SHIVAMOGGA LIVE | 5 JUNE 2023
SHIMOGA : ರಾಜ್ಯ ಸರ್ಕಾರ ವಿದ್ಯುತ್ ದರ (Power Price) ಹೆಚ್ಚಳ ಮಾಡಿರುವುದನ್ನು ಖಂಡಿಸಿ ಬಿಜೆಪಿ ನಗರ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಖಾಸಗಿ ಬಸ್ ನಿಲ್ದಾಣದ ಮುಂದೆ ಅಶೋಕ ಸರ್ಕಲ್ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡುವುದಾಗಿ ಭರವಸೆ ನೀಡಿದ್ದ ಸರ್ಕಾರ, ಈಗ ದರ (Power Price) ಏರಿಕೆ ಮಾಡಿದೆ. ಇದು ಖಂಡನೀಯ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಯಾರೆಲ್ಲ ಏನೇನು ಹೇಳಿದರು?
ವಿದ್ಯುತ್ ದರ ಹೆಚ್ಚಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕಿದೆ. ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ. ವಿದ್ಯುತ್ ದರ ಹೆಚ್ಚಳ ನಿರ್ಧಾರ ಹಿಂಪಡೆಯಬೇಕು. ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಸರ್ಕಾರ ಕೈ ಬಿಡಬೇಕು. ಕಾಂಗ್ರೆಸ್ನ ದುರಾಡಳಿತವನ್ನು ಬಿಜೆಪಿ ಸಹಿಸುವುದಿಲ್ಲ.ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ಶಾಸಕ
ಅವೈಜ್ಞಾನಿಕ ಭರವಸೆ ನೀಡಿ ಸುಳ್ಳಿನ, ದುರ್ಬಲ ಸರ್ಕಾರ ಅಧಿಕಾರಕ್ಕೆ ಬಂದಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದಿದ್ದರು. ಈಗ ವಿದ್ಯುತ್ ದರ ಹೆಚ್ಚಳ ಮಾಡಿ, ಜನರ ಕೋಪಕ್ಕೆ ತುತ್ತಾಗಿದ್ದಾರೆ. ಬಡವರು ದಡ್ಡರಲ್ಲ. ಅವರನ್ನು ಮೋಸ ಮಾಡುವ ಕೃತ್ಯಕ್ಕೆ ಕೈ ಹಾಕಬೇಡಿ.ಟಿ.ಡಿ.ಮೇಘರಾಜ್, ಬಿಜೆಪಿ ಜಿಲ್ಲಾಧ್ಯಕ್ಷ
ನಿರೀಕ್ಷೆಯಂತೆ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿದೆ. ಒಂದು ಕಡೆ ಉಚಿತವಾಗಿ ವಿದ್ಯುತ್ ಕೊಡುತ್ತೇವೆ ಎಂದು ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ಇದನ್ನೊಂದು ಕಡೆ ದರ ಹೆಚ್ಚಳ ಮಾಡಿದ್ದಾರೆ. ಉಚಿತವಾಗಿ ಕೊಡುವ ವಿದ್ಯುತ್ಗೆ ದರ ಹೆಚ್ಚಳ ಮಾಡಲು ಅವಶ್ಯಕತೆ ಏನಿದೆ?ಗಿರೀಶ್ ಪಟೇಲ್, ಬಿಜೆಪಿ ವಿಭಾಗ ಪ್ರಭಾರಿ
ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು ಉಚಿತ, ಖಚಿತ ಎನ್ನುತ್ತಿದ್ದರು. ಈಗ ಯಾವುದೂ ಉಚಿತವಿಲ್ಲ. ಇವರದ್ದು ವಚನಭ್ರಷ್ಟ ಸರ್ಕಾರ.ಜೋತಿ ಪ್ರಕಾಶ್, ಸೂಡಾ ಮಾಜಿ ಅಧ್ಯಕ್ಷ
ಬಿಜೆಪಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ಆರ್.ಸಿದ್ದರಾಮಣ್ಣ, ಮಾಲತೇಶ, ರಾಮು, ರಂಗಪ್ಪ, ದಿನೇಶ್, ಸುರೇಖಾ ಮುರಳೀಧರ್, ಪದ್ಮಿನಿ, ವಿನ್ಸಂಟ್, ಶರತ್ ಕಲ್ಯಾಣಿ, ದಿನೇಶ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ‘ಕಾರು, ಬೈಕ್ ಬದಲು ಮಕ್ಕಳನ್ನು ಸಾರ್ವಜನಿಕ ಸಾರಿಗೆಯಲ್ಲಿ ಕಳುಹಿಸಿʼ, ಸಾಹಿತಿ ಜಯಂತ್ ಕಾಯ್ಕಿಣಿ ಅಭಿಮತ, ಕಾರಣವೇನು?