ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ, ತಾತ್ಕಾಲಿಕ ಮಾರ್ಗ ಪ್ರಕಟ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-Number-1-Website

SHIVAMOGGA LIVE NEWS | 5 DECEMBER 2023

SHIMOGA : ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ತಾಂತ್ರಿಕ ನಿರ್ವಹಣೆ ಹಿನ್ನೆಲೆ ಶಿವಮೊಗ್ಗ – ಭದ್ರಾವತಿ ನಡುವೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಡಿ.5 ರಿಂದ 7ರವರೆಗೆ ಈ ಮಾರ್ಗದಲ್ಲಿ ವಾಹನಗಳಿಗೆ ಪರ್ಯಾಯ ಮಾರ್ಗ (temporary route) ಸೂಚಿಸಲಾಗಿದೆ.

ಶಿವಮೊಗ್ಗದಿಂದ ಭದ್ರಾವತಿ ಮತ್ತು ಭದ್ರಾವತಿಯಿಂದ ಶಿವಮೊಗ್ಗಕ್ಕೆ ತೆರಳುವ ಕಾರು, ಟ್ಯಾಕ್ಸಿ ಹಾಗೂ ಇತರೆ ನಾಲ್ಕು ಚಕ್ರದ ವಾಹನಗಳು ಬಿಳಕಿ ಕ್ರಾಸ್‌ – ಲಕ್ಷ್ಮೀಪುರ – ಹೆಬ್ಬಂಡಿ – ವಿದ್ಯಾಧಿರಾಜ ಕಲ್ಯಾಣ ಮಂಟಪ – ಐಟಿಐ ಮಾರ್ಗವಾಗಿ ಭದ್ರಾವತಿ ಬಸ್‌ ನಿಲ್ದಾಣದ ಮಾರ್ಗದಲ್ಲಿ ಸಂಚರಿಸಬಹುದು.

ಕೆಎಸ್‌ಆರ್‌ಟಿಸಿ ಬಸ್‌, ಲಾರಿ, ಗೂಡ್ಸ್‌ ವಾಹನಗಳು ಅಂಡರ್‌ ಬ್ರಿಡ್ಜ್‌ – ಉಂಬ್ಳೆಬೈಲು ರಸ್ತೆ – ಕೃಷ್ಣಪ್ಪ ಸರ್ಕಲ್‌ ತಲುಪಿ ರಾಷ್ಟ್ರೀಯ ಹೆದ್ದಾರಿ 69ರ ಮೂಲಕ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅದೇಶಿಸಿದ್ದಾರೆ.

ಇದನ್ನೂ ಓದಿ – ಹೊಂಬುಜದಲ್ಲಿ ದೇವಿಗೆ ಚಿನ್ನದ ಸೀರೆ ಅರ್ಪಣೆ, ಲಕ್ಷ ದೀಪೋತ್ಸವ, ಹೇಗಿತ್ತು ವೈಭವ? ಹೇಗಿದೆ ಸೀರೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 5, 2023

Leave a Comment