ಶಿವಮೊಗ್ಗ ಕಾಂಗ್ರೆಸ್‌ ಕಚೇರಿಗೆ ಬಿಗಿ ಭದ್ರತೆ, ರಸ್ತೆಯೇ ಬಂದ್‌

ಶಿವಮೊಗ್ಗ: ಬಿಜೆಪಿ ಕಚೇರಿ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮನೆ ಮೇಲೆ ಪೋಸ್ಟರ್‌ ಅಂಟಿಸಿದ ಪ್ರಕರಣದ ಬೆನ್ನಿಗೆ ಕಾಂಗ್ರೆಸ್‌ ಕಚೇರಿಗೆ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕಾಂಗ್ರೆಸ್‌ ಕಚೇರಿ ಇರುವ ಇಂದಿರಾಗಾಂಧಿ ರಸ್ತೆಗೆ ಬ್ಯಾರಿಕೇಡ್‌ ಹಾಕಲಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ. (ಈ ಸುದ್ದಿಯನ್ನು ಇನ್ನು 33 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಜಿಲ್ಲಾ ಬಿಜೆಪಿ ಕಚೇರ ಮತ್ತು ಬೈಪಾಸ್‌ ರಸ್ತೆಯಲ್ಲಿರುವ ವಿಜಯೇಂದ್ರ ಅವರ ಮನೆ ಗೋಡೆಗಳ ಮೇಲೆ ಯುವ ಕಾಂಗ್ರೆಸ್‌ ಸಮಿತಿ ಹೆಸರಿನಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ರಾತ್ರೋರಾತ್ರಿ ಪೋಸ್ಟರ್‌ ಪ್ರತ್ಯಕ್ಷವಾಗಿತ್ತು. ಇನ್ನು ಬೆಂಗಳೂರಿನಲ ವಿವಿಧೆಡೆಯು ಇದೇ ಮಾದರಿ ಪೋಸ್ಟರ್‌ಗಳು ಕಾಣಿಸಿದ್ದವು. ಪೋಸ್ಟರ್‌ ವಾರ್‌ ಹಿನ್ನಲೆ ಈಗ ಶಿವಮೊಗ್ಗ ಕಾಂಗ್ರೆಸ್‌ ಕಚೇರಿಗೆ ಬಂದೋಬಸ್ತ್‌ ಒದಗಿಸಲಾಗಿದೆ.

Bandobast-near-Shivamogga-Congress-party-office

ಕಾಂಗ್ರೆಸ್‌ ಕಚೇರಿ ಸ್ವಲ್ಪ ದೂರದ ತನಕ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದರು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.