ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 29 NOVEMBER 2022
ಶಿವಮೊಗ್ಗ : ಗಣಿ ನೀಡಿದರೆ ವಿಐಎಸ್ಎಲ್ ಕಾರ್ಖಾನೆಗೆ (visl factory) ಸಾವಿರಾರು ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಬಿಜೆಪಿಯವರು ನಂಬಿಸಿದ್ದರು. ಆದರೆ ಈತನಕಒಂದೇ ಒಂದು ಕೋಟಿಯು ಹೂಡಿಕೆಯಾಗಿಲ್ಲ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಆರೋಪಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಎನ್ಇಎಸ್ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರ ಕಾಂಗ್ರೆಸ್ ಜಾಗ್ರತಾ ಸಮಿತಿ ಆಯೋಜಿಸಿದ್ದ ಮಲೆನಾಡ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಸಂಗಮೇಶ್ವರ್ ಅವರು, ವಿಐಎಸ್ಎಲ್ ಕಾರ್ಖಾನೆಗೆ (visl factory) ಹಣ ಹೂಡಿಕೆಯಾಗಿಲ್ಲ. ಎಂಪಿಎಂ ಕಾರ್ಖಾನೆಯನ್ನು ಮುಚ್ಚಿದ್ದಾರೆ ಎಂದು ಟೀಕಿಸಿದರು.
(visl factory)
ಸಿ.ಟಿ.ರವಿ ಒಬ್ಬ ಬಚ್ಚ
ಬಿಜೆಪಿಯವರು ಧರ್ಮದ ಆಧಾರದ ಮೇಲೆ ಅಧಿಕಾರ ನಡೆಸುತ್ತಿದ್ದಾರೆ. ದೇವಸ್ಥಾನದ ಬಳಿ ಮುಸ್ಲಿಮರು ವ್ಯಾಪಾರ ನಡೆಸಬಾರದು ಎಂದು ಹೇಳುತ್ತಿದ್ದಾರೆ. ನಮಗೆ ಸೌಹಾರ್ದಯುತ ಸಮಾಜ ಬೇಕು ಎಂದರು.
ALSO READ – ಶರಾವತಿ ಸಂತ್ರಸ್ಥರ ಪರ ಸಿದ್ದರಾಮಯ್ಯ, ಡಿಕೆಶಿ ಶಿವಮೊಗ್ಗದಲ್ಲಿ ಘೋಷಣೆ, ಏನೇನು ಹೇಳಿದರು?
ಇನ್ನು, ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡುತ್ತಿರುವ ಸಿ.ಟಿ.ರವಿ ಒಬ್ಬ ಬಚ್ಚ. ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ. ಅವರು ಸಿದ್ದರಾಮಯ್ಯ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅಶ್ವಥನಾರಾಯಣ ಉನ್ನತ ಶಿಕ್ಷಣ ಸಚಿವರಾದ ಮೇಲೆ ವಿಶ್ವವಿದ್ಯಾಲಯಗಳು ಶೋಚನೀಯ ಸ್ಥಿತಿಗೆ ತಲುಪಿವೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದಿಂದ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ ಎಂದು ಸಂಗಮೇಶ್ವರ್ ಆರೋಪಿಸಿದರು.