ಬ್ಯಾಂಕ್‌ಗೆ ₹1.10 ಲಕ್ಷ ದಂಡ ವಿಧಿಸಿದ ಶಿವಮೊಗ್ಗ ಗ್ರಾಹಕರ ನ್ಯಾಯಾಲಯ, ಕಾರಣವೇನು?

ಶಿವಮೊಗ್ಗ: ವಾಹನವನ್ನು ದೂರುದಾರರ ಹೆಸರಿಗೆ ವರ್ಗಾಯಿಸದೆ ಹಾಗೂ ಸೂಕ್ತ ಮಾಹಿತಿ ನೀಡದೆ ವಾಹನ ವಶಪಡಿಸಿಕೊಂಡು ಸೇವಾ ನ್ಯೂನತೆ ಎಸಗಿದ ಬ್ಯಾಂಕ್‌ಗೆ ಶಿವಮೊಗ್ಗದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹1.10 ಲಕ್ಷ ದಂಡ ಹಾಗೂ ಪರಿಹಾರ ಪಾವತಿಸುವಂತೆ ಆದೇಶಿಸಿದೆ.

ಏನಿದು ಪ್ರಕರಣ?

ಶಿವಮೊಗ್ಗ ತಾಲೂಕಿನ ಕುಸ್ಕೂರಿನ ನಿಖಿಲ್.ಆರ್ ಅವರು ಫಯಾಜ್ ಎಂಬುವವರಿಂದ ಐಷರ್ ಪ್ರೊ ಸರಕು ಸಾಗಣೆ ವಾಹನ ಖರೀದಿಸಿದ್ದರು. ಇದಕ್ಕೆ ಬ್ಯಾಂಕ್‌ನಿಂದ ₹13.50 ಲಕ್ಷ ಸಾಲ ಪಡೆದಿದ್ದರು. ಆರ್‌ಟಿಒ ಮೂಲಕ ವಾಹನವನ್ನು ನಿಖಿಲ್‌ ಅವರ ಹೆಸರಿಗೆ ವರ್ಗಾಯಿಸಿ ಕೊಡುವುದಾಗಿ ಬ್ಯಾಂಕ್ ಹಣ ಪಡೆದಿತ್ತು. ಆದರೆ ನಿಖಿಲ್‌ ಅರ ಹೆಸರಿಗೆ ವಾಹನವನ್ನು ವರ್ಗಾವಣೆ ಮಾಡಲು ವಿಳಂಬ ಮಾಡಿತ್ತು.

Shivamogga-Consumer-court

ವಾಹನ ಬಳಸದೆಯೂ ನಿಖಿಲ್‌ ಅವರು ₹90,000 ಇಎಂಐ ಪಾವತಿಸಿದ್ದರು. ಕೊನೆಗೆ ಕಂತು ಪಾವತಿಯಾಗಿಲ್ಲವೆಂಬ ನೆಪ ಒಡ್ಡಿ ಬ್ಯಾಂಕ್ ಸಿಬ್ಬಂದಿ ಮನೆಯ ಬಳಿ ನಿಲ್ಲಿಸಿದ್ದ ವಾಹನವನ್ನು ವಶಕ್ಕೆ ಪಡೆದಿದ್ದರು.

ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದರು

ವಾಹನವನ್ನು ವಶಕ್ಕೆ ಪಡೆದ ಹಿನ್ನೆಲೆ ನಿಖಿಲ್‌ ಅವರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಹಾಗೂ ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರ ಪೀಠವು, ಬ್ಯಾಂಕ್ ಸೇವಾ ನ್ಯೂನತೆಯನ್ನು ಎತ್ತಿಹಿಡಿದಿದೆ. ವಾಹನವನ್ನು ವಶಕ್ಕೆ ಪಡೆಯದೆ ನಿಖಿಲ್‌ ಹೆಸರಿಗೆ ದಾಖಲೆ ವರ್ಗಾಯಿಸಿ ವಶಕ್ಕೆ ನೀಡಬೇಕು. ಆರ್‌ಬಿಐ ನಿಯಮದಂತೆ ಇಎಂಐ ಮರು ನಿಗದಿಪಡಿಸಬೇಕು ಎಂದು ಸೂಚಿಸಿದೆ.

ನಿಖಲ್‌ ಅವರಿಗೆ ಮಾನಸಿಕ ಕಿರುಕುಳ ಪರಿಹಾರವಾಗಿ ₹1 ಲಕ್ಷ ಹಾಗೂ ಖರ್ಚುವೆಚ್ಚಕ್ಕಾಗಿ ₹10,000 ಸೇರಿದಂತೆ ಒಟ್ಟು ₹1.10 ಲಕ್ಷವನ್ನು 45 ದಿನಗಳೊಳಗೆ ಪಾವತಿಸಬೇಕು. ತಪ್ಪಿದ್ದಲ್ಲಿ ವಾರ್ಷಿಕ ಶೇಕಡಾ 10 ರಷ್ಟು ಬಡ್ಡಿ ಪಾವತಿಸಬೇಕೆಂದು ಆಯೋಗ ಆದೇಶಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Bhovi Samaja Prathiba Puraskara

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ