ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಸೆಪ್ಟಂಬರ್ 2020
ಪಿಎಂಎವೈ (ನಗರ) ಯೋಜನೆ ಅಡಿಯಲ್ಲಿ ಕೊಳಚೆ ಪ್ರದೇಶಗಳಲ್ಲಿನಿರ್ಮಾಣವಾಗುತ್ತಿರುವ ಮನೆಗಳು ಕಳಪೆಯಾಗಿವೆ. ಕೂಡಲೇ ಗುಣಮಟ್ಟದ ಕಾಮಗಾರಿಗೆ ನಡೆಸಬೇಕ ಎಂದು ಒತ್ತಾಯಿಸಿ ಶಾಂತಿನಗರ ನಾಗರಿಕ ಹಕ್ಕು ವೇದಿಕೆ ವತಿಯಿಂದ ವಿದ್ಯಾ ನಗರದಲ್ಲಿರುವ ಕೊಳಗೇರಿ ಅಭಿವೃದ್ಧಿ ಮಂಡಳಿ ಎದುರು ಪ್ರತಿಭಟನೆ ನಡೆಸಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಗರ ಯೋಜನೆ ಅಡಿಯಲ್ಲಿ ಫಲಾನುಭವಿಗಳ ಬಾಬ್ತಿನ ವಂತಿಕೆ ಯೊಂದಿಗೆ ಮನೆಗಳ ನಿರ್ಮಾಣವಾಗುತ್ತಿದೆ. ಈ ಕಾಮಗಾರಿಯು ಕಳಪೆಯಾಗಿದೆ. ನಿರ್ಮಾಣ ಹಂತದಲ್ಲಿಯೇ ಕಟ್ಟಡಗಳು ಕುಸಿಯುತ್ತಿವೆ. ಅಲ್ಲದೆ ಫಲಾನುಭವಿಗಳು ಪಕ್ಕಾ ಮನೆಗಳ ನಿರೀಕ್ಷೆಯಲ್ಲಿ ಮನೆಗಳನ್ನು ತೆರವು ಮಾಡಿಕೊಟ್ಟು ವರ್ಷಗಳೇ ಕಳೆದರೂ ಮನೆಗಳು ನಿರ್ಮಾಣ ಪೂರ್ಣಗೊಂಡಿಲ್ಲ ಎಂದು ದೂರಿದರು.
ಬಡ ಫಲಾನುಭವಿಗಳಿಂದ ಮರಳು, ಇಟ್ಟಿಗೆ, ಸಿಮೆಂಟ್, ಕಬ್ಬಿಣ ಸಾಮಗ್ರಿಗಾಗಿ ಸಾವಿರಾರು ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಸರ್ಕಾರದ ವತಿಯಿಂದ ನಡೆಯುತ್ತಿರುವ ಕಾಮಗಾರಿಗೆ ಫಲಾನುಭವಿಗಳು ತಮ್ಮ ಪಾಲಿನ ವಂತಿಕೆಯನ್ನು ಕೆಎಸ್ಡಿಬಿಗೆ ಸಂದಾಯ ಮಾಡಿದ್ದರೂ ಸಂಬಂಧಪಟ್ಟ ಇಂಜಿನಿಯರ್ಗಳು ಅಕ್ರಮವಾಗಿ ಹಣ ವಸೂಲಿ ನಡೆಸುತ್ತಿದ್ದಾರ ಎಂದು ಆರೋಪಿಸಿದರು.
ಕೂಡಲೇ ಕೊಳಚೆ ಅಭಿವೃದ್ಧಿ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದಿದ್ದರೆ ಫಲಾನುಭವಿಗಳೊಂದಿಗೆ ಕಚೇರಿಯ ಮುಂಭಾಗ ಟೆಂಟ್ ಹಾಕಿಕೊಂಡು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಧರಣಿಯಲ್ಲಿ ವೇದಿಕೆಯ ಮುಖಂಡರಾದ ರಾಮಣ್ಣ, ಸಾದಿಕ್, ಅಜರುದ್ದೀನ್, ಫೈರೋಜ್, ದಾದಾಪೀರ್, ಇಸ್ಮಾಯಿಲ್ ಹಾಗೂ ಇತರರು ಪ್ರತಿಭಟನೆಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]