ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಜುಲೈ 2020
ಕರೋನ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಸೂಚನೆ ಹಿನ್ನೆಲೆ ಶಿವಮೊಗ್ಗದಲ್ಲಿ ಎರಡನೇ ಭಾನುವಾರ ಕರ್ಫ್ಯೂ ಘೋಷಿಸಲಾಗಿದೆ. ಇವತ್ತು ಬೆಳಗ್ಗೆಯಿಂದಲು ಕರ್ಫ್ಯೂಗೆ ಜನ ಸ್ಪಂದನೆ ವ್ಯಕ್ತವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?
ಅಶೋಕ ಸರ್ಕಲ್ : ಸದಾ ಜನ ಮತ್ತು ವಾಹನ ದಟ್ಟಣೆ ಇರುವ ಸರ್ಕಲ್ ಇದು. ಕಳೆದ ಭಾನುವಾರದ ಹಾಗೆ ಇವತ್ತು ಕೂಡ ಬಸ್ಸುಗಳು ರಸ್ತೆಗಿಳಿದಿರಲಿಲ್ಲ. ವಾಹನ ಸಂಖ್ಯೆಯೂ ವಿರಳವಾಗಿತ್ತು. ಬಸ್ ನಿಲ್ದಾಣದ ಮುಂದಿನ ಅಂಗಡಿಗಳು, ಹೊಟೇಲ್ಗಳು ಬಂದ್ ಆಗಿವೆ. ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.
ಎನ್.ಟಿ.ರೋಡ್ ಮತ್ತು ಸಾಗರ ರಸ್ತೆ : ಅಶೋಕ ಸರ್ಕಲ್ಗೆ ಹೊಂದಿಕೊಂಡಂತೆ ಇರುವ ಎನ್.ಟಿ.ರಸ್ತೆ ಮತ್ತು ಸಾಗರ ರಸ್ತೆಯಲ್ಲೂ ವಾಹನಗಳ ಸಂಖ್ಯೆ ಕಡಿಮೆ ಇದೆ. ಈ ರಸ್ತೆಯಲ್ಲೂ ಅಂಗಡಿ, ಹೊಟೇಲ್ಗಳು ಬಂದ್ ಆಗಿವೆ. ಜನ ಸಂಚಾರವೂ ಕಡಿಮೆ ಇದೆ.
ಬಿ.ಹೆಚ್.ರೋಡ್ ಸೈಲೆಂಟ್ : ಕಳೆದ ಭಾನುವಾರಕ್ಕೆ ಹೋಲಿಸಿದರೆ ಶಿವಮೊಗ್ಗದಲ್ಲಿ ಇವತ್ತು ವಾಹನಗಳ ಸಂಖ್ಯೆ ಹೆಚ್ಚಿತ್ತು. ಆದರೆ ರಸ್ತೆಯ ಕೆಲವು ಕಡೆ ಪೊಲೀಸ್ ಬ್ಯಾರಿಕೇಡ್ ಕಂಡು ಜನರು ಹಿಂತಿರುಗುತ್ತಿದ್ದರು.
ಗಾಂಧಿ ಬಜಾರ್ನಲ್ಲೂ ಜನ ಸಂಚಾರ : ಪ್ರಮುಖ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್ನಲ್ಲಿ ಜನ ಮತ್ತು ವಾಹನ ಸಂಚಾರವಿದೆ. ತರಕಾರಿ ಖರೀದಿಗೆ, ಅಗತ್ಯ ವಸ್ತುಗಳ ಖರೀದಿಗೆ ಜನರು ಬರುತ್ತಿದ್ದಾರೆ. ಮತ್ತೊಂದೆಡೆ ಶಿವಪ್ಪನಾಯಕ ಹೂವಿನ ಮಾರುಕಟ್ಟೆಯಲ್ಲಿ ಕೆಲವು ವ್ಯಾಪಾರಿಗಳು ಹೂವು ಮತ್ತು ಹಾರ ಮಾರಾಟ ಮಾಡುತ್ತಿದ್ದಾರೆ.
ಅಮೀರ್ ಅಹಮದ್ ಸರ್ಕಲ್ ಬಂದ್ : ಪ್ರಮುಖ ಸರ್ಕಲ್ನಲ್ಲಿ ಸಂಪೂರ್ಣ ಬ್ಯಾರಿಕೇಡ್ ಹಾಕಲಾಗಿದೆ. ಸರ್ಕಲ್ ಸುತ್ತಲು ಬ್ಯಾರಿಕೇಡ್ ಹಾಕಲಾಗಿದ್ದು ಯಾವುದೇ ಮಾರ್ಗದಿಂದ ಬಂದರೂ ಸರ್ಕಲ್ಗೆ ಬರಲು ಸಾದ್ಯವಾಗುವುದಿಲ್ಲ.
ನೆಹರೂ ರಸ್ತೆ, ಗೋಪಿ ಸರ್ಕಲ್ : ನೆಹರೂ ರಸ್ತೆಯಲ್ಲಿ ಎಲ್ಲ ಅಂಗಡಿಗಳು ಬಂದ್ ಆಗಿವೆ. ಹಾಲು ಮಾರಾಟ ಮಳಿಗೆ ಮತ್ತು ಮೆಡಿಕಲ್ ಶಾಪ್ಗಳು ಮಾತ್ರವೇ ಓಪನ್ ಮಾಡಲಾಗಿದೆ. ಉಳಿದಂತೆ ವಾಹನ ಸಂಚಾರ ಕಡಿಮೆ ಇದೆ. ಅಲ್ಲದೆ ಗೋಪಿ ಸರ್ಕಲ್ನಲ್ಲೂ ಬ್ಯಾರಿಕೇಡ್ ಹಾಕಲಾಗಿದೆ.
ದುರ್ಗಿಗುಡಿ, ಜೈಲ್ ರೋಡ್ : ನಗರದಾದ್ಯಂತ ಜನ ಸಂಚಾರ ಕಡಿಮೆ ಇದೆ. ಆದರೆ ದುರ್ಗಿಗುಡಿ ಮತ್ತು ಜೈಲ್ ರೋಡ್ನಲ್ಲಿ ಜನ ಸಂಚಾರ ಹೆಚ್ಚಿದೆ. ಜೈಲ್ ರಸ್ತೆಯಲ್ಲಿ ಪ್ರತಿ ಭಾನುವಾರದಂತೆಯೇ ಇವತ್ತು ಕೂಡ ಜನ ಮತ್ತು ವಾಹನ ದಟ್ಟಣೆ ಇತ್ತು.
ಉಳಿದಂತೆ ನಗರದ ಕುವೆಂಪು ರಸ್ತೆಯಲ್ಲಿ ಜನ ಸಂಚಾರವಿದೆ. ಆಸ್ಪತ್ರೆಗಳು ಇರುವ ಕಾರಣ ಇಲ್ಲಿ ಜನ ಮತ್ತು ವಾಹನಗಳ ಓಡಾಟವಿದೆ. ಸವಳಂಗ ರಸ್ತೆಯಲ್ಲೂ ವಾಹನಗಳ ಸಂಚಾರ ಕಡಿಮೆಯಾಗಿದೆ. ವಿನೋಬನಗರ ನೂರು ಅಡಿ ರಸ್ತೆಯ ಲಕ್ಷ್ಮಿ ಟಾಕೀಸ್ ಸಮೀಪ ಜನ ಸಂಚಾರ ಹೆಚ್ಚಿದೆ. ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಅನಗತ್ಯವಾಗಿ ಓಡಾಡುವವರನ್ನು ವಾಪಸ್ ಕಳುಹಿಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]