BREAKING NEWS | ಕರೋನ ಅಬ್ಬರ, ದಾಖಲೆ ಪ್ರಮಾಣದ ಸೋಂಕಿತರು ಪತ್ತೆ, ಶಿವಮೊಗ್ಗ, ಭದ್ರಾವತಿಯಲ್ಲೇ ಹೆಚ್ಚು ಕೇಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 APRIL 2021

ಒಂದೆಡೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರೆ ಮತ್ತೊಂದೆಡೆ ಶಿವಮೊಗ್ಗದಲ್ಲಿ ಇವತ್ತು ದಾಖಲೆ ಪ್ರಮಾಣದ ಕರೋನ ಕೇಸ್‍ಗಳು ಪತ್ತೆಯಾಗಿವೆ.

ಎರಡನೆ ಅಲೆಯಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಇಷ್ಟೊಂದು ಕರೋನ ಪ್ರಕರಣಗಳು ಪತ್ತೆಯಾಗಿವೆ. ಶಿವಮೊಗ್ಗದಲ್ಲಿ ಇವತ್ತು 314 ಮಂದಿಯಲ್ಲಿ ಕರೋನ ಸೋಂಕು ಪತ್ತೆಯಾಗಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ ಒಂದೂವರೆ ಸಾವಿರದ ಸನಿಹಕ್ಕೆ ತಲುಪಿದೆ. ಇನ್ನು, ಮೃತರ ಸಂಖ್ಯೆಯು ಏರಿಕೆಯಾಗಿದೆ.

Covid 19 Vaccination Kan poster 1 1

ಯಾವ್ಯಾವ ತಾಲೂಕಿನಲ್ಲಿ ಎಷ್ಟು ಕೇಸ್?

ಶಿವಮೊಗ್ಗ ತಾಲೂಕಿನಲ್ಲಿ 123, ಭದ್ರಾವತಿ 79, ಶಿಕಾರಿಪುರ 8, ತೀರ್ಥಹಳ್ಳಿ 7, ಸೊರಬ 26, ಸಾಗರ 29, ಹೊಸನಗರ 28, ಹೊರ ಜಿಲ್ಲೆಯಿಂದ ಬಂದ 14 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಒಂದೂವರೆ ಸಾವಿರ ಸನಿಹಕ್ಕೆ ಒಟ್ಟು ಸೋಂಕಿತರು

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಒಂದೂವರೆ ಸಾವಿರದ ಸನಿಹಕ್ಕೆ ತಲುಪಿದೆ. ಸದ್ಯ 1470 ಸೋಂಕಿತರಿದ್ದಾರೆ. ಈ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 240 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, ಖಾಸಗಿ ಆಸ್ಪತ್ರೆಯಲ್ಲಿ 165 ಮಂದಿ, ಟ್ರೈಯೇಜ್‍ನಲ್ಲಿ 21 ಮಂದಿ ಚಕಿತ್ಸೆಯಲ್ಲಿದ್ದಾರೆ. 1044 ಮಂದಿ ಹೋಂ ಐಸೊಲೇಷನ್‍ನಲ್ಲಿದ್ದಾರೆ.

ಏರುತ್ತಿದೆ ಮೃತರ ಸಂಖ್ಯೆ

ಕರೋನ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ದಿನೆ ದಿನೆ ಹೆಚ್ಚಳವಾಗುತ್ತಿದೆ. ಇವತ್ತು ಕರೋನ ಸೋಂಕಿಗೆ ತುತ್ತಾದ ಮೂವರು ಸಾವನ್ನಪ್ಪಿದ್ದಾರೆ. ಇದರಿಂದ ಒಟ್ಟು ಸಾವನ್ನಪ್ಪಿದ್ದವರ ಸಂಖ್ಯೆ 362ಕ್ಕೆ ಏರಿಕೆಯಾಗಿದೆ.

fb banner 1 1

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment