ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA | 15 ಫೆಬ್ರವರಿ 2020

ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ 2020-21ನೇ ಸಾಲಿನ ಬಜೆಟ್ ಮಂಡಿಸಲಾಗಿದೆ. ಊರಗಡೂರಿನಲ್ಲಿ 60 ಎಕರೆ ಪ್ರದೇಶದಲ್ಲಿ ಬಡಾವಣೆ. ಸೋಮಿನಕೊಪ್ಪದಲ್ಲಿ ವಸತಿ ಸಮುಚ್ಚಯ ಹಾಗೂ ನಿದಿಗೆಯಲ್ಲಿ ಮೂರು ಎಕರೆ ಪ್ರದೇಶದಲ್ಲಿ ನಿವೇಶನ ರಚಿಸುವುದಾಗಿ ಘೋಷಿಸಲಾಗಿದೆ.
ಇದರ ಜತೆಗೆ ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿಗೂ ಅನುದಾನ ಮೀಸಲಿರಿಸಲಾಗಿದೆ. ಪ್ರಾಧಿಕಾರದ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸೂಡಾ ಆಯುಕ್ತ ಮೂಕಪ್ಪ ಕರಭೀಮಣ್ಣನವರ್ 1.36 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದರು.
ಕಳೆದ ಸಾಲಿನಲ್ಲಿ ವಿವಿಧ ಮೂಲಗಳಿಂದ ಪ್ರಾಧಿಕಾರಕ್ಕೆ 98.51 ಕೋಟಿ ರೂ. ಆದಾಯ ಬಂದಿತ್ತು. ಆಡಳಿತಾತ್ಮಕ ಸೇರಿ ವಿವಿಧ ಬಾಬ್ತುಗಳಿಗೆ 97.15 ಕೋಟಿ ರೂ. ವೆಚ್ಚ ಮಾಡಲಾಗಿದೆ. 2019-2020ನೇ ಸಾಲಿಗಿಂತ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಪ್ರಾಧಿಕಾರ ಹೆಚ್ಚಿನ ಆದಾಯ ಸಂಗ್ರಹಣೆ ಅಂದಾಜು ಮಾಡಿದೆ ಎಂದು ತಿಳಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇತರೆ ಮೂಲಗಳಿಗೆ ಹೋಲಿಸಿದರೆ, ಅಭಿವೃದ್ದಿ ನಿಧಿ-1ರಡಿ ಪ್ರಾಧಿಕಾರದ ಬಡಾವಣೆಯ ನಿವೇಶನಗಳಿಂದ ಅತ್ಯಧಿಕ ಆದಾಯ ಅಂದಾಜಿಸಲಾಗಿದೆ. ಊರಗಡೂರು, ಸೋಮಿನಕೊಪ್ಪ ಹಾಗೂ ನಿದಿಗೆ ಬಳಿ ವಸತಿ ಬಡಾವಣೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇದರಿಂದ 53.33 ಕೋಟಿ ರೂ. ಆದಾಯ ಮತ್ತು ಇದಕ್ಕಾಗಿ 52.88 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಆರ್.ಪ್ರಸನ್ನಕುಮಾರ್, ಪಾಲಿಕೆಯಿಂದ ಸೂಡಾಗೆ ನಾಮನಿರ್ದೇಶಿತ ಸದಸ್ಯೆ ಸುನೀತಾ ಅಣ್ಣಪ್ಪ, ನಗರ ಪಾಲಿಕೆ ಉಪ ಆಯುಕ್ತ ಎಚ್.ಪಿ.ಪ್ರಮೋದ್, ಸೂಡಾ ಅಧಿಕಾರಿಗಳಾದ ಎಚ್.ಆರ್.ಶಂಕರ್, ಎನ್.ಟಿ.ಧನಲಕ್ಷ್ಮೀ, ವೇಣುಗೋಪಾಲ್, ಗಂಗಾಧರ ಸ್ವಾಮಿ, ಎಸ್.ಬಿ.ಪಜ್ವಲ್, ಎಸ್.ಟಿ.ಮಂಜುನಾಥ್, ಜಗದೀಶ್, ಎಂ.ಪ್ರಕಾಶ್, ಬಿ.ಎಸ್.ಚಂದನಾ ಇತರರಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
Shivamogga Bhdaravathi Urban Development Authority has planned for a layout and Apartment in Shimoga city. 2020 budget of SUDA or SBUDA
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






