ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 30 MAY 2024
SHIMOGA : ಆರ್ಯವೈಶ್ಯ ಮಹಾಜನ ಸಮಿತಿ ನೂರು ವರ್ಷ ಪೂರೈಸಿರುವ ಹಿನ್ನೆಲೆ ಶಿವಮೊಗ್ಗದ ನವ್ಯಶ್ರೀ ಸಭಾಂಗಣದಲ್ಲಿ ಜೂ.2ರಂದು ಶೆಟ್ಟರ ಸಂತೆ (Shettara Sante) ಕಾರ್ಯಕ್ರಮ ಆಯೋಜಿಸಲಾಗಿದೆ. ತಿಂಡಿ ತಿನಿಸು, ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ ಎಂದು ಸಮಿತಿಯ ಛೇರ್ಮನ್ ಪ್ರತಿಭಾ ಅರುಣ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಭಾ ಅರುಣ್, ಶೆಟ್ಟರ ಸಂತೆಯಲ್ಲಿ ಶೆಟ್ಟರ ಬ್ರ್ಯಾಂಡ್ ಚಕ್ಕುಲಿ, ಕೋಡುಬಳೆ, ಕಟ್ಲೆಟ್ಟು, ನಿಪ್ಪಟ್ಟು, ಮಸಾಲೆ ಮಂಡಕ್ಕಿ, ಬೋಂಡಾ ಮಸಾಲೆ, ಪಾನಿಪುರಿ, ಹೊಯ್ ಹಪ್ಪಳ, ಹಪ್ಪಳದ ಇಡ್ಲಿ, ಹೋಂ ಮೇಡ್ ಕೇಕ್ ಸೇರಿ ಹಲವು ಕುರುಕಲು ತಿಂಡಿಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ ಎಂದರು.
ಪ್ರತ್ಯೇಕ ಹಾಲ್‌ನಲ್ಲಿ ಸೀರೆಗಳು, ಡ್ರೆಸ್ ಮೆಟೀರಿಯಲ್, ಮಕ್ಕಳ ರೆಡಿಮೇಡ್ ಉಡುಪು, ವಸ್ತ್ರ ವಿನ್ಯಾಸಕಾರರ ವಿಶಿಷ್ಟತೆಗಳ ಕರಕುಶಲ ವಸ್ತುಗಳು, ಜೂಟ್ ಬ್ಯಾಗ್‌ಗಳು, ಬ್ಯೂಟಿ ಅಸೆಸರೀಸ್‌ಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಇದೆ ವೇಳೆ ವಿವಿಧ ಮನರಂಜನೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ ಎಂದು ಪ್ರತಿಭಾ ಅರುಣ್ ತಿಳಿಸಿದರು.
ಇಡೀ ದಿನ ಪ್ರದರ್ಶನ, ಮಾರಾಟ
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಪ್ರತಿಭಾ ಅರುಣ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈಶ್ವರವನದ ಎಂ.ವಿ.ನಾಗೇಶ್ ಮತ್ತು ಶಶಿಕಲಾ ದಂಪತಿ ಅವರು ಕುರುಕ್ ತಿಂಡಿ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಎನ್.ಚನ್ನಬಸಪ್ಪ ದಂಪತಿ ಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಆರ್ಯವೈಶ್ಯ ಮಹಾಜನ ಸಮಿತಿ ಅಧ್ಯಕ್ಷ ಭೂಪಾಳಂ ಶಶಿಧರ್, ವಿದ್ಯಾ ಸುದರ್ಶನ್, ಎಂ.ಜೆ.ಮಂಜುನಾಥ್, ನರೇಶ್, ನಾಗರಾಜ್ ಶೆಟ್ಟರ್ ಇದ್ದರು.
ಇದನ್ನೂ ಓದಿ – ಭದ್ರಾವತಿಯಲ್ಲಿ ಆಂಜನೇಯ ಸ್ವಾಮಿಯ ವೈಭವದ ರಥೋತ್ಸವ, ಏನೆಲ್ಲ ಪೂಜೆ ನಡೆಯಿತು?
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






