preparations for ganesh chaturthi
ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದ ಮುಂಭಾಗ ಚಪ್ಪರ.

ಇದನ್ನೂ ಓದಿ » ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಜನವೋ ಜನ, ಹೇಗಿತ್ತು ಹಬ್ಬದ ಖರೀದಿ?

Saffron flags and preparations for ganesh chaturthi

Leave a Comment